ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಪರಿಕರದಿಂದ 5 ಸೆಕೆಂಡ್ ಗಳಲ್ಲಿ ಹೃದಯದ ಸಮಸ್ಯೆ ಪತ್ತೆ

By Mahesh
|
Google Oneindia Kannada News

ಬೆಂಗಳೂರು, ಜೂನ್ 22: ಹೃದಯಾಘಾತದಂಥ ಆತಂಕ ಎದುರಾಗುವ ಮುನ್ನ ಕರೊನರಿ ಅರ್ಟರಿ ರೋಗ ಪತ್ತೆಗೆ ಭಾರತೀಯ ಯುವಜನರಿಗೆ ನೆರವಾಗುವಂತೆ ಟಿಮ್ಕೆನ್ ಫೌಂಡೇಷನ್ ಸಂಸ್ಥೆಯು ಫಿಲಿಪ್ಸ್ ಉತ್ಪಾದಿಸಿದ ಅಲ್ಟ್ರಾಫಾಸ್ಟ್ ವೇಗದ 120 ಭಾಗದ ಆಧುನಿಕ ಸಿ.ಟಿ. ಸ್ಕ್ಯಾನರ್ ಅನ್ನು ನಾರಾಯಣ ಹೃದ್ರೋಗ ವಿಜ್ಞಾನ ಸಂಸ್ಥೆಗೆ ಕೊಡುಗೆ ನೀಡಿದೆ.ಈ ಪರಿಕರ ಕೇವಲ ಐದು ಸೆಕೆಂಡ್ ಗಳಲ್ಲಿ ಹೃದಯ ಸಮಸ್ಯೆಯನ್ನು ಗುರುತಿಸಲಿದೆ.

ಈ ಪರಿಕರವನ್ನು ವಿಶೇಷವಾಗಿ ಆಸ್ಪತ್ರೆಯ ರೇಡಿಯಾಲಜಿ ಮತ್ತು ಇಮೇಜಿಂಗ್ ವಿಭಾಗದಲ್ಲಿ, ಅಳವಡಿಸಲಿದ್ದು, ಟಿಮ್ಕೆನ್ ಕಂಪೆನಿಯ ಕಾರ್ಯ ನಿರ್ವಾಹಕ ಉಪನಿರ್ದೇಶಕ ಫಿಲಿಪ್ ಡಿ ಫ್ರಾಕಾಸಾ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಾರಾಯಣ ಹೆಲ್ತ್ ಸಿಟಿಯ ಹಿರಿಯ ಹೃದ್ರೋಗ ತಜ್ಞರು ಹಾಗೂ ಸ್ಥಾಪಕರು ಹಾಗೂ ಅಧ್ಯಕ್ಷರಾದ ಡಾ.ದೇವಿ ಶೆಟ್ಟಿ ಅವರು ಇದ್ದರು.

Timken Foundation joins hands with Narayana Hrudayalaya Foundation

ಅಲ್ಲದೆ, ಈ ಸಂದರ್ಭದಲ್ಲಿ ಟಿಮ್ಕೆನ್ ಇಂಡಿಯಾ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಕೋಲ್ ಅವರಿದ್ದರು. ಈ ಸೌಲಭ್ಯವು ಮಕ್ಕಳು ಮತ್ತು ವಯಸ್ಕರ್ಲಲಿ ಆರಂಭದಲ್ಲಿಯೇ ಹೃದಯ ಸಮಸ್ಯೆಯನ್ನು ಗುರುತಿಸಲು ಸಹಕಾರಿಯಾಗಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ದೇವಿಶೆಟ್ಟಿ ಅವರು, ಹೆಚ್ಚಿನ ಪ್ರಮಾಣದ ಭಾರತೀಯರು ಹೃದಯ ಸಮಸ್ಯೆಗೆ ಒಳಗಾತುತ್ತಿದಾರೆ.

ಯೂರೋಪಿಯನ್ ಗಳಿಗೆ ಹೋಲಿಸಿದರೆ ಭಾರತೀಯರು ಮೂರು ಪಟ್ಟು ಹೆಚ್ಚು ಈ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ಭಾರತೀಯ ಯುವಜನರು ಕಿರಿಯ ವಯಸ್ಸಿನಲ್ಲೇ ಈ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.

ಅದೃಷ್ಟವಶಾತ್ ಈಗ ಬಹುತೇಕ ಕರೊನರಿ ಆರ್ಟರಿ ರೋಗವನ್ನು ಅದು ಗಂಭೀರವಾಗುವ 10 ವರ್ಷ ಮೊದಲೇ ಪತ್ತೆ ಮಾಡಬಹುದು' ಎಂದರು. ದುರದೃಷ್ಟವಶಾತ್, ಈ ಪರೀಕ್ಷೆಯನ್ನು ಮಾಡಿಕೊಳ್ಳುವ ಸರಳವಾದ ಕ್ರಮವು ಲಭ್ಯವಿದೆ ಎಂಬುದು ಬಹುತೇಕರಿಗೆ ಅರಿವಿಲ್ಲದೇ ಇರುವುದು ಎಂದರು. ಇದೇ ಸಂದರ್ಭದಲ್ಲಿ ನಾರಾಯಣ ಹೆಲ್ತ್ ಸಿಟಿಯು, ಟಿಮ್ಕೆನ್ ಇಂಡಿಯಾ ಲಿಮಿಟೆಡ್ ಸಿಬ್ಬಂದಿಗಳಿಗಾಗಿ ಹೊರತಂದಿರುವ ಪ್ರಿವಿಲೇಜ್ ಕಾರ್ಡ್ ಅನ್ನು ಬಿಡುಗಡೆ ಮಾಡಿತು.

Timken Foundation joins hands with Narayana Hrudayalaya Foundation
ಭಾರತೀಯರು ಆರಂಭಿಕ ಹಂತದಲ್ಲಿಯೇ ಕರೊನರಿ ಆರ್ಟರಿ ಡಿಸೀಸ್ ಅನ್ನು ಪತ್ತೆ ಮಾಡಿಕೊಳ್ಳುವ ಮೂಲಕ ಅಪಾಯವನ್ನು ತಪ್ಪಿಸಿಕೊಳ್ಳಬೇಕೇಂಬುದು ಟಿಮ್ಕೆನ್ ಫೌಂಡೇಷನ್ ಬಯಕೆ' ಎಂದು ಫಿಲಿಪ್ ಫ್ರಾಕಾಸಾ ಅವರು ಹೇಳಿದರು. ಇದೇ ಕಾರಣಕ್ಕೆ ನಾವು ನಾರಾಯಣ ಹೃದಯಾಲಯಕ್ಕೆ 120 ಭಾಗದ ಅಲ್ಟ್ರಾಫಾಸ್ಟ್ ವೇಗದ ಸಿಟಿ ಸ್ಕ್ಯಾನ್ ಅನ್ನು ಒದಗಿಸಿದ್ದೇವೆ.

ಆಧುನಿಕ ಸಿಟಿ ಸ್ಕ್ಯಾನ್ ಕೆಳವರ್ಗದ ಜನರಿಗೂ ಕಡಿಮೆ ವೆಚ್ಚದಲ್ಲಿ ಲಭ್ಯವಿದೆ. ಅರ್ಹ ರೋಗಿಗಳಿಗೆ ಉಚಿತವಾಗಿಯೂ ಈ ಸೌಲಭ್ಯ ಕಲ್ಪಿಸಲಾಗುವುದು ಎಂದು ಡಾ. ದೇವಿ ಶೆಟ್ಟಿ ಅವರು ಹೇಳಿದರು.

Timken Foundation joins hands with Narayana Hrudayalaya Foundation

ನಾರಾಯಣ ಹೆಲ್ತ್ ಕುರಿತು: ಎಲ್ಲ ರೀತಿಯ ಸೂಪರ್ ಸ್ಪೆಷಾಲಿಟಿ ಚಿಕಿತ್ಸಾ ಸೌಲಭ್ಯದೊಂದಿಗೆ ನಾರಾಯುಣ ಹೆಲ್ತ್ ಈಗ ಎಲ್ಲ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಒಂದೇ ಕಡೆ ಚಿಕಿತ್ಸೆ ನೀಡಲಿದೆ. ಬೆಂಗಳೂರಿನಲ್ಲಿ ಮೊದಲಿಗೆ 225 ಹಾಸಿಗೆಗಳ ಸಾಮಥ್ರ್ಯದ ಆಸ್ಪತ್ರೆಯು 2000ರಲ್ಲಿ ಆರಂಭವಾಗಿದ್ದು, ಈಗ 56 ಕಡೆ ಕಾರ್ಯ ನಿರ್ವಹಿಸುತ್ತಿದೆ.

(ಭಾರತದಲ್ಲಿ 55 ಕಡೆ ಹಾಗೂ ಕೇಮನ್ ಐಲ್ಯಾಂಡ್‍ನಲ್ಲಿ ಕಂಪೆನಿಯ ಸಹವರ್ತಿ ಹೆಲ್ತ್ ಸಿಟಿ ಕೇಮನ್ ಐಲ್ಯಾಂಡ್ ಲಿಮಿಟೆಡ್ ನಿಂದ ನಿರ್ವಹಣೆ) ನಡೆಯುತ್ತಿದ್ದು, ಒಟ್ಟು ಹಾಸಿಗೆಗಳ ಸಾಮಥ್ರ್ಯ 5442 ಹಾಸಿಗೆಗಳು. ಒಟ್ಟು ಹಾಸಿಗೆಗಳ ಸಾಮಥ್ರ್ಯವನ್ನು 6,602ಕ್ಕೆ ಏರಿಸಲು ಅವಕಾಶವಿದೆ.

ನಾರಾಯಣ ಹೆಲ್ತ್ 23 ಹಾಸ್ಪಿಟಲ್‍ಗಳ ನೆಟ್‍ವರ್ಕ್ ಹೊಂದಿದೆ. ಅಲ್ಲದೆ, 8 ಹೃದ್ರೋಗ ಕೇಂದ್ರಗಳು (ಸೂಪರ್ ಸ್ಪೆಷಾಲಿಟಿ ಯೂನಿಟ್‍ಗಳು) ವಿವಿಧ 31 ಪಟ್ಟಣಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ವಿವರಗಳಿಗೆ ಸಂಪರ್ಕಿಸಿ: www.narayanahealth.org

English summary
Timken Foundation donated the latest 120 slice CT scanner manufactured by Philips to Narayana Institute of Cardiac Sciences in Bengaluru with an objective of encouraging young Indians to detect coronary artery disease before it causes a devastating heart attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X