• search

'ಅಡುಗೆ-ಬಚ್ಚಲು ಮನೆಯ ನೀರೇ ಧೈರ್ಯವಾಗಿ ಮತ್ತೆ ಬಳಸಿ'

By Srinivasa Mata
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಅಕ್ಟೋಬರ್ 12: ಬಾವಿಗಳು ಒಣಗಿದಾಗ ನಮಗೆ ನೀರಿನ ಬೆಲೆ ಗೊತ್ತಾಗುತ್ತದೆ ಎಂದು ಆಧುನಿಕ ಅಮೆರಿಕದ ನಿರ್ಮಾತೃಗಳಲ್ಲಿ ಪ್ರಮುಖರಾದ ಬೆಂಜಮಿನ್ ಫ್ರಾಂಕ್ಲಿನ್ ಒಮ್ಮೆ ಹೇಳಿದ್ದರು. ಈಗ ಭಾರತದ ಜನಸಂಖ್ಯೆ ಬೆಳೆಯುತ್ತಿರುವ ವೇಗ ಗಮನಿಸಿದರೆ ನೀರಿನ ಕೊರತೆ ಎದುರಿಸುವ ಸಮಯ ಬಹಳ ದೂರವೇನೂ ಇಲ್ಲ ಅನಿಸುತ್ತದೆ.

  ಮನೆಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಿಕೊಳ್ಳುವುದು ನೀರಿನ ಕೊರತೆ ಎದುರಿಸಲು ಸಜ್ಜಾಗಬಹುದಾದ ಮೊದಲ ಆಯ್ಕೆ. ಆದರೆ ಇದನ್ನೇ ನಗರ ಪ್ರದೇಶದ ಅಪಾರ್ಟ್ ಮೆಂಟ್ ಗಳಿಗೆ ಹಾಗೂ ವಸತಿ ಸಮುಚ್ಚಯಗಳಿಗೆ ಅಳವಡಿಸುವುದು ಅಷ್ಟು ಸುಲಭವಲ್ಲ.

  ಬೆಂಗಳೂರಿಗೆ ಮಳೆ ಹಾವಳಿ ಜತೆಗೆ ಕುಡಿಯುವ ನೀರಿನ ಸಮಸ್ಯೆ

  ಒಂದು ಉದಾಹರಣೆ ಕೇಳಿ, ನೂರು ಕುಟುಂಬ ಇರುವ ಅಪಾರ್ಟ್ ಮೆಂಟ್ ವೊಂದರಲ್ಲಿ ಪ್ರತಿ ದಿನ ಬಳಕೆಯಾಗುವ ನೀರಿನ ಪ್ರಮಾಣವು ಮಳೆ ನೀರು ಸಂಗ್ರಹಕ್ಕಿಂತ ಖಂಡಿತಾ ಹೆಚ್ಚಾಗುತ್ತದೆ. ಜತೆಗೆ ಮಳೆ ನೀರು ಸಂಗ್ರಹಕ್ಕೆ ವ್ಯವಸ್ಥೆ ಮಾಡಲು ಬಹಳ ಹಣ ಹಾಗೂ ಸ್ಥಳ ಎರಡೂ ಬೇಕಾಗುತ್ತವೆ.

  Time to Drink Your Recycled Water!

  ಹಾಗಿದ್ದರೆ ಇದಕ್ಕೆ ಏನು ಪರಿಹಾರ ಅನ್ನೋದಾದರೆ, ನೀರಿನ ಪುನರ್ ಬಳಕೆ ಮಾಡುವುದು. ಹೀಗಂದ ತಕ್ಷಣ ಮೂಗು ಮುರಿಯುತ್ತಾರೆ. ಕುಡಿಯುವುದಕ್ಕೆ, ದಿನ ಬಳಕೆಗೆಲ್ಲ ಇಂಥ ನೀರು ಬಳಸೋದಾ ಎಂದು ಪ್ರಶ್ನಿಸುತ್ತಾರೆ. ಏಕೆಂದರೆ ಪುನರ್ ಬಳಕೆಯ ಪ್ರಕ್ರಿಯೆ ಸರಿಯಾಗಿ ಆಗಬೇಕಾಗುತ್ತದೆ.

  ಹಾಗೆ ಆಗದಿದ್ದಲ್ಲಿ ನೀರಿನ ಬಣ್ಣ, ವಾಸನೆಯೇ ಬೇರೆಯಾಗುತ್ತದೆ. ಬೆಂಗಳೂರಿನಂಥ ನಗರದಲ್ಲಿ ತಮ್ಮ ಮನೆಯ ಕಾಂಪೌಂಡ್ ಗಳಲ್ಲೇ ನೀರು ಪುನರ್ ಬಳಕೆಗೆ ಬೇಕಾಗುವ ಯಂತ್ರಗಳನ್ನು ಅಳವಡಿಸಿಕೊಂಡಿದ್ದಾರೆ. ಮತ್ತು ಆ ನೀರನ್ನು ಶೌಚಾಲಯಗಳಲ್ಲಿ, ಗಿಡಗಳಿಗೆ ಹಾಕಲು ಬಳಸಲಾಗುತ್ತದೆ. ಪುನರ್ ಬಳಕೆ ಎಂಬುದು ಪರಿಣಾಮಕಾರಿಯಾಗಿ ಆದರೆ ಪ್ರತಿ ನಗರದ ನೀರಿನ ಸಮಸ್ಯೆ ನಿವಾರಿಸಬಹುದು.

  ನೆಲಮಂಗಲದಲ್ಲಿ ಮಳೆ ಆರ್ಭಟಕ್ಕೆ ಗಾಬರಿ ಬಿದ್ದವರು ಹೇಳಿಕೊಂಡ ಅನುಭವ

  ಟ್ರಾನ್ಸ್ ವಾಟರ್ಸ್ ಪ್ರೈವೇಟ್ ಲಿಮಿಟೆಡ್- ಇದನ್ನು ಈ ಹಿಂದೆ ಬ್ಲೋರ್ ಬೈ ಎಂದು ಕರೆಯಲಾಗುತ್ತಿತ್ತು. ಈ ಕಂಪನಿಯವರು ನೀರಿನ ಪುನರ್ ಬಳಕೆಗೆ ಬೇಕಾಗುವ ಯಂತ್ರಗಳನ್ನು ಜೇಬಿಗೂ ಹೊರೆಯಾಗದ ಬೆಲೆಗೆ ತಲುಪಿಸುತ್ತಿದ್ದಾರೆ. ಜತೆಗೆ ಪರಿಸರದ ಮೇಲೂ ಯಾವುದೇ ಮಾರಕ ಆಗದ ರೀತಿಯಲ್ಲಿ ಕಾಳಜಿ ವಹಿಸಲಾಗುತ್ತಿದೆ.

  ಇಂಥ ಯೋಜನೆಯ ಹಿಂದೆ ಕೆಲಸ ಮಾಡಿರುವುದು ವಿಕಾಸ್ ಬ್ರಹ್ಮಾವರ್ ಎಂಬುವವರ ಮೆದುಳು. ನೀರನ್ನು ಎಷ್ಟು ಸಹಜವಾಗಿ ಇರಿಸಿಕೊಳ್ಳಲು ಸಾಧ್ಯವೋ ಅಷ್ಟು ಸ್ವಾಭಾವಿಕವಾಗಿ ಇಟ್ಟುಕೊಳ್ಳುವುದು ಕಂಪನಿಯ ಉದ್ದೇಶ.

  "ಈ ರೀತಿ ನೀರಿನ ಪುನರ್ ಬಳಕೆ ಸರಿ ಹೋಗುವುದಿಲ್ಲ ಎಂಬ ಮನಸ್ಥಿತಿ ಬದಲಾಗ ಬೇಕಿದೆ. ಎಸ್ ಟಿಪಿಯ ನೀರು ಪೂರ್ಣ ಪ್ರಮಾಣದಲ್ಲಿ ಶುದ್ಧ ಆಗಿರುವುದಿಲ್ಲ ಎಂಬುದೇ ವಿಷಾದನೀಯ ಸಂಗತಿ. ಆ ಕಾರಣಕ್ಕೆ ನೀರಿನ ಬಣ್ಣ ಹಾಗೂ ವಾಸನೆಯೇ ಒಂದು ಥರಾ ಆಗಿರುತ್ತದೆ. ಅಂಥ ಸನ್ನಿವೇಶದಲ್ಲೇ ನಾವು ಪ್ರವೇಶ ಮಾಡುತ್ತೀವಿ" ಎನ್ನುತ್ತಾರೆ ವಿಕಾಸ್.

  ನಮ್ಮಲ್ಲಿ ಹಲವರಿಗೆ ತಮ್ಮ ತಾಯ್ನಾಡಿಗೆ ಬಂದು ಏನಾದರೂ ಒಳ್ಳೆ ಕೆಲಸ ಮಾಡಬೇಕು ಅಂತ ಇರುತ್ತದೆ. ಅಂಥವರಲ್ಲಿ ನಾನೂ ಒಬ್ಬ. ಇಲ್ಲಿಗೆ ಬಂದ ನಂತರ ಗೊತ್ತಾಯ್ತು ದಿನಕ್ಕೆ ಸಾವಿರಾರು ಲೀಟರ್ ನಷ್ಟು ನೀರು ಹಾಗೇ ನೆಲದಲ್ಲಿ ಇಂಗಿ ಹೋಗುತ್ತದೆ. ಅಂತರ್ಜಲದ ಮಟ್ಟ ದಿನೇದಿನೇ ಕುಸಿತ ಕಾಣುತ್ತಿರುವ ಈ ಕಾಲಘಟ್ಟದಲ್ಲಿ ನಾವು ಏನಾದರೂ ಮಾಡಲೇಬೇಕು ಎಂದು ನಿರ್ಧರಿಸಿದೆ ಎನ್ನುತ್ತಾರೆ ವಿಕಾಸ್.

  ಈಗ ಅಮೆರಿಕದಿಂದ ತರಿಸುವ ಪೇಟೆಂಟ್ ಇರುವ ನೀರು ಶುದ್ಧೀಕರಣ ಘಟಕವು ಎರಡು ಹಂತದ ಪ್ರಕ್ರಿಯೆಯಲ್ಲಿ ಪುನರ್ ಬಳಕೆಯ ನೀರಿನ ಶುದ್ಧತೆಯನ್ನು ಅಚ್ಚರಿಯ ರೀತಿಯಲ್ಲಿ ಬದಲಿಸಿರುತ್ತದೆ. ಆ ನಂತರದ ಪ್ರಕ್ರಿಯೆಯಲ್ಲಿ ಮತ್ತೂ ಶುದ್ಧವಾಗುತ್ತದೆ. ಸಣ್ಣ ಪ್ರಮಾಣದಲ್ಲೂ ನೀರು ವ್ಯರ್ಥವಾಗುವುದಿಲ್ಲ ಎಂಬುದು ವಿಕಾಸ್ ಭರವಸೆ.

  ನಮಗೆ ಸಿಗುತ್ತದೆ ಎಂಬ ಕಾರಣಕ್ಕೆ ನೀರಿನ ಬೆಲೆ ಗೊತ್ತಾಗುತ್ತಿಲ್ಲ. ಈ ರೀತಿಯ ನೀರು ಶುದ್ಧೀಕರಣ ತಂತ್ರಜ್ಞಾನವನ್ನು ಸಿಂಗಾಪೂರ್, ಅಮೆರಿಕ, ನಮೀಬಿಯಾ ಸೇರಿದಂತೆ ಹಲವು ದೇಶಗಳಲ್ಲಿ ಬಳಸಲಾಗುತ್ತಿದೆ. ಇನ್ನೇನು ಕೆಲವೇ ಸಮಯದಲ್ಲಿ ನಮ್ಮಲ್ಲೂ ಬಳಕೆ ವ್ಯಾಪಕವಾಗುತ್ತದೆ ಎಂಬ ವಿಶ್ವಾಸ ಅವರದು.

  ಟ್ರಾನ್ಸ್ ವಾಟರ್ಸ್ ನಲ್ಲಿ ವಿಕಾಸ್ ಸೇರಿದಂತೆ ಎಂಟು ಮಂದಿಯ ತಂಡವಿದೆ. ಕಳೆದ ಒಂಬತ್ತು ವರ್ಷದಿಂದ ನಾನೂರಕ್ಕೂ ಹೆಚ್ಚು ಗ್ರಾಹಕರಿಗೆ ಈ ತಂಡ ನೆರವಾಗುತ್ತಿದೆ. ಮನೆ, ಅಪಾರ್ಟ್ ಮೆಂಟ್, ವಿಲ್ಲಾ, ಕಾರ್ಖಾನೆ, ಕಂಪನಿ... ಹೀಗೆ ಆಯಾ ಗ್ರಾಹಕರಿಗೆ ತಕ್ಕ ಹಾಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ನೀರಿನ ಪುನರ್ ಬಳಕೆ ಬಗ್ಗೆ ನಂಬಿಕೆ ಹಾಗೂ ಧೈರ್ಯ ಮೂಡಿಸುತ್ತಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  TransWaters Private Limited focuses on providing people with the best and economical water treatment solutions with least environmental impact. The brainchild of Vikas Brahmavar, the company believes in keeping the water as natural as possible with all non-desirable properties removed or reduced to desirable levels depending on the application or requirement.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more