ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವನ್ಯಜೀವಿ ಪ್ರಿಯರಿಗೊಂದು ಸಿಹಿಸುದ್ದಿ ಸಫಾರಿ ಇನ್ನುಮುಂದೆ ಅಗ್ಗ!

|
Google Oneindia Kannada News

ಬೆಂಗಳೂರು, ನವೆಂಬರ್ 15 : ಕರ್ನಾಟಕದಲ್ಲಿರುವ ಹುಲಿ ಸಂರಕ್ಷಿತ ಪ್ರದೇಶ, ವನ್ಯಧಾನ ಮತ್ತು ಅಭಯಾರಣ್ಯಗಳಲ್ಲಿ ಸಫಾರಿ ಇನ್ನುಮುಂದೆ ಅಗ್ಗವಾಗಲಿದೆ. ಪ್ರಾಣಿಗಳ ಚಿತ್ರಗಳನ್ನು ತೆಗೆಯಲು ತಗುಲುವ ವೆಚ್ಚ ಕೂಡ ಕಡಿಮೆಯಾಗಲಿದೆ.

ಬಂಡೀಪುರ, ಕಾಳಿ, ಭದ್ರ, ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ, ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ಈ 5 ಹುಲಿ ಸಂರಕ್ಷಿತ ಪ್ರದೇಶಗಳಿಗೆ ವ್ಯಕ್ತಿಗೆ 250ರೂ. ಪ್ರವೇಶ ಶುಲ್ಕವನ್ನು ನಿರ್ಧರಿಸಲಾಗಿದೆ.

ಬಂಡೀಪುರದಲ್ಲಿ ಟೀಗೆ 20, ಪಾಪ್‍ ಕಾರ್ನ್ ಗೆ 50, ಊಟಕ್ಕೆ 100 ರುಪಾಯಿಬಂಡೀಪುರದಲ್ಲಿ ಟೀಗೆ 20, ಪಾಪ್‍ ಕಾರ್ನ್ ಗೆ 50, ಊಟಕ್ಕೆ 100 ರುಪಾಯಿ

ರಾಷ್ಟ್ರೀಯ ಉದ್ಯಾನ, ವನ್ಯಧಾಮಗಳಾಗಿರುವ ಬನ್ನೇರುಘಟ್ಟ, ಕುದುರೇಮುಖ, ಕಾವೇರಿ ವನ್ಯಧಾಮಗಳಿಗೆ ವ್ಯಕ್ತಿಗೆ 150ರೂ ಶುಲ್ಕವನ್ನು ಇರಿಸಲಾಗಿದೆ.

Tiger Safari now cheaper in Karnataka

ಈ ತಿಂಗಳಿನಿಂದಲೇ ಇವೆಲ್ಲಾ ಶುಲ್ಕವು ಅನ್ವಯವಾಗಲಿದೆ. ಸಫಾರಿ ಹಾಗೂ ಕ್ಯಾಮರಾಗಳನ್ನು ತೆಗೆದುಕೊಂಡು ಹೋಗಲು ನೀಡಬೇಕಾದ ಶುಲ್ಕವನ್ನು ಅಕ್ಟೋಬರ್ ನಲ್ಲಿ ಪರಿಷ್ಕರಿಸಲಾಗಿತ್ತು. ಆದರೆ ಹೆಚ್ಚಿಸಲಾದ ಹಣವನ್ನು ಪಾವತಿಸಲು ಸಾಧ್ಯವಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

ನವೆಂಬರ್ 1ರಿಂದ ಬಂಡೀಪುರ ಸಫಾರಿ ದುಬಾರಿ

ಹಾಗಾಗಿ ಈಗ ನವೆಂಬರ್ ನಲ್ಲಿ ಮತ್ತೊಮ್ಮೆ ದರವನ್ನು ಪರಿಷ್ಕರಿಸಲಾಗಿದೆ. ಸಫಾರಿಗೆ ಈಗಾಗಲೇ 300ರೂ ನಿಗದಿಪಡಿಸಲಾಗಿತ್ತು ಆದರೆ ಈ ಪರಿಷ್ಕರಣೆ ನಂತರ 100ರೂ.ಗೆ ಇಳಿಕೆ ಮಾಡಲಾಗಿದೆ. ನಾಗರಹೊಳೆ ಹೊರತು ಪಡಿಸಿ ಉಳಿದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಕೇವಲ 50 ಶುಲ್ಕವನ್ನು ನೀಡಿ ಪ್ರಾಣಿಗಳನ್ನು ಹತ್ತಿರದಿಂದ ವೀಕ್ಷಿಸಬಹುದಾಗಿದೆ.

ಈ ಶುಲ್ಕವು ಕೇವಲ ಇಲಾಖೆಯ ವಾಹನಗಳಲ್ಲಿ ತೆರಳುವವರಿಗೆ ಅನ್ವಯವಾಗಲಿದೆ. ಪ್ರತಿ ಎರಡು ಅಥವಾ ಮೂರು ತಿಂಗಳಿಗೊಮ್ಮೆ ನಾಗರಹೊಳೆ, ಬಂಡೀಪುರಗಳಿಗೆ ಕುಟುಂಬದೊಂದಿಗೆ ಬರುವವರಿಗೆ ಪ್ರತಿ ವ್ಯಕ್ತಿಗೆ ೩೦೦ರೂ. ಪಾವತಿಸಲು ಕಷ್ಟವಾಗುತ್ತಿತ್ತು. ಆದರೆ ಈಗ ಶೇ.50ರಷ್ಟು ಶುಲ್ಕವನ್ನು ಕಡಿಮೆ ಮಾಡಲಾಗಿದೆ.

ಕೇವಲ 200ರೂ ನೀಡಿ 70 ಎಂಎಂ ವರೆಗಿನ ಕ್ಯಾಮೆರಾಗಳನ್ನು ತೆಗೆದುಕೊಂಡು ಹೋಗಬಹುದು. ಬಂಡೀಪುರ ನಾಗರಹೊಳೆಗಳಲ್ಲಿ ಸಫಾರಿ ಮಾಡಲು ಸ್ವಂತ ಜೀಪು ಅಥವಾ ಕಾರುಗಳಲ್ಲಿ ತೆರಳಲು ಒಂದು ಟ್ರಿಪ್ ಗೆ 1,100ರೂ. ನೀಡಬೇಕಾಗುತ್ತದೆ. ಇನ್ನು ಬಸ್ ಗಳಲ್ಲಿ ತೆರಳಲು 1650 ರಿಂದ 2750ರೂ.ಗಳನ್ನು ಶುಲ್ಕವನ್ನು ಪಾವತಿಸಬೇಕಾಗಿದೆ.

ಪ್ರವೇಶ ಶುಲ್ಕ ಹುಲಿ ಸಂರಕ್ಷಿತ ಪ್ರದೇಶ 250 ರೂ.
ಪ್ರವೇಶ ಶುಲ್ಕ ರಾಷ್ಟ್ರೀಯ ಉದ್ಯಾನ, ಅಭಯಾರಣ್ಯಗಳು 150ರೂ.
ಇನ್ನಿತರೆ ಪಕ್ಷಿಧಾಮಗಳು 25ರೂ.
ಸಫಾರಿ ಇಲಾಖೆ ವಾಹನಗಳು ವಯಸ್ಕರಿಗೆ 100, ಮಕ್ಕಳಿಗೆ 50
ಸಫಾರಿ ಇಲಾಖೆ ಜೀಪುಗಳು 200ರೂ.
ಕ್ಯಾಮರಾ ಶುಲ್ಕ 70 ಎಂಎಂವರೆಗೆ 200ರೂ.
ಕ್ಯಾಮೆರಾ ಶುಲ್ಕ 70 ಎಂಎಂನಿಂದ 200 ಎಂಎಂವರೆಗೆ 400ರೂ.

English summary
Taking a safari ride in karnataka's tiger reserve and wildlife sancturies has become cheaper.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X