ನಮ್ಮ ಮೆಟ್ರೋ ಟಿಕೆಟ್, ಸ್ಮಾರ್ಟ್ ಕಾರ್ಡ್ ಬಗ್ಗೆ ಉಪಯುಕ್ತ ಮಾಹಿತಿ

Posted By:
Subscribe to Oneindia Kannada

ಬೆಂಗಳೂರಿನ ಹೊಸತೊಂದು ಹಿರಿಮೆಯ ಗರಿಯಾಗಿರುವ ಮೆಟ್ರೋ ರೈಲು ಸಂಪರ್ಕ ದಿನಗಳೆದಂತೆ ಈ ಮಹಾನಗರದಲ್ಲಿ ತನ್ನ ವಿಸ್ತಾರವನ್ನು ಹಂತಹಂತವಾಗಿ ಹೆಚ್ಚಿಸಿಕೊಳ್ಳುತ್ತಿದೆ. ಜೊತೆಜೊತೆಗೆ ಜನಪ್ರಿಯತೆಯನ್ನೂ...

ಈಗಾಗಲೇ ತನ್ನ ಅಸ್ತಿತ್ವದಲ್ಲಿರುವ ತನ್ನ ಮಾರ್ಗಗಳಲ್ಲಿನ ಜನರ ಹೃದಯವನ್ನು ಗೆದ್ದಿರುವ ನಮ್ಮ ಮೆಟ್ರೋವನ್ನು ಈಗ ಇತರ ಭಾಗಗಳ ಜನರೂ ಸ್ವಾಗತಿಸಲು ಕಾಯುತ್ತಿದ್ದಾರೆ. ಮೆಟ್ರೋ ಯೋಜನೆಗೆ ಒಳಪಡೆದ ನಾಗರಿಕರು ಅಯ್ಯೋ ನಮ್ಮ ಪ್ರಾಂತ್ಯಕ್ಕೆ ನೇರವಾಗಿ ಈ ಅನುಕೂಲತೆ ಇದ್ದಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು ಎಂದು ಹಲುಬುವಂತಾಗಿದೆ.

ಕೊನೆಗೂ ಸಿಕ್ತು ಮುಹೂರ್ತ: ನಮ್ಮ ಮೆಟ್ರೋ ಮೊದಲ ಹಂತ ಲೋಕಾರ್ಪಣೆ ಜೂ.17ಕ್ಕೆ

ಒಂದೇ ಮಾತಿನಲ್ಲಿ ಹೇಳಬಹುದಾದರೆ, ಕೆಲವಾರು ವರ್ಷಗಳ ಹಿಂದೆ ಮೆಟ್ರೋ ನಿರ್ಮಾಣಕ್ಕಾಗಿ ರಸ್ತೆ ಮಗ್ಗುಲಲ್ಲಿ ಗುಂಡಿ ತೋಡಿ ಸಂಚಾರಕ್ಕೆ ಭಾರೀ ತೊಂದರೆಯಾಗಿದ್ದಾಗಲೆಲ್ಲಾ ಮನಸ್ಸಿನಲ್ಲೇ ಬಯ್ದುಕೊಳ್ಳುತ್ತಿದ್ದ ಜನರು ಈಗ ಮೆಟ್ರೋನ ಅನುಕೂಲ ನೋಡಿ ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.

''ಅದ್ಯಾವುದೋ ಮೆಟ್ರೋ ಅಂತ ಬರುತ್ತಂತಪ್ಪಾ... ಆ ರೈಲು ಸೀದಾ ಮನೆ ಒಳಿಕ್ಕೇ ಬಂದು ಜನರನ್ನ ಹತ್ತಿಸ್ಕೊಂಡು ಹೋಗುತ್ತಂತೆ'' ಅಂತೆಲ್ಲಾ ಗೇಲಿ ಮಾಡುತ್ತಿದ್ದರೂ ಇಂದು ಮೆಟ್ರೋದ ನಿಶ್ಯಬ್ದ ಸಂಚಾರಕ್ಕೆ ಮರುಳಾಗಿದ್ದಾರೆ.

ಆದರೂ, ಮೆಟ್ರೋ ರೈಲು ನಿತ್ಯ ಸಂಚರಿಸುವ ಹಲವಾರು ಪ್ರಾಂತ್ಯಗಳ ಜನರಿಗೆ ಅಲ್ಲಿನ ಟಿಕೆಟ್ ವ್ಯವಸ್ಥೆ ಹೇಗೆ ಎಂಬುವ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ. ಅಚ್ಚರಿಯಾದರೂ ಇದು ಸತ್ಯ. ಏಕೆಂದರೆ, ಅವರಿನ್ನೂ ಮೆಟ್ರೋಗೆ ಒಗ್ಗಿಕೊಂಡಿಲ್ಲ ಅಥವಾ ಒಗ್ಗಿಕೊಳ್ಳುವ ಅವಕಾಶ ಸಿಕ್ಕಿಲ್ಲ. ಆದರೂ, ಮನದಾಳದಲ್ಲಿ ಆಸೆಯಂತೂ ಇದ್ದೇ ಇರುತ್ತದೆ. ಅದರಲ್ಲೊಮ್ಮೆಯಾದರೂ ಸಂಚರಿಸಿ ನೋಡಬೇಕು ಅಂತ. ಅದು ಮಾತ್ರ ಸುಳ್ಳಲ್ಲ.

'ನಮ್ಮ ಮೆಟ್ರೋ' ಬಿಎಂಆರ್ ಸಿಎಲ್ ಉದ್ಯೋಗಕ್ಕೆ ಅರ್ಜಿ ಹಾಕಿ

ಹಾಗಾಗಿ, ಎಲ್ಲರಿಗೂ ಅನುಕೂಲವಾಗುವ ದೃಷ್ಟಿಯಿಂದ ಅಲ್ಲಿನ ಟಿಕೆಟ್ ದರಗಳು, ಸ್ಮಾರ್ಟ್ ಕಾರ್ಡ್, ಕಾಂಬೋ ಕಾರ್ಡುಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿ ನೀಡಲಾಗಿದೆ.

ಸ್ಮಾರ್ಟ್ ಕಾರ್ಡ್ ಗಳಿಗೆ ಕಾಂಟ್ಯಾಕ್ಟ್ ಲೆಸ್ ಸ್ಮಾರ್ಟ್ ಗಳೆಂದೂ ಹೆಸರು

ಸ್ಮಾರ್ಟ್ ಕಾರ್ಡ್ ಗಳಿಗೆ ಕಾಂಟ್ಯಾಕ್ಟ್ ಲೆಸ್ ಸ್ಮಾರ್ಟ್ ಗಳೆಂದೂ ಹೆಸರು

ಮೆಟ್ರೋ ಪ್ರಯಾಣಕ್ಕಾಗಿ ನಾವು ಭರಿಸುವ ಹಣವನ್ನು ಎರಡು ರೀತಿಯಾಗಿ ನೀಡಬಹುದು. ಮೊದಲನೆಯದ್ದು, ನೇರವಾಗಿ ಟೋಕನ್ ಖರೀದಿಸುವ ಮೂಲಕ. ಮತ್ತೊಂದು ಸ್ಮಾರ್ಟ್ ಕಾರ್ಡ್ ಮೂಲಕ. ಈ ಸ್ಮಾರ್ಟ್ ಕಾರ್ಡ್ ಗಳನ್ನು 'ಮೆಟ್ರೋ' ಭಾಷೆಯಲ್ಲಿ ಕಾಂಟ್ಯಾಕ್ಟ್ ಲೆಸ್ ಸ್ಮಾರ್ಟ್ ಕಾರ್ಡುಗಳೆಂದು ಕರೆಯುತ್ತಾರೆ.

ಕೌಂಟರ್ ನಲ್ಲೇ ಟೋಕನ್ ಖರೀದಿಸಬೇಕು

ಕೌಂಟರ್ ನಲ್ಲೇ ಟೋಕನ್ ಖರೀದಿಸಬೇಕು

ಟೋಕನ್ ಗಳನ್ನು ಯಾವುದೇ ಪ್ರಯಾಣದ ಆರಂಭಿಕ ನಿಲ್ದಾಣದಲ್ಲಿ ನೀಡಲಾಗುತ್ತದೆ. ಪ್ರತಿಯೊಂದು ಕೌಂಟರಿನಲ್ಲೂ ಇದಕ್ಕಾಗಿ ಪ್ರತ್ಯೇಕ ಕೌಂಟರ್ ಗಳಿರುತ್ತವೆ. ಪ್ರಯಾಣಿಕರು ಕೌಂಟರ್ ಗೆ ತೆರಳಿ ಹಣ ನೀಡಿ ಈ ಟೋಕನ್ ಗಳನ್ನು ಪಡೆಯಬೇಕು. ನೆನಪಿಡಿ... ಬಿಎಂಟಿಸಿ ಬಸ್ಸುಗಳಲ್ಲಿ ಬಂದ ಹಾಗೆ ಕಂಡಕ್ಟರ್ ಎಂಬಂಥವನೊಬ್ಬ ಮೆಟ್ರೋನಲ್ಲೂ ಬರುತ್ತಾನೆ. ನಾವು ರೈಲು ಹತ್ತಿದ ಮೇಲೆ ಅಂಥ ಕಂಡಕ್ಟರ್ ಗಳಿಂದ ನಾವು ಟೋಕನ್ ಖರೀದಿಸಬೇಕು ಎಂಬ ವ್ಯವಸ್ಥೆ ಇರುವುದಿಲ್ಲ. ಅಂದಹಾಗೆ, ಈ ಟೋಕನ್ ಗಳು ಒಂದು ಅಥವಾ ಎರಡು ಪ್ರಯಾಣ ಮಾಡುವವರಿಗೆ, ಅಪರೂಪಕ್ಕೆ ಮೆಟ್ರೋ ರೈಲು ಹತ್ತುವವರಿಗೆ ಹೆಚ್ಚು ಅನುಕೂಲಕರ. ಆದರೆ, ಬಹು ಪ್ರಯಾಣ ಕೈಗೊಳ್ಳುವವರು ಸ್ಮಾರ್ಟ್ ಕಾರ್ಡ್ ಪಡೆದರೆ ಉತ್ತಮ.

ಬೆಂಗಳೂರು ಮೆಟ್ರೋ ರೈಲು ಎಂಬ ಅದ್ಭುತ ಜಗತ್ತು, ಅಪರಿಚಿತ ಮುಖಗಳು....

ಹಲವಾರು ಅಡ್ಡಾಡುವವರಿಗೆ ಇವು ಹೆಚ್ಚು ಉಪಯುಕ್ತ

ಹಲವಾರು ಅಡ್ಡಾಡುವವರಿಗೆ ಇವು ಹೆಚ್ಚು ಉಪಯುಕ್ತ

ಮೇಲೆ ತಿಳಿಸಿದಂತೆ, ಸ್ಮಾರ್ಟ್ ಕಾರ್ಡ್ ಗಳು ಮೆಟ್ರೋದಲ್ಲಿ ಬಹು ಪ್ರಯಾಣ ಮಾಡುವವರಿಗೆ ಹೆಚ್ಚು ಪ್ರಯೋಜನಕಾರಿ. ಇದರಿಂದ, ಪದೇ ಪದೇ ಟಿಕೆಟ್ ಪಡೆಯುವ ಗೋಜಲು ತಪ್ಪುತ್ತದೆ. ನಮ್ಮ ಪ್ರಯಾಣದ ಆಯ್ಕೆಯ ಪ್ರಕಾರ, ಇಂಟರ್ನೆಟ್ ಬ್ಯಾಂಕ್ ಸಹಾಯದಿಂದ ಮನೆಯಲ್ಲಿ ಕುಳಿತುಕೊಂಡೇ ನಾವು ಟೋಕನ್ ಗೆ ಹಣ ತುಂಬಬಹುದು. ಟೋಕನ್ ಗಳ ಮೇಲೆ ಶೇ. 15ರಿಂದ 20 ರಿಯಾಯಿತಿ (ವಾರ್ಷಿಕ ದರದಲ್ಲಿ) ಪಡೆಯಬಹುದಾಗಿದೆ. ಮೆಟ್ರೋ ಸ್ಟೇಷನ್ ಗಳಲ್ಲೂ ಈ ಕಾರ್ಡನ್ನು ಟಾಪ್ ಗೊಳಿಸಬಹುದು. ಕನಿಷ್ಠ 50 ರು.ಗಳಿಂದ 1500 ರು.ಗಳವರೆಗೆ ಹಣವನ್ನು ಕಾರ್ಡಿಗೆ ಲೋಡ್ ಮಾಡಬಹುದು.

ನಮ್ಮ ಮೆಟ್ರೋ ಹಂತ 1: ಉಪಯೋಗ ಪಡೆಯಲಿದ್ದಾರೆ 5 ಲಕ್ಷ ಜನ!

ಕಾಂಬೋ ಕಾರ್ಡ್ ವೈಶಿಷ್ಟ್ಯತೆ

ಕಾಂಬೋ ಕಾರ್ಡ್ ವೈಶಿಷ್ಟ್ಯತೆ

ಇದಲ್ಲದೆ, ಕಾಂಬೋ ಕಾರ್ಡ್ ಎಂಬ ಮತ್ತೊಂದು ವ್ಯವಸ್ಥೆಯೂ ಉಂಟು. ಮೆಟ್ರೋದೊಂದಿಗೆ ಕೈ ಜೋಡಿಸಿರುವ ಬ್ಯಾಂಕು ಗಳಾದ ಫೆಡರಲ್ ಬ ಬ್ಯಾಂಕ್ ಹಾಗೂ ಐಸಿಐಸಿಐ ಬ್ಯಾಂಕುಗಳು ಈ ಕಾರ್ಡುಗಳನ್ನು ನೀಡುತ್ತವೆ. ಮೈಕ್ರೋ ಚಿಪ್ ಅಳವಡಿಕೆಯುಳ್ಳ ಹಾಗೂ ಸಿಂಗಲ್ ಸ್ಟ್ರೈಪ್ ಮಾದರಿಯ ಕಾರ್ಡುಗಳು ಇವಾಗಿವೆ. ಇವುಗಳ ಟಾಪ್ ಅಪ್ ಹಾಗೂ ರಿಯಾಯಿತಿ ನಿಯಮಗಳು ಈ ಹಿಂದಿನ ಸ್ಲೈಡ್ ನಲ್ಲಿ ತಿಳಿಸಿರುವ ಸ್ಮಾರ್ಟ್ ಕಾರ್ಡ್ ಗಳ ಮಾದರಿಯಲ್ಲೇ ಇರುತ್ತವೆ.

ಗುಂಪು ಟಿಕೆಟ್ಸ್

ಗುಂಪು ಟಿಕೆಟ್ಸ್

ಈ ಹಿಂದಿನ ಸ್ಲೈಡ್ ಗಳಲ್ಲಿ ತಿಳಿಸಿರುವಂತೆ ಸ್ಮಾರ್ಟ್ ಕಾರ್ಡ್ ಗಳಿಗೆ, ಕಾಂಬೋ ಕಾರ್ಡ್ ಗಳಿಗೆ ವಾರ್ಷಿಕ್ ಟಿಕೆಟ್ ಗಳ ವಿಧಾನದಲ್ಲಿ ಹಣ ತುಂಬಬಹುದು. ನಿಮ್ಮಲ್ಲಿರುವ ಸ್ಮಾರ್ಟ್ ಕಾರ್ಡಿಗೆ ಬಹು ವಿಧವಾದ ಪ್ರಯಾಣಗಳನ್ನು ಕೈಗೊಳ್ಳಲು ಇವನ್ನು ಬಳಸಲಾಗುತ್ತದೆ.

ವಾರ್ಷಿಕವಾಗಿ ಶೇ. 15ರಷ್ಟು ರಿಯಾಯಿತಿ ಪಡೆಯಬಹುದು.
ಇನ್ನು, ಗುಂಪು ಟಿಕೆಟ್ಸ್ ಸೌಲಭ್ಯದಡಿ, ಒಂದೇ ವೃತ್ತದ ನಡುವೆ ಒಟ್ಟಾಗಿ ಪ್ರಯಾಣಿಸಲು ಉದ್ದೇಶಿಸಿರುವ ಕನಿಷ್ಠ 25 ಪ್ರಯಾಣಿಕರುಗಳನ್ನೊಳಗೊಂಡ ವ್ಯಕ್ತಿಗಳ ಒಂದು ತಂಡಕ್ಕೆ ಟಿಒಎಂ ನೀಡಲಾಗುವ ಕಾಗದ ಮಾದರಿಯ ಟಿಕೆಟ್ ಇದು. ಗುಂಪು ಟಿಕೇಟ್ ಏಕ ಪ್ರಯಾಣ ಟಿಕೇಟ್ ಆಗಿದ್ದು, ಅದನ್ನು ನಿರ್ಗಮನ ನಿಲ್ದಾಣದ ಬಳಿ ಸಂಗ್ರಹಿಸಲಾಗುತ್ತದೆ.

ಬೆಂಗಳೂರು ಉತ್ತರ-ದಕ್ಷಿಣ: ನಮ್ಮ ಮೆಟ್ರೋ 45 ನಿಮಿಷದ ಪ್ರಯಾಣ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
For Metro users, Namma Metro Company has provided various ways to pay travelling charges. Token system, smart cards, Combo cards are few among those.
Please Wait while comments are loading...