ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಕೆಟ್ ದರದಲ್ಲೂ 'ಬಾಹುಬಲ' ಮೆರೆದ ಬೆಂಗಳೂರು ಮಲ್ಟಿಪ್ಲೆಕ್ಸ್ ಗಳು

ರಾಜ್ಯದ ಮಲ್ಟಿಪ್ಲೆಕ್ಸುಗಳು ಸರಕಾರದ ಆದೇಶದಂತೆ ಇನ್ನೂರು ರೂಪಾಯಿ ಟಿಕೆಟ್ ದರ ನಿಗದಿ ಪಡಿಸಿದರೂ ಇತರ ರಾಜ್ಯಗಳಿಗೆ ಹೋಲಿಸಿದರೆ ಟಿಕೆಟ್ ದರ ಜಾಸ್ತಿ.

|
Google Oneindia Kannada News

ಬೆಂಗಳೂರು, ಏ 27: ಯಾವುದೇ ಭಾಷೆಯ ಸಿನಿಮಾಗಳಿರಲಿ, ಇನ್ನೂರು ರೂಪಾಯಿಗಿಂತ ಹೆಚ್ಚು ಟಿಕೆಟ್ ದರ ವಿಧಿಸುವಂತಿಲ್ಲ ಎಂದು ಸರಕಾರ ಆದೇಶ ಹೊರಡಿಸಿದ್ದರೂ, ನಗರದ ಯಾವುದೇ ಮಲ್ಟಿಪ್ಲೆಕ್ಸುಗಳು ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.

ಗೊತ್ತು ಗುರಿಯಿಲ್ಲದಂತೇ ಟಿಕೆಟ್ ದರ ವಿಧಿಸಿ ಮನಬಂದಂತೇ ದುಡ್ಡನ್ನು ದೋಚಿಕೊಳ್ಳುತ್ತಿರುವ ಮಲ್ಟಿಪ್ಲೆಕ್ಸ್ ಗಳು ಸರಕಾರದ ಆದೇಶಕ್ಕೆ ಸಡ್ಡು ಹೊಡೆದಿವೆ. ಸರಕಾರದ ಆದೇಶದ ಪ್ರತಿ ಇನ್ನೂ ಕೈಸೇರಿಲ್ಲ ಎನ್ನುವ ಸಬೂಬು ನೀಡಿ, ಟಿಕೆಟ್ ದರ ನಿಗದಿಪಡಿಸಿವೆ. [ಬಾಹುಬಲಿ ಹೆಸರಿನಲ್ಲಿ ಕರ್ನಾಟಕ ಪ್ರೇಕ್ಷಕರಿಗೆ ಅನ್ಯಾಯ]

 ticket rates in bengaluru multiplexes higher than any other cities of india

ಪರಭಾಷಾ ಚಿತ್ರಗಳು ಕನ್ನಡ ಸಿನಿಮಾಗಳ ಮೇಲೆ ಸವಾರಿ ಮಾಡುವ ಮುಂದುವರಿದ ಭಾಗವಾಗಿ ಗುರುವಾರ ರಾತ್ರಿ (ಏ 27) ಯಿಂದಲೇ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಚಿತ್ರ ರಾಜ್ಯದಲ್ಲಿ ಭೋರ್ಗರೆಯಲಾರಂಭಿಸಿದೆ.

ಕನ್ನಡ ಚಿತ್ರಗಳು ಸಪ್ಪೆ ಮೋರೆ ಹಾಕಿಕೂತಿವೆ, ಕನ್ನಡ ಚಿತ್ರಗಳಿಗೆ ತೊಂದರೆಯಾದರೆ ಸುಮ್ಮನಿರುವುದಿಲ್ಲ ಎಂದು ಆರ್ಭಟಿಸಿದ್ದವರು ಎಲ್ಲಿ ಹೋದರೋ ಗೊತ್ತಿಲ್ಲ. ಸಿನಿಮಾ ಎತ್ತಂಗಡಿ ಮಾಡಿದ ನೋವಿನಲ್ಲಿ ನಿರ್ಮಾಪಕ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚಿತ್ರಕ್ಕಿರುವ ಹೈಪನ್ನು ಎನ್ಕ್ಯಾಶ್ ಮಾಡಿಕೊಳ್ಳುತ್ತಿರುವ ಮಲ್ಟಿಪ್ಲೆಕ್ಸುಗಳು 400 ರೂಪಾಯಿಯಿಂದ ಹಿಡಿದು 1400 ರೂಪಾಯಿವರೆಗೆ ಟಿಕೆಟ್ ದರ ನಿಗದಿಪಡಿಸಿವೆ. ಆಂಧ್ರ ಮತ್ತು ತೆಲಂಗಾಣದ ಚಿತ್ರಮಂದಿರಗಳಲ್ಲೂ ಇರದ ಟಿಕೆಟ್ ದರ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಗಳಲ್ಲಿವೆ.

ಒಂದು ಮೂಲಗಳ ಪ್ರಕಾರ ಸಿಎಂ ಸಿದ್ದರಾಮಯ್ಯ ದರ ಪರಿಷ್ಕರಣೆಯ ಕಡತಕ್ಕೆ ಸಹಿ ಹಾಕಿದ್ದರೂ, ಸರಕಾರ ಮೇ 1ರಿಂದ ಹೊಸದರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸುವ ಸಾಧ್ಯತೆಯಿದೆ. ಇದನ್ನರಿತೇ, ಉಳಿದಿರುವ ಮೂರ್ನಾಲ್ಕು ದಿನಗಳಲ್ಲಿ ಸಿಕ್ಕಿದಷ್ಟು ದೋಚಿಕೊಳ್ಳೋಣ ಎನ್ನುವ ನಿರ್ಧಾರಕ್ಕೆ ಮಲ್ಟಿಪ್ಲೆಕ್ಸುಗಳು ಬಂದಂತಿವೆ.

ಇನ್ನೂರು ರೂಪಾಯಿ ಟಿಕೆಟ್ ದರ ನಿಗದಿಯಾದ ನಂತರವೂ ಇತರ ರಾಜ್ಯಗಳಿಗೆ ಹೋಲಿಸಿದರೆ, ಮಲ್ಟಿಪ್ಲೆಕ್ಸುಗಳ ದರ ಕರ್ನಾಟಕಕ್ಕಿಂತ ಕಮ್ಮಿಯೇ. ದೇಶದ ಇತರ ಪ್ರಮುಖ ನಗರಗಳಲ್ಲಿ ಟಿಕೆಟ್ ದರ ಯಾವ ರೀತಿ ಇದೆ, ಇಲ್ಲಿದೆ ಒಂದು ಸಣ್ಣ ನೋಟ. (ಬಾಹುಬಲಿ ಚಿತ್ರ ಹೊರತು ಪಡಿಸಿ)

ಬೆಂಗಳೂರು ಮಲ್ಟಿಪ್ಲೆಕ್ಸುಗಳಲ್ಲಿನ ಈಗಿನ ದರ (ವಾರಾಂತ್ಯದ ದರದಲ್ಲಿ ಬದಲಾವಣೆಯಾಗುತ್ತದೆ)
ಕನ್ನಡೇತರ ಸಿನಿಮಾಗಳು: ಎಕ್ಸಿಕ್ಯೂಟಿವ್ ಕ್ಲಾಸ್ - 180 ರಿಂದ 250 ರೂಪಾಯಿ
ಕನ್ನಡ ಸಿನಿಮಾಗಳು: 160 ರಿಂದ 180 ರೂಪಾಯಿ

ಇತರ ನಗರಗಳಲ್ಲಿ (ವಾರಾಂತ್ಯದ ದರದಲ್ಲಿ ಬದಲಾವಣೆಯಾಗುತ್ತದೆ)
ಮುಂಬೈ: ಎಕ್ಸಿಕ್ಯೂಟಿವ್ ಕ್ಲಾಸ್ - 150 ರಿಂದ 180 ರೂಪಾಯಿ.
ಪುಣೆ: ಎಕ್ಸಿಕ್ಯೂಟಿವ್ ಕ್ಲಾಸ್ - 130 ರಿಂದ 170 ರೂಪಾಯಿ.
ದೆಹಲಿ ಮತ್ತು NCR: ಎಕ್ಸಿಕ್ಯೂಟಿವ್ ಕ್ಲಾಸ್ 120 ರಿಂದ 180 ರೂಪಾಯಿ.
ಚೆನ್ನೈ : ಎಕ್ಸಿಕ್ಯೂಟಿವ್ ಕ್ಲಾಸ್ 100 ಯಿಂದ 120 ರೂಪಾಯಿ
ಹೈದರಾಬಾದ್: ಎಕ್ಸಿಕ್ಯೂಟಿವ್ ಕ್ಲಾಸ್ 1000 ಯಿಂದ 130 ರೂಪಾಯಿ

English summary
Ticket rates in Bengaluru multiplexes is higher than any other cities of India, a comparison list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X