ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತ್ಯಾಗರಾಜನಗರ: ದತ್ತಾತ್ರೇಯ ದೇಗುಲದಲ್ಲಿ 75ನೇ ದತ್ತ ಜಯಂತಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 16: ನಗರದ ಬಸವನಗುಡಿಯ ತ್ಯಾಗರಾಜನಗರದ ದತ್ತಾತ್ರೇಯ ದೇವಾಲಯ ಮತ್ತು ಶ್ರೀ ಗುರುಸಂಕಣ್ಣಾರ್ಯಶ್ರಮದಲ್ಲಿ ಇದೇ ಡಿ. 22ರಂದು 75ನೇ ವರ್ಷದ ದತ್ತ ಜಯಂತಿ ಮಹೋತ್ಸವವನ್ನು ಆಚರಿಸಲಾಗುತ್ತದೆ.

ಅವಧೂತರ ಪರಮ ಗುರು ದತ್ತಾತ್ರೇಯ, ಶ್ರೀ ಗಣಪತಿ, ಆಂಜನೇಯ, ನವಗ್ರಹ ವೃಕ್ಷ ವನದಿಂದ ಕೂಡಿದ್ದ ಈ ದೇವಾಲಯದ ಸಂಕೀರ್ಣದಲ್ಲಿ ದತ್ತೋಪಾಸಕರಾದ ಗುರು ಸಂಕಣ್ಣಾರ್ಯರು (ಕುಣಿಗಲ್ ಪುಟ್ಟಣ್ಣ) ರವರ ತಪೋಭೂಮಿಯ ದಿವ್ಯ ಸನ್ನಿಧಾನದಲ್ಲಿ ಡಿ. 23ರವರೆಗೆ 75ನೇ ವರ್ಷದ ದತ್ತ ಜಯಂತಿ ಪ್ರಯುಕ್ತ ಅನೇಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

Datta Jayanti
ಪ್ರತಿದಿನ ಬೆಳಿಗ್ಗೆ ಗುರು ಚರಿತ್ರೆಯ ಕುರಿತು ಉಪನ್ಯಾಸ, ಪಾದುಕ ಪೂಜೆ ವಿವಿಧ ಅಲಂಕಾರಗಳು ಹೋಮ ಮತ್ತು ಪಾರಾಯಣ ನಡೆದು ಸಂಜೆ ನಾಡಿನ ಸುಪ್ರಸಿದ್ಧ ಕಲಾವಿಧರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಿ. 15 ರ ಸಂಜೆ ವಸಂತಪುರದ ಕೀರ್ತಿಶೇಷ ವೇ|| ಬ್ರ|| ಶ್ರೀ ಶಿವಸ್ವಾಮಿಗಳ ಕುಟುಂಬದಿಂದ ವೇದಘೋಷ ಪೂರ್ವಕ ಪುಷ್ಪಯಾಗ ನೆರವೇದಿದೆ.

20ರಂದು ಡಾ. ಮುದ್ದುಮೋಹನ್ ರಿಂದ ದಾಸವಾಣಿ 21ರಂದು ಸ್ವರಲಯಾಮೃತ ತಂಡದಿಂದ ಸಂಗೀತ ಸುಧೆ, 22ರಂದು ನಂದಿ ತಾಳವಾದ್ಯ ತಂಡದ ತಾಳವಾದ್ಯ ಕಛೇರಿ ಇತ್ಯಾದಿ ಕಾರ್ಯಕ್ರಮಗಳಲ್ಲದೆ ಸಾಮಾಜಿಕ ಚಟುವಟಿಕೆಗಳಾದ ಅಶಕ್ತ ವಿದ್ಯಾರ್ಥಿಗಳಿಗೆ ನೆರವು ವಧು-ವರಾನ್ವೇಷಣೆ ಕೇಂದ್ರಗಳನ್ನು ಸಹ ದೇವಾಲಯದ ವತಿಯಿಂದ ನಡೆಸಲಾಗುತ್ತಿದೆ ಎಂದು ಕಾರ್ಯದರ್ಶಿ ಎನ್.ಎಲ್. ಶ್ರೀಪಾದ ತಿಳಿಸಿರುತ್ತಾರೆ.

English summary
75th annual Datta Jayanti celebration will be held at Dattatreya Temple, Tyagarajanagar, Bengaluru. The event is scheduled from Dec 22, 2018
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X