ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋದಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ: ಮೂವರ ಬಂಧನ

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 10: ನಮ್ಮ ಮೆಟ್ರೋದಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮೂವರನ್ನು ಉಪ್ಪಾರ ಪೇಟೆ ಪೊಲೀಸರು ಬಂಧಿಸಿದ್ದಾರೆ.

ಮೆಟ್ರೋದಲ್ಲಿ ಯುವತಿ ಹಿಂಬಾಲಿಸಿ ಕಿರುಕುಳ: ಸಾರ್ವಜನಿಕರಿಂದ ಥಳಿತ ಮೆಟ್ರೋದಲ್ಲಿ ಯುವತಿ ಹಿಂಬಾಲಿಸಿ ಕಿರುಕುಳ: ಸಾರ್ವಜನಿಕರಿಂದ ಥಳಿತ

ನಮ್ಮ ಮೆಟ್ರೋದಲ್ಲಿ ಮಹಿಳೆಯರು ಸಂಚರಿಸುವಾಗ ಅವರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿಯೇ ಪ್ರತಿ ಮೆಟ್ರೋದಲ್ಲಿ ಮೊದಲ ಎರಡು ಬಾಗಿಲು ಮಹಿಳೆಯರಿಗಾಗಿ ಮೀಸಲಿಡಲಾಗಿದೆ. ಆದಾಗ್ಯೂ ಮಹಿಳೆಯರಿಗೆ ಮೀಸಲಿರುವ ಆಸನದಲ್ಲಿ ಪುರುಷರು ಕುಳಿತು ಪ್ರಯಾಣಿಸುವುದು ಇನ್ನೂ ತಪ್ಪಿಲ್ಲ.

ಭಾರತ್ ಬಂದ್:ಎಂದಿನಂತೆ ಮೆಟ್ರೋ ಸಂಚಾರ ಭಾರತ್ ಬಂದ್:ಎಂದಿನಂತೆ ಮೆಟ್ರೋ ಸಂಚಾರ

ಮೆಟ್ರೋದಲ್ಲಿ ಅಂಗವಿಕಲರಿಗಾಗಿ ಮೀಸಲಿರಿಸುವ ಆಸನದಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಎಬ್ಬಿಸಿ ಕುಳಿತುಕೊಂಡ ಯುವತಿ ಬಳಿ ಮೂವರು ಅನುಚಿತವಾಗಿ ವರ್ತಿಇಸಿದ್ದಾರೆ, ಕೆಆರ್ ಪುರ ನಿವಾಸಿ ಅನಿಲ್ ಕುಮಾರ್, ಮಹದೇಶ್ವರ, ಹರಿಹರ ಬಂಧಿತರು. ಬಸವನಗುಡಿಯ ಶೃತಿ ಎಂಬುವರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.

Three youths arrested for misbehave with woman in Metro

ಶೃತಿ ರಾತ್ರಿ 10.45ರ ಸಮಯದಲ್ಲಿ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ರೈಲು ಹತ್ತಿದ್ದಾರೆ, ಯುವತಿ ಹತ್ತಿರದ ಬೋಗಿಯಲ್ಲಿ ಯಾವುದೇ ಆಸನವಿರಲಿಲ್ಲ ಎಂದು ಅಂಗವಿಕಲ ಮಹಿಳೆಯರಿಗೆ ಮೀಸಲಿದ್ದ ಆಸನದಲ್ಲಿ ಯುವಕನೊಬ್ಬ ಕುಳಿತಿದ್ದ, ಯುವಕನನ್ನು ಎಬ್ಬಿಸಿ ಆ ಸೀಟಿನಲ್ಲಿ ಆವರು ಕುಳಿತುಕೊಂಡಿದ್ದರು.

ಬೆಕ್ಕು ಅಡ್ಡ ಬಂತು, ಮೆಟ್ರೋ ರೈಲೇ ನಿಂತು ಬಿಡ್ತು: ಶಕುನ ಭೀತಿನಾ? ಬೆಕ್ಕು ಅಡ್ಡ ಬಂತು, ಮೆಟ್ರೋ ರೈಲೇ ನಿಂತು ಬಿಡ್ತು: ಶಕುನ ಭೀತಿನಾ?

ಅಷ್ಟಕ್ಕೆ ಮೂವರು ಯುವಕರು ಯುವತಿ ಬಳಿ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದರು. ಯುವತಿ ಮೆಟ್ರೋ ಇಳಿದು ಹೋದರೂ ಆಕೆಯನ್ನು ಹಿಂಬಾಲಿಸಿದ್ದರು ಆ ಸಂದರ್ಭದಲ್ಲಿ ಯುವಕನೊಬ್ಬನನ್ನು ಹಿಡಿದು ಆಕೆಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈಗಾಗಲೇ ಕಳೆದ ಎರಡು ತಿಂಗಳ ಹಿಂದೆ ಇಂಥದ್ದೇ ಪ್ರಕರಣವೊಂದು ಬನಶಂಕರಿ ಮೆಟ್ರೋ ನಿಲ್ದಾಣದಲ್ಲಿ ಸಂಭವಿಸಿತ್ತು.

English summary
police arrested three youths regarding misbehave with woman in Metro. They sat in the reserved seat and misconducted with an women passenger.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X