ಬೆಂಗಳೂರು, ಜನವರಿ 7: ಕಠಿಣ ಕಾನೂನುಗಳನ್ನು ಜಾರಿಗೆ ತಂದರೂ ಜನರು ಮಾತ್ರ ಬುದ್ಧಿ ಕಲಿಯುತ್ತಿಲ. ಪರಿಣಾಮ ಮ್ಯಾನ್ ಹೋಲ್ ಗೆ ಇಳಿದು ಸಾವನ್ನಪ್ಪುವ ಕಾರ್ಮಿಕರ ಸರಣಿ ನಿಲ್ಲುತ್ತಿಲ್ಲ.
ಇಂದು ಬೆಂಗಳೂರಿನಲ್ಲಿ ಮತ್ತೊಂದು ಮ್ಯಾನ್ ಹೋಲ್ ದುರಂತ ಸಂಭವಿಸಿದ್ದು ಮೂವರು ಕಾರ್ಮಿಕ ಬಲಿಯಾಗಿದ್ದಾರೆ.
ಬೊಮ್ಮನಹಳ್ಳಿ ವ್ಯಾಪ್ತಿಯ ಬಂಡೇಪಾಳ್ಯ ಬಳಿಯ ಸೋಮಸಂದ್ರದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಎನ್.ಡಿ ಸೆಪಲ್ ಅಪಾರ್ಟ್ ಮೆಂಟ್ ನಲ್ಲಿ ಮೂವರು ಕಾರ್ಮಿಕರು ಎಸ್.ಟಿ.ಪಿ ಸ್ವಚ್ಛಗೊಳಿಸಲು ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.
ಕಲಬುರಗಿ: ಓರಿಯಂಟ್ ಕಂಪನಿಯಲ್ಲಿ ಕಾರ್ಮಿಕರಿಬ್ಬರ ದುರ್ಮರಣ, ಪ್ರತಿಭಟನೆ
ಮಧ್ಯಾಹ್ನ ವೇಳೆ ಈ ಕಾರ್ಮಿಕರು 10 ಅಡಿ ಆಳದ ಮ್ಯಾನ್ ಹೋಲ್ ನಲ್ಲಿ ಸಿಲುಕಿಕೊಂಡಿದ್ದರು. ತಕ್ಷಣ ಆ್ಯಂಬುಲೆನ್ಸ್ ಗೆ ಕರೆ ಮಾಡಲಾಯಿತು. ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಒಬ್ಬರು ಕಾರ್ಮಿಕನ ಶವವನ್ನು ಹೊರ ತೆಗೆದಿದ್ದು, ಇನ್ನಿಬ್ಬರ ರಕ್ಷಣೆ ಮಾಡಿದ್ದರು.
ರಕ್ಷಣೆ ಮಾಡಿದ ಸಂದರ್ಭ ಅಸ್ವಸ್ಥಗೊಂಡಿದ್ದ ಕಾರ್ಮಿಕನನ್ನು ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ದಾರಿ ಮಧ್ಯೆ ಇಬ್ಬರೂ ಸಾವನ್ನಪ್ಪಿದ್ದು. ಮ್ಯಾನ್ ಹೋಲ್ ಗೆ ಇಳಿದಿದ್ದ ಮೂವರೂ ಕಾರ್ಮಿಕರು ಸಾವನ್ನಪ್ಪಿದ್ದಾರೆ.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!