ಬೆಂಗಳೂರಿನಲ್ಲಿಂದು 'ಮೂರು ತಲೆಮಾರುಗಳ ಮಿಲನ' ಕಾರ್ಯಕ್ರಮ

Posted By:
Subscribe to Oneindia Kannada

ಬೆಂಗಳೂರು, ಜನವರಿ 21: ನಗರದ ಬನಶಂಕರಿಯ 2ನೇ ಹಂತದಲ್ಲಿರುವ ಜ್ಞಾನಜ್ಯೋತಿ ಹಿರಿಯ ನಾಗರಿಕರ ವೇದಿಕೆ ವತಿಯಿಂದ ಜನವರಿ 21ರ ಶನಿವಾರದಂದು ಮಧ್ಯಾಹ್ನ 3: 45ಕ್ಕೆ 'ಸದಸ್ಯರ ಮೂರು ತಲೆಮಾರುಗಳ ಮಿಲನ' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮವು ಬನಶಂಕರಿ ಎರಡನೇ ಹಂತದಲ್ಲಿರುವ ಪ್ರತಿಭಾ ಬಾಲಮಂದಿರದ ಆವರಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅನೇಕ ರೀತಿಯ ತಯಾರಿಯನ್ನು ಮಾಡಿಕೊಂಡಿರುವುದಾಗಿ ಆಯೋಜಕರು ತಿಳಿಸಿದ್ದಾರೆ.

Three Generations meet today in Banashankari

ಆಸಕ್ತ ಪ್ರೇಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ವೇದಿಕೆಯ ಅಧ್ಯಕ್ಷರು ಮನವಿ ಮಾಡಿದ್ದಾರೆ.

ಅಂದಹಾಗೆ, ಕಾರ್ಯಕ್ರಮ ಎರಡು ಕಡೆ ನಡೆಯಲಿದೆ. ಮೊದಲ ಕಾರ್ಯಕ್ರಮವು ಮೇಲಿನ ಮಾಹಿತಿಯಂತೆ ಮಧ್ಯಾಹ್ನ 3:45ಕ್ಕೆ ಅದೇ ಸ್ಥಳದಲ್ಲೇ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಗೋಪಾಲಕೃಷ್ಣ ರಾಮಸ್ವಾಮಿ ಅವರನ್ನು (9341073994) ಸಂಪರ್ಕಿಸಬಹುದು.

ಅಂತೆಯೇ, ಸಂಜೆ 6 ಗಂಟೆಗೆ ಜಯನಗರ 4ನೇ ಬ್ಲಾಕ್ ನಲ್ಲಿರುವ ರಾಷ್ಟ್ರೋತ್ಥಾನ ಶಾರೀರಿಕ ಕೇಂದ್ರದ ಜಯನಗರ ಸ್ಟಡಿ ಸೆಂಟರ್ ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬಯಸುವವರು ಬಿಎಸ್ ನಾರಾಯಣ್ (9986661281) ಅವರನ್ನು ಸಂಪರ್ಕಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A special programe Three Generations meet has been organised by Jnanajyothi Hiriya Nagarikara Vedike on 21st January 2017
Please Wait while comments are loading...