ವಸಂತನಗರ ಡಬಲ್ ಮರ್ಡರ್: ಸಿಕ್ಕಿಬಿದ್ದ ಮೂವರು ಆರೋಪಿಗಳು

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 29: ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ವಸಂತನಗರದಲ್ಲಿ ನಡೆದಿದ್ದ ಅತ್ತೆ-ಸೊಸೆ ಡಬಲ್ ಮರ್ಡರ್ ಪ್ರಕರಣದಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದ ಆರೋಪಿ ಅದರಿಂದ ಹೊರಗೆ ಬರಲು ಆಯ್ದುಕೊಂಡಿದ್ದು ಈ ದಾರಿಯನ್ನು. ಸಿಕ್ಕಿಬಿದ್ದ ಮೂವರು ಆರೋಪಿಗಳೂ ರಾಜಸ್ತಾನ ಮೂಲದವರು.

ಟಿ.ಸಿ.ಪಾಳ್ಯದ ಮನೀಶ್, ರಾಮಮೂರ್ತಿ ನಗರದ ಮಹೇಂದರ್ ಸಿಂಗ್, ಕೆ.ಆರ್.ಪುರದ ದೇವರಾಂ ಬಂಧಿತರು. ಆರೋಪಿಗಳಿಂದ 3.5 ಕೆ.ಜಿ ಚಿನ್ನ, 9 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿ ಮನೀಶ್ ಲೇವಾದೇವಿ ವ್ಯವಹಾರ ಮಾಡುತ್ತಿದ್ದ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ.[ಬೆಂಗಳೂರಿನ ವಸಂತನಗರದಲ್ಲಿ ಅತ್ತೆ-ಸೊಸೆ ಡಬಲ್ ಮರ್ಡರ್]

Crime

ಇನ್ನು ಸಂಪತ್ ಅವರ ಮನೆಯಲ್ಲಿ ಆಭರಣ, ನಗದು ಇರುವ ಮಾಹಿತಿ ದೊರೆತು, ದೋಚಲು ಸಂಚು ರೂಪಿಸಿ, ಸ್ನೇಹಿತರ ನೆರವು ಕೋರಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಹೋಗಿ ದಿನೇಶ್ ಅವರ ತಾಯಿ ಸಂತೋಷಿ ಬಾಯಿ ಹಾಗೂ ಪತ್ನಿ ಲತಾ ಅವರನ್ನು ಹತ್ಯೆ ಮಾಡಿದ್ದ.[ಮನೆಯಲ್ಲಿ ವೇಶ್ಯಾವಾಟಿಕೆ: ಮೂವರು ಆರೋಪಿಗಳು ಅಂದರ್]

ಸ್ನೇಹಿತ ಮಹೇಂದರ್ ಸಿಂಗ್ ಜತೆಗೆ ಮನೀಶ್ ಹೋದಾಗ ಪರಿಚಿತ ಎಂಬ ಕಾರಣಕ್ಕೆ ದಿನೇಶ್ ಮನೆಯಲ್ಲಿ ಬಾಗಿಲು ತೆಗೆದಿದ್ದಾರೆ. ನಂತರ ಒಡವೆ, ನಗದು ನೀಡುವಂತೆ ಕೇಳಿದ್ದಾನೆ. ಕೊಡುವುದಕ್ಕಾಗಲ್ಲ ಎಂದಾಗ ಅತ್ತೆ-ಸೊಸೆ ಇಬ್ಬರನ್ನೂ ಕೊಂದು ನಗದು, ಆಭರಣವನ್ನು ಮನೀಶ್ ದೋಚಿದ್ದಾನೆ.

ಆಭರಣ ದೋಚಿದ ನಂತರ ಎಲ್ಲಿ ತನ್ನ ಗುರುತನ್ನು ಹೇಳಿಬಿಡುತ್ತಾರೋ ಎಂಬ ಭಯದಿಂದ ಕೊಲೆ ಮಾಡಿದೆ ಎಂದು ಮನೀಶ್ ತಪ್ಪೊಪ್ಪಿಕೊಂಡಿದ್ದಾನೆ. ದೋಚಿದ ಆಭರಣ ಹಾಗೂ ನಗದನ್ನು ತನ್ನ ಸಂಬಂಧಿ ದೇವಾರಾಂ ಎಂಬಾತನ ಬಳಿ ಇರಿಸಿದ್ದ. ಮನೆಯೊಳಗೆ ನುಗ್ಗಿದ್ದ ಹದಿನೈದು ನಿಮಿಷದೊಳಗೆ ಕೊಲೆ ಮಾಡಿ, ನಗದು-ಆಭರಣ ದೋಚಲಾಗಿದೆ. ಯಾರಾದರೂ ಬಂದರೆ ಎಂಬ ಭಯದಲ್ಲಿ ಅತ್ತೆ-ಸೊಸೆ ಮೈಮೇಲಿದ್ದ ಆಭರಣ ದೋಚಲಿಲ್ಲ ಎಂದು ಹೇಳಿದ್ದಾನೆ.[ಉಡುಪಿಯ ಭಾಸ್ಕರ್ ಶೆಟ್ಟಿಯನ್ನು ಗುಂಡಿಟ್ಟು ಕೊಲ್ಲುವ ಪ್ಲಾನ್ ಇತ್ತಾ!]

ಹತ್ಯೆ ನಂತರ ಊರು ಬಿಟ್ಟರೆ ಪೊಲೀಸರಿಗೆ ಅನುಮಾನ ಬರಬಹುದು ಎಂಬ ಕಾರಣಕ್ಕೆ ಆರೋಪಿಗಳು ಬೆಂಗಳೂರಿನಲ್ಲೇ ಇದ್ದರು. ಕೋಟ್ಯಂತರ ರುಪಾಯಿ ವ್ಯವಹಾರ ನಡೆಸುವ ದಿನೇಶ್ ಮನೆಯಲ್ಲಿ ಯಾವುದೇ ಭದ್ರತೆ ಇರಲಿಲ್ಲ. ಸಿ.ಸಿ. ಟಿವಿ ಸಹ ಇಲ್ಲ. ಆದರೆ ಆ ಮನೆಯಿಂದ ಸ್ವಲ್ಪ ದೂರದಲ್ಲಿರುವ ಮತ್ತೊಂದು ಮನೆಯ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದ ದೃಶ್ಯಗಳು ಹಾಗೂ ಲತಾ ಅವರು ತನ್ನ ಮೈದುನನಿಗೆ ಕರೆ ಮಾಡಿ ಮನೀಶ್ ಬಂದಿದ್ದಾನೆ ಎಂದು ತಿಳಿಸಿದ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
3 arrested in Vasanth nagar double murder case. A lady and her daughter in law were murdered at Vasanth Nagar in Bengaluru. Santhoshi Bhai aged 60 and her daughter in law, Latha were found murdered at thier home. Manish is main accused.
Please Wait while comments are loading...