ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಸ್ಫೋಟದ ಹೊಣೆ ಹೊತ್ತಿದ್ದ ಅಬ್ದುಲ್ ಪೊಲೀಸರಿಗೆ ಸಿಕ್ಕ!

|
Google Oneindia Kannada News

ಬೆಂಗಳೂರು, ಡಿ. 30 : 'ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಮಾಡಿದ್ದು ನಾನೇ, ಮೆಹದಿಯನ್ನು ಬಿಡುಗಡೆ ಮಾಡದಿದ್ದರೆ ಇನ್ನೆರಡು ದಿನದಲ್ಲಿ ಮತ್ತೆ ಸ್ಫೋಟ ಮಾಡುತ್ತೇನೆ' ಎಂದು ಟ್ವಿಟ್ ಮಾಡಿದ್ದ ಅಬ್ದುಲ್‌ ಖಾನ್‌ನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಅಬ್ದುಲ್ ಖಾನ್ ಎಂಬಾತ ತನ್ನ ಟ್ವಿಟರ್ ಖಾತೆಯಿಂದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಕಾನೂನು ಸಚಿವ ಡಿ.ವಿ.ಸದಾನಂದ ಗೌಡ, ಕರ್ನಾಟಕ ಹಲವು ಮಾಧ್ಯಮಗಳಿಗೆ, ಬೆಂಗಳೂರು ಪೊಲೀಸರಿಗೆ 'ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಿಸಿದ್ದು ನಾನೇ' ಎಂದು ಸೋಮವಾರ ಸಂಜೆ ಟ್ವಿಟ್ ಮಾಡಿದ್ದ. [ಭವಾನಿ ಬದುಕಿನ ಹಳಿ ತಪ್ಪಿಸಿದ ವಿಧಿಯ ಅಟ್ಟಹಾಸ!]

Tweeet

'ಮೆಹದಿಯನ್ನು ಬಿಡುಗಡೆ ಮಾಡದಿದ್ದರೆ, ಇನ್ನೆರಡು ದಿನದಲ್ಲಿ ಬೆಂಗಳೂರಿನಲ್ಲಿ ಪುನಃ ಬಾಂಬ್ ಸ್ಫೋಟ ಮಾಡಲಿದ್ದೇನೆ' ಎಂದು ಬೆದರಿಕೆ ಹಾಕಿದ್ದ, 'ನನ್ನನ್ನು ಹಿಡಿಯಿರಿ ನೋಡೋಣ ಎಂದು ಸವಾಲು ಎಸೆದಿದ್ದ'. ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರು, ಇದು ನಕಲಿ ಟ್ವಿಟ್ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. [ಸ್ಫೋಟದ ತನಿಖೆಗೆ ವಿಶೇಷ ತಂಡ : ಸಿಎಂ]

Bomb Blast

ಟ್ವಿಟ್ ಬಗ್ಗೆ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡರ ಪರವಾಗಿ ಬೆಂಗಳೂರು ಪೊಲೀಸರಿಗೆ ದೂರು ನೀಡಲಾಗಿತ್ತು. ಟ್ವಿಟ್ ಮಾಡಿದ್ದ ಅಬ್ದುಲ್ ಖಾನ್ ನಂತರ ಖಾತೆಯನ್ನು ವಜಾಗೊಳಿಸಿದ್ದ. ಟ್ವೀಟ್ ಬಂದ ಐಪಿ ವಿಳಾಸದ ಹುಡುಕಾಟ ನಡೆಸಿದ ಪೊಲೀಸರು ಟ್ವಿಟ್ ಮಾಡಿದವನನ್ನು ಪತ್ತೆ ಹಚ್ಚಿದ್ದಾರೆ. [ಮೆಹದಿ ಬಿಸ್ವಾಸ್ ಯಾರು?]

17 ವರ್ಷದ ಹುಡುಗ : 'ಬೆಂಗಳೂರು ಸ್ಫೋಟ ನಡೆಸಿದ್ದು ನಾನೇ' ಎಂದು ಟ್ವಿಟ್ ಮಾಡಿದ್ದ ಹುಡುಗನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಸಿಸಿಬಿ ಡಿಸಿಪಿ ಅಭಿಷೇಕ್ ಗೋಯಲ್ ಟ್ವಿಟ್ ಮಾಡಿದ್ದು, ಇದು ಮಾನಸಿಕ ಅಸ್ವಸ್ಥನ ಕೆಲಸ ಎಂದು ಸ್ಪಷ್ಟನೆ ನೀಡಿದ್ದಾರೆ. ಮಾನಸಿಕ ಒತ್ತಡಕ್ಕೆ ಒಳಗಾದ ಬಾಲಕನಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.

English summary
Union Home Minister Rajanath Singh, Law Minister DV Sadananda Gowda and other police officers received tweets from Abdul Khan said two more explosions on Tuesday in Bengaluru. Police arrested Khan who send threats through Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X