ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಪ್ರಸಕ್ತ ವರ್ಷಎಲ್ಲೆಲ್ಲಿ,ಎಷ್ಟೆಷ್ಟು ರೈತರು ಆತ್ಮಹತ್ಯೆಗೆ ಶರಣು?

By Vanitha
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 30 : ರಾಜ್ಯದಲ್ಲಿ ಪ್ರಸಕ್ತ ವರ್ಷ ಸಾಲಬಾದೆ, ಬೆಳೆ ನಷ್ಟ, ಬೆಳೆಗೆ ಸಿಗದ ನಿಗದಿತ ಬೆಲೆ ಇನ್ನಿತರ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಬರೋಬ್ಬರಿ 565 ಕ್ಕೆ ಮುಟ್ಟಿದೆ. ಇದರಲ್ಲಿ 185 ಕುಟುಂಬಗಳಿಗೆ ಮಾತ್ರ ಪರಿಹಾರ ದೊರತಿದೆ. 106 ಅರ್ಜಿಗಳು ತಿರಸ್ಕೃತಗೊಂಡಿದೆ.

ಈ ವರ್ಷ ರೈತರ ಸರಣಿ ಆತ್ಮಹತ್ಯೆಗಳು ಮಂಡ್ಯ ಜಿಲ್ಲೆಯಲ್ಲಿ (55) ಅಧಿಕವಾಗಿದ್ದರೆ, ಎರಡನೇ ಸ್ಥಾನ ಪಡೆದ ಹಾವೇರಿ ಜಿಲ್ಲೆಯಲ್ಲಿ 45 ರೈರು ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡದಲ್ಲಿ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಅಂಕಿ ಅಂಶಗಳು ಇನ್ನೂ ದೊರಕಿಲ್ಲ.[ನೇಪಾಳದ ಸಂತ್ರಸ್ತರಿಗೆ ಮಾಗಡಿ ರೈತ ತೋರಿದ ಮಾನವೀಯತೆ]

This year 565 farmers committed suicide in Karnataka

ಎಲ್ಲೆಲ್ಲಿ ಎಷ್ಟೆಷ್ಟು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ?

* ಹಾವೇರಿ : 45 ರೈತರು ಆತ್ಮಹತ್ಯೆ, 13 ಕುಟುಂಬಗಳಿಗೆ ಪರಿಹಾರ. 11 ಕುಟುಂಬಗಳ ಅರ್ಜಿ ತಿರಸ್ಕೃತ

* ಗದಗ : 22 ರೈತರು ಆತ್ಮಹತ್ಯೆ, 6 ಸಂತ್ರಸ್ತರಿಗೆ ಪರಿಹಾರ, 5 ಕುಟುಂಬಗಳ ಅರ್ಜಿ ತಿರಸ್ಕೃತ

* ಹಾಸನ : 33 ರೈತರು ಆತ್ಮಹತ್ಯೆ, 5 ಕುಟುಂಬಗಳಿಗೆ ಪರಿಹಾರ, ಉಳಿದ ಪ್ರಕರಕಲಬುದಗುಣಗಳ ಪರಿಶೀಲನೆ ನಡೆಯುತ್ತಿದೆ.

* ಉತ್ತರ ಕನ್ನಡ : 8 ರೈತರು ಆತ್ಮಹತ್ಯೆ, 3 ಕುಟುಂಬಗಳಿಗೆ ಪರಿಹಾರ ನೀಡಿಕೆ, 2 ಕುಟುಂಗಳ ಅರ್ಜಿ ತಿರಸ್ಕೃತ

* ಧಾರವಾಡ : 26 ರೈತರು ಆತ್ಮಹತ್ಯೆ, 12 ಕುಟುಂಬಗಳಿಗೆ ಪರಿಹಾರ, 8 ಕುಟುಂಬಗಳ ಅರ್ಜಿ ತಿರಸ್ಕೃತ.

* ಕಲಬುರಗಿ : 16 ರೈತರು ಆತ್ಮಹತ್ಯೆ, 2 ಕುಟುಂಬಗಳಿಗೆ ಪರಿಹಾರ

* ಮೈಸೂರು : 33 ರೈತರು ಆತ್ಮಹತ್ಯೆ, 7 ಕುಟುಂಬಗಳಿಗೆ ಪರಿಹಾರ, 9 ಪ್ರಕರಣಗಳು ತಿರಸ್ಕೃತ

* ಶಿವಮೊಗ್ಗ : 14 ರೈತರು ಆತ್ಮಹತ್ಯೆ, 5 ಕುಟುಂಬಗಳಿಗೆ ಪರಿಹಾರ, ಒಂದು ಕುಟುಂಬದ ಅರ್ಜಿ ತಿರಸ್ಕೃತ

* ಕೋಲಾರ : 8 ರೈತರು ಆತ್ಮಹತ್ಯೆ, 6 ಕುಟುಂಬಕ್ಕೆ ಪರಿಹಾರ

* ಬೆಂಗಳೂರು ಗ್ರಾಮಾಂತರ : ಇಬ್ಬರು ರೈತರು ಆತ್ಮಹತ್ಯೆ, ಓರ್ವ ರೈತನಿಗೆ 1 ಲಕ್ಷ ವಿತರಣೆ

* ಕೊಡಗು : ಐದು ರೈತರು ಆತ್ಮಹತ್ಯೆ, ಯಾರಿಗೂ ಪರಿಹಾರ ದೊರೆತಿಲ್ಲ, 3 ಕುಟುಂಬಗಳ ಅರ್ಜಿ ತಿರಸ್ಕೃತ

* ರಾಮನಗರ : 15 ರೈತರು ಆತ್ಮಹತ್ಯೆ, 3 ಕುಟುಂಬಗಳಿಗೆ ಪರಿಹಾರಕ್ಕಾಗಿ ಅರ್ಜಿ ರವಾನೆಯಾಗಿದೆ

* ಚಿಕ್ಕಬಳ್ಳಾಪುರ : 12 ರೈತರು ಆತ್ಮಹತ್ಯೆ, 2 ಪ್ರಕರಣ ಸದ್ಯದಲ್ಲೇ ಪರಿಹಾರ ವಿತರಣೆ, 3 ಕುಟುಂಬಗಳ ಅರ್ಜಿ ತಿರಸ್ಕೃತ

* ಚಾಮರಾಜನಗರ : 6 ರೈತರು ಆತ್ಮಹತ್ಯೆ, 5 ಕುಟುಂಬಗಳಿಗೆ ಪರಿಹಾರ

* ಬೆಳಗಾವಿ : 31 ರೈತರು ಆತ್ಮಹತ್ಯೆ, 9 ಕುಟುಂಬಗಳಿಗೆ ಪರಿಹಾರ, 7 ಅರ್ಜಿಗಳು ತಿರಸ್ಕೃತ

* ತುಮಕೂರು : 38 ರೈತರು ಆತ್ಮಹತ್ಯೆ, 18 ಕುಟುಂಬಗಳಿಗೆ ಪರಿಹಾರ, 4 ಕುಟುಂಬಗಳ ಅರ್ಜಿ ತಿರಸ್ಕೃತ

* ಚಿತ್ರದುರ್ಗ : 23 ರೈತರು ಆತ್ಮಹತ್ಯೆ, ಒಂದು ಕುಟುಂಬಕ್ಕೆ ಪರಿಹಾರ ಮಮಜೂರಾಗಿದೆ, 16 ಅರ್ಜಿ ತಿರಸ್ಕೃತ

* ಬೀದರ್ : 18 ರೈತರು ಆತ್ಮಹತ್ಯೆ, 9 ಕುಟುಂಬಗಳಿಗೆ ಪರಿಹಾರ, 1 ಕುಟುಂಬದ ಅರ್ಜಿ ತಿರಸ್ಕೃತ

* ವಿಜಯಪುರ : 24 ರೈತರು ಆತ್ಮಹತ್ಯೆ, 13 ಕುಟುಂಬಗಳಿಗೆ ಪರಿಹಾರ

* ದಾವಣಗೆರೆ : 22 ರೈತರು ಆತ್ಮಹತ್ಯೆ, 5 ಕುಟುಂಬಗಳಿಗೆ ಪರಿಹಾರ, 4 ಕುಟುಂಬಗಳ ಅರ್ಜಿ ತಿರಸ್ಕೃತ

* ದಕ್ಷಿಣ ಕನ್ನಡ : ಓರ್ವ ರೈತರ ಆತ್ಮಹತ್ಯೆ ಪರಿಹಾರ ಸಿಕ್ಕಿಲ್ಲ

* ಬಾಗಲಕೋಟೆ : 11 ರೈತರು ಆತ್ಮಹತ್ಯೆ, 4 ಕುಟುಂಬಗಳಿಗೆ ಪರಿಹಾರ, 2 ಕುಟುಂಬಗಳ ಅರ್ಜಿ ತಿರಸ್ಕೃತ

* ಯಾದಗಿರಿ : 16 ರೈತರು ಆತ್ಮಹತ್ಯೆ, 11 ಕುಟುಂಬಗಳಿಗೆ ಪರಿಹಾರ

* ರಾಯಚೂರು : 26 ರೈತರು ಆತ್ಮಹತ್ಯೆ, 9 ಕುಟುಂಬಗಳಿಗೆ ಪರಿಹಾರ, 5 ಕುಟುಂಬಗಳ ಅರ್ಜಿ ತಿರಸ್ಕೃತ

* ಕೊಪ್ಪಳ : 13 ರೈತರು ಆತ್ಮಹತ್ಯೆ, 2 ಕುಟುಂಬಗಳಿಗೆ ಪರಿಹಾರ, 5 ಕುಟುಂಬಗಳ ಅರ್ಜಿ ತಿರಸ್ಕೃತ

* ಮಂಡ್ಯ : 55 ರೈತರು ಆತ್ಮಹತ್ಯೆ, 16 ಕುಟುಂಬಗಳಿಗೆ ಪರಿಹಾರ, 12 ಕುಟುಂಬಗಳ ಅರ್ಜಿ ತಿರಸ್ಕೃತ

* ಚಿಕ್ಕಮಗಳೂರು : 29 ರೈತರು ಆತ್ಮಹತ್ಯೆ, 11 ಕುಟುಂಬಗಳಿಗೆ ಪರಿಹಾರ, 8 ಅರ್ಜಿಗಳು ತಿರಸ್ಕೃತ

* ಬಳ್ಳಾರಿ : 13 ರೈತರು ಆತ್ಮಹತ್ಯೆ, 3 ಕುಟುಂಬಗಳಿಗೆ ಪರಿಹಾರ

English summary
This year 565 farmers committed suicide in Karnataka. Mandya district is take first, 2nd place Haveri district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X