ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಮಾವು ಮೇಳಕ್ಕೆ ತಟ್ಟಿದ ನೀತಿ ಸಂಹಿತೆ ಬಿಸಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 28: ಈ ಬಾರಿ ಮಾವು ಮಾರುಕಟ್ಟೆಗೆ ಬರುವುದು ವಿಳಂಬವಾಗುತ್ತಿದೆ, ಜತೆಗೆ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮಾವು ಮೇಳವನ್ನು ಮೇ 15ರ ನಂತರ ಆಯೋಜಿಸಲಾಗುತ್ತಿದೆ.

ಗುಣಮಟ್ಟದ ಮಾವು ಇನ್ನೂ ಮಾರುಕಟ್ಟೆಗೆ ಬಾರದ ಕಾರಣ ಹಾಗೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಬಾರಿ ಲಾಲ್‌ಬಾಗ್ ನಲ್ಲಿ ಮೇ 15ರ ನಂತರ ಮಾವು ಮೇಳ ಆಯೋಜಿಸಲಾಗುತ್ತಿದೆ. ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲೇ ಮಾವು ಮೇಳ ನಡೆಯುತ್ತಿತ್ತು.

ಅಕಾಲಿಕ ಮಳೆ: ನಿರೀಕ್ಷೆಯಂತೆ ಮಾರುಕಟ್ಟೆ ತಲುಪಲಿದೆಯೇ ಮಾವುಗಳುಅಕಾಲಿಕ ಮಳೆ: ನಿರೀಕ್ಷೆಯಂತೆ ಮಾರುಕಟ್ಟೆ ತಲುಪಲಿದೆಯೇ ಮಾವುಗಳು

ಆದರೆ ಈ ಬಾರಿ ಮಾವು ಬೇಗ ಮಾರುಕಟ್ಟೆಗೆ ಮಾರುಕಟ್ಟೆಗೆ ಅಲ್ಪ ಪ್ರಮಾಣದಲ್ಲಿ ಮಾವು ಆಗಮಿಸುತ್ತಿದೆ. ಆದರೆ ಗುಣಮಟ್ಟದ ಹಣ್ಣುಗಳು ಬರಲು ಇನ್ನೂ ಕೆಲವು ದಿನಗಳು ಬೇಕಾಗುತ್ತದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮೇಳ ಆಯೋಜನೆಯ ದಿನಾಂಕವನ್ನು ಇನ್ನೂ ನಿರ್ಧರಿಸಿಲ್ಲ ಎಂದು ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಕೆ.ಎಂ. ಪರಶಿವಮೂರ್ತಿ ಮಾಹಿತಿ ನೀಡಿದ್ದಾರೆ.

This time, Mango mela in Lalbagh after May 15

ಇದೀಗ ಮಾರುಕಟ್ಟೆಗೆ ಬಂದಿರುವ ಹಣ್ಣು ಹುಳಿಯಾಗಿದ್ದು, ಬೆಲೆಯೂ ದುಬಾರಿಯಾಗಿದೆ. ಒಂದು ಕೆ.ಜಿ ಮಾವಿನ ಬೆಲೆ 150-200ರೂ.ವರೆಗಿದೆ. ಅಮ್ರಪಾಲಿ, ನೀಲಂ, ಕೇಸರ್ ತಳಿಯ ಮಾವು 60-70 ರೂ.ಗೆ ದೊರೆಯುತ್ತಿದೆ. ಆಲ್ಫಾನ್ಸೊ, ಮಲ್ಲಿಕಾ, ಬಾದಾಮಿ ಮತ್ತಿತರ ಬೇಡಿಕೆ ಮಾವಿನ ತಳಿಗಳು ದುಬಾರಿಯಾಗಿದೆ.

ಪ್ರತಿ ವರ್ಷ ಲಾಲ್‌ಬಾಗ್ ನಲ್ಲಿ ಆರಂಭವಾಗುವುದಕ್ಕೂ ಮುನ್ನವೇ ಹಾಪ್‌ಕಾಮ್ಸ್ ನಲ್ಲಿ ಮಾವು ಮೇಳ ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಅಲ್ಲಿಯೂ ತಡಾವಾಗಿ ಅಂದರೆ ಮೇ 15ರ ನಂತರವೇ ಆಯೋಜಿಸಲು ನಿರ್ಧರಿಸಲಾಗಿದೆ. ಮಾವು ಫಸಲು ತಡವಾಗಿದ್ದು, ಇಳುವರಿಯೂ ಕಡಿಮೆಯಿದೆ ಎಂದು ಹಾಪ್‌ಕಾಮ್ಸ್ ವ್ಯವಸ್ಥಾಕ ನಿರ್ದೇಶ ಡಾ. ವಿಶ್ವನಾಥ್ ಹೇಳಿದ್ದಾರೆ.

English summary
It was practice that in the month of April Lalbagh botanical garden attract the people not only for variety flowers but also with amazing mangoes. But this time, mangoes yet to come to market and due to poll code, mango mela will be conducted only after May 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X