ಭಾನುವಾರ ಮೊದಲ ವಿರಳ ಸಂಚಾರ ದಿನ: ಸ್ವಂತ ವಾಹನಗಳಿಗೆ ಬ್ರೇಕ್

Posted By: Nayana
Subscribe to Oneindia Kannada

ಬೆಂಗಳೂರು, ಫೆಬ್ರವರಿ 10 : ಪರಿಸರ ಮಾಲಿನ್ಯ ನಿಯಂತ್ರಣದ ದೃಷ್ಟಿಯಿಂದ ರಾಜ್ಯಾದ್ಯಂತ ಪ್ರತಿ ತಿಂಗಳ ಎರಡನೇ ಭಾನುವಾರ ಲೆಸ್ ಟ್ರಾಫಿಕ್ ಡೇ ಆಚರಿಸಲು ಸರ್ಕಾರ ಮುಂದಾಗಿದ್ದು ಫೆ.11 ರಂದು ಭಾನುವಾರ ವಿಧಾನಸೌಧದ ಮುಂಭಾಗ ಚಾಲನೆ ದೊರೆಯಲಿದೆ.

ಖಾಸಗಿ ವಾಹನಗಳನ್ನು ಬಳಸಬಾರದು ಎನ್ನುವ ನಿಯಮವಿಲ್ಲ ಆದರೆ ಆದಷ್ಟು ಸರ್ಕಾರಿ ವಾಹನಗಳು, ಸಾರ್ವಜನಿಕ ವಾಹನಗಳು, ಆಟೋಗಳನ್ನು ಬಳಸಿ ಎಂದು ಸಾರ್ವಜನಿಕರಿಗೆ ತಿಳಿ ಹೇಳಲಾಗುತ್ತದೆ.
ಭಾನುವಾರದಂದು ಬಿಎಂಟಿಸಿ ಬಸ್ ಗಳ ಸಂಖ್ಯೆಯನ್ನು ಹೆಚ್ಚಿಸಲಾಗತ್ತಿದ್ದು, ದಿನದ ಪಾಸಿನ ಬೆಲೆಯನ್ನು 75 ರಿಂದ 65 ಕ್ಕೆ ಇಳಿಕೆ ಮಾಡಿ ಸಾರ್ವಜನಿಕರಿಗೆ ಹೆಚ್ಚೆಚ್ಚು ಸರ್ಕಾರಿ ಸಾರಿಗೆಯನ್ನು ಬಳಸಲು ಉತ್ತೇಜಿಸಲಾಗುವುದು ಎಂದು ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್ ತಿಳಿಸಿದ್ದಾರೆ.

ವಿರಳ ಸಂಚಾರ ದಿನ : ಸಾರಿಗೆ ಪ್ರಯಾಣ ದರ ಕಡಿತ

ಇನ್ನು ನಮ್ಮ ಮೆಟ್ರೋದಲ್ಲಿ ಕೂಡ ಮೆಟ್ರೋ ಸ್ಮಾರ್ಟ್ ಕಾರ್ಡ್ ಹೊಂದಿರುವವರಿಗೆ ಈಗಾಗಲೇ ನೀಡುತ್ತಿರುವ ಶೇ. 15 ರಿಯಾಯಿತಿ ಹೊರತುಪಡಿಸಿ, ಶೇ25 ಅಷ್ಟು ರಿಯಾಯಿತಿ ನೀಡಲಾಗುವುದು ಎಂದು ನಮ್ಮ ಮೆಟ್ರೋ ಎಂಡಿ ಮಹೇಂದ್ರ ಜೈನ್ ಅವರು ಮಾಹಿತಿ ನೀಡಿದ್ದಾರೆ.

This Sunday , leave your car at home, take a bus instead

ವಿರಳ ಸಂಚಾರ ದಿನದಂದು ಸಾರ್ವಜನಿಕ ಸಾರಿಗೆಯನ್ನು ಜನರು ಹೆಚ್ಚು ಬಳಕೆ ಮಾಡಿ ರಸ್ತೆಯಲ್ಲಾಗುವ ಸಂಚಾರ ದಟ್ಟಣೆ ನಿಯಂತ್ರಣವಾಗಬೇಕು ಪ್ರತಿನಿತ್ಯ ಓಡಾಡುವವರ ಸಂಖ್ಯೆಗಿಂತ ಭಾನುವಾರ ಶೆ.70 ರಷ್ಟು ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಾರಿಗೆ ಇಲಾಖೆ ಆಯುಕ್ತ ಬಿ. ದಯಾನಂದ್ ಹೇಳುವ ಪ್ರಕಾರ ಓಲಾ ಹಾಗೂ ಊಬರ್ ಕಂಪನಿ ಮಾಲೀಕರ ಬಳಿ ಈ ಭಾನುವಾರದಂದು ದರವನ್ನು ಕಡಿಮೆ ಮಾಡುವಂತೆ ಮನವಿ ಮಾಡಲಾಗಿದೆ. ಸಾರ್ವಜನಿಕ ಸಾರಿಗೆ ಅಥವಾ ಸೈಕಲ್ ಬಳಸುವಂತೆ ಸರ್ವಾಜನಿಕರಲ್ಲಿ ಕೂಡ ಮನವಿ ಮಾಡಿದ್ದೇವೆ ಎಂದಿದ್ದಾರೆ.

ಬಿಎಂಟಿಸಿಯು ಪ್ರತಿ ತಿಂಗಳ ನಾಲ್ಕನೇ ದಿನ ಬಿಎಂಟಿಸಿ ಬಸ್ ಡೇ ಅನ್ನು ಪ್ರಾರಂಭಮಾಡಿತ್ತು. ಆದರೆ ಅದು ವಾರಾಂತ್ಯವಲ್ಲದ ಕಾರಣ ಬೇರೆ ದಿನಗಳಂದು ಖಾಸಗಿ ವಾಹನವನ್ನು ನಿಯಂತ್ರಿಸುವುದು ಕಷ್ಟವಾಗಿತ್ತು. ಸರ್ಕಾರವು ಹೊಸ ವಾಹನಗಳ ನೋಂದಣಿಯನ್ನು ಕಡಿಮೆ ಮಾಡಿದರೆ ವಾಹನ ಸಮಚಾರ ದಟ್ಟಣೆಯನ್ನು ನಿಯಂತ್ರಿಸಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Department of transport has called general public to use public transport on every second Sunday of the month as part of less traffic day.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ