ನಿಮ್ಮ ಮುದ್ದಿನ ನಾಯಿ ನಿಮ್ಮೊಂದಿಗಿರಬೇಕೆ? ಮೊದಲು ಲೈಸೆನ್ಸ್ ಮಾಡಿಸಿ

Posted By: Nayana
Subscribe to Oneindia Kannada
   ನಿಮ್ಮ ಮುದ್ದಿನ ನಾಯಿಗೆ ಮರೀದೆ ಲೈಸೆನ್ಸ್ ಪಡೆಯಿರಿ | ಈ ಭಾನುವಾರ ತಪ್ಪದೆ ಮಾಡಿಸಿ| Oneindia Kannada

   ಬೆಂಗಳೂರು, ಏಪ್ರಿಲ್ 17: ನಿಮ್ಮ ಪೆಟ್ ನಿಮ್ಮೊಂದಿಗಿರಬೇಕೆಂದರೆ ಮೊದಲು ಪರವಾನಗಿ ಮಾಡಿಸಿ, ಇಲ್ಲದಿದ್ದರೆ ನಿಮ್ಮ ಮುದ್ದಿನ ನಾಯಿ ನಿಮ್ಮಿಂದ ದೂರವಾದೀತು.

   ಹೌದು ಈಗಾಗಲೇ ಅಪಾರ್ಟ್ ಮೆಂಟ್ ಅಸೋಸಿಯೇಷನ್ ನಿಯಮದ ಪ್ರಕಾರ ಅಪಾರ್ಟ್ ಮೆಂಟ್ ಗಳಲ್ಲಿ ನಾಯಿಗಳನ್ನು ಸಾಕುವಂತಿಲ್ಲ. ಹೀಗಾಗಿ ಅಪಾರ್ಟ್ ಮೆಂಟ್ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದರು. ಹಾಗಾಗಿ ಬಿಬಿಎಂಪಿಯು ಒಂದು ನಿಯಮವನ್ನು ಹೊರತರುತ್ತಿದೆ.

   ನಾಯಿಗಳನ್ನು ಸಾಕಲು ಬಿಬಿಎಂಪಿಯಿಂದ ಅನುಮತಿ ಪಡೆಯಬೇಕೆ?

   ಒಂದೊಮ್ಮೆ ಅಪಾರ್ಟ್ ಮೆಂಟ್ ಗಳಲ್ಲಿ ನಾಯಿಗಳನ್ನು ಸಾಕುವುದಾದರೆ ಕಡ್ಡಾಯವಾಗಿ ಪರವಾನಗಿ ಹೊಂದಿರಬೇಕು. ಇಲ್ಲವಾದಲ್ಲಿ ನಿಮ್ಮ ಮುದ್ದಿನ ನಾಯಿಯನ್ನು ಮರೆತುಬಿಡಿ.

   This Sunday, Get Your pet Dogs licensed

   ಈಗಾಗಲೇ ಭಾರತೀಯ ಪ್ರಾಣಿ ದಯಾಸಂಘವು ಹೈದರಾಬಾದ್, ಚೆನ್ನೈ, ನವದೆಹಲಿಯಲ್ಲಿ ನಿಯಮವನ್ನು ಜಾರಿಗೆ ತಂದಿದೆ. ಇಷ್ಟೇ ಅಲ್ಲದೆ ಹೈದರಾಬಾದ್ ನಲ್ಲಿ ಪರವಾನಗಿ ಇಲ್ಲದೆ ನಾಯಿಯನ್ನು ಸಾಕಿಕೊಂಡಿದ್ದ ಕುಟುಂಬದವರಿಂದ ನಾಯಿಯನ್ನು ವಶಕ್ಕೆ ಪಡೆದಿದ್ದಷ್ಟೇ ಅಲ್ಲದೆ ಪೋಷಕರ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿದೆ.

   ಈ ನಿಯಮ ಜಾರಿಯಾದ ಮೇಲೆ ಎಲ್ಲರೂ ಒಟ್ಟಿಗೆ ಲೈಸನ್ಸ್ ಪಡೆಯಲು ಬರುತ್ತಾರೆ. ಅದಕ್ಕೂ ಮೊದಲೇ ನೀವು ನಾಯಿ ಹೆಸರನ್ನು ನೋಂದಾಯಿಸಿಕೊಳ್ಳಿ ಎಂದು ಎಂದು ಸಿಪಿಸಿಯ ಸಂಸ್ಥಾಪಕಿ ಪ್ರಿಯಾ ಚೆಟ್ಟಿ ರಾಜಗೋಪಾಲ್ ತಿಳಿಸಿದ್ದಾರೆ.

   ಬೀದಿ ನಾಯಿ ಸಮಸ್ಯೆಯೇ? ದೂರು ನೀಡುವುದು ಹೇಗೆ?

   ಕಬ್ಬನ್ ಪಾರ್ಕ್ ಕೆನಿನ್ಸ್ ಹಾಗೂ ಬಿಬಿಎಂಪಿ ಜಂಟಿಯಾಗಿ ಏ.22ರಂದು ಕಬ್ಬನ್ ಉದ್ಯಾನದಲ್ಲಿ ಅಭಿಯಾನವನ್ನು ಹಮ್ಮಿಕೊಂಡಿದೆ. ನಾಯಿ ಮಾಲಿಕರು ಸರ್ಕಾರಿ ಗುರುತಿನ ಚೀಟಿ, ವಿಳಾಸ, ನಾಯಿಗೆ ವಾಕ್ಸಿನೇಷನ್ ಮಾಡಿಸಿರುವ ರಶೀತಿ ಇದ್ಯಾವುದನ್ನೂ ಬೇಕಾದರೂ ನೀಡಿ ಪರವಾನಗಿ ಪಡೆಯಬಹುದು. 110 ರೂ. ದಾಖಲಿಸಿ ಲೈಸೆನ್ಸ್ ಪಡೆಯಬಹುದು. ಅಲ್ಲಿಯೇ ನಾಯಿಗಳಿಗೆ ಆರೋಗ್ಯ ತಪಾಸಣೆಯನ್ನೂ ಕೂಡ ಮಾಡಿಸಬಹುದಾಗಿದೆ. ಬಿಬಿಎಂಪಿಯು 2016ರಿಂದ ಇಲ್ಲಿಯವರೆಗೆ ಕೇಬಲ 200 ಲೈಸೆನ್ಸ್ ಅರ್ಜಿಗಳನ್ನು ಪಡೆದಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   If you love your pet dog but finding it increasingly hard to keep them at your home because of apartment association rules, ensuring that your pet has a license is one of the best measures you can taken to make sure your pet is not taken away from you.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ