'ಅಂತಾರಾಷ್ಟ್ರೀಯ ದರ್ಜೆಯ ಪಾದಚಾರಿ ಮಾರ್ಗ' ಎಲ್ಲಿದೆ ಸ್ವಾಮಿ?!

By: ಮಪ
Subscribe to Oneindia Kannada

ಒಂದು ಫೋಟೋ ಸಾವಿರ ಶಬ್ದಗಳ ಶಕ್ತಿಗೆ ಸಮ ಎಂಬುದು ಕನ್ನಡದಲ್ಲಿ ಪ್ರಚಲಿದಲ್ಲಿರುವ ಉಕ್ತಿ. ಅದಕ್ಕೆ ತಕ್ಕಂತೆ ಈ ಫೋಟೋ ಸಹ ಇದೆ. ಬೆಂಗಳೂರಿನ ರಸ್ತೆಗಳ ಮತ್ತೊಂದು ದುರಂತ ಕತೆಯನ್ನು ಮೌನವಾಗಿ ಹೇಳುತ್ತಾ ಕುಳಿತಿದೆ.

ರಾಜ್ಯ ಸರ್ಕಾರದ 'ಸಾಧನೆ'ಯನ್ನು ಚಿತ್ರ ಎತ್ತಿ ತೊರಿಸುತ್ತಿದೆ. ಮಳೆ ಬಂತು ಎಂದರೆ ಬೆಂಗಳೂರಿನ ಕತೆಯನ್ನು ಬಾಯಲ್ಲಿ ಹೇಳಲು ಸಾದ್ಯವಿಲ್ಲ. ಅನುಭವಿಸಿದವನಿಗೆ ಅದರ "ಮಜಾ" ಗೊತ್ತು. [ಕಿತ್ತುಹೋದ ರಸ್ತೆಗುಂಡಿಗೆ ಪೂಜೆ, ಬಿಬಿಎಂಪಿಗೆ 'ಮಂಗಳಾರತಿ']

karnataka

ಹಾ.. ಜಾಸ್ತಿ ಕತೆ ಬೇಡ.. ಈ ಫೋಟೋವನ್ನು ಒಮ್ಮೆ ದಿಟ್ಟಿಸಿ ನೋಡಿ. ಅಂತಾರಾಷ್ಟ್ರೀಯ ಮಟ್ಟದ ಪಾದಚಾರಿ ಮಾರ್ಗಗಳು. ಅಲ್ಲಾ ಸ್ವಾಮಿ ನಡೆಯಲು ಜಾಗವೆಲ್ಲಿ ಮೊದಲು ಹೇಳಿ. ಆಮೇಲೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಹಾರೊಣ.

ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಜಾಹೀರಾತುಗಳು ಎಲ್ಲೆಡೆ ರಾರಾಜಿಸುತ್ತಿವೆ. ನಾಲ್ಕನೇ ವರ್ಷದೆಡೆಗೆ ಭರವಸಿಗೆಯ ನಡಿಗೆ.. ಇಲ್ಲಿ ನಡೆದುಕೊಂಡು ಹೋಗಲು ಜಾಗವೆಲ್ಲಿದೆ?[ರಸ್ತೆ ನಿಯಮ ಉಲ್ಲಂಘಿಸಿದವನ ಫೋಟೋ ತೆಗೆದಿದ್ದು ತಪ್ಪಾ?]

ಸಾಮಾಜಿಕ ತಾಣದಲ್ಲಿ ಈ ಫೋಟೋ ಭರ್ಜರಿಯಾಗಿ ಹರಿದಾಡುತ್ತಿದೆ. ಜಾಹೀರಾತಿಗೆ ವೆಚ್ಚ ಮಾಡುವ ಹಣವನ್ನು ದುರಸ್ತಿಗೆ ಬಳಸಬಹುದಿತ್ತಲ್ಲ ಎಂಬ ಪ್ರಶ್ನೆಯೂ ನಿಮ್ಮಲ್ಲಿ ಏಳಬಹುದು. ಈ ಜಾಹೀರಾತು ಹಾಕಿದ ಮೇಲೆ ಜಾಗ ಹೀಗಾಯಿತೋ? ಅಥವಾ ಹೀಗಿದ್ದು ಜಾಹೀರಾತನ್ನು ತಂದು ಹಾಕಿದರೋ ಗೊತ್ತಿಲ್ಲ.

ಒಂದಂತೂ ಸತ್ಯ, ಸರ್ಕಾರದ ಕಾಮಗಾರಿಗಳು, ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಜಾಹೀರಾತನ್ನು ಮಾತ್ರ ಸರಿಯಾಗಿ, ಕಣ್ಣಿಗೆ ರಾಚುವಂತೆ ಹಾಕಲಾಗುತ್ತದೆ. ಏನಂತಿರಿ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A picture is worth a thousand words" is an English idiom. It refers to the notion that a complex idea can be conveyed with just a single still image or that an image of a subject conveys its meaning or essence more effectively than a description does. Yes this photo also tells the whole story of Bengaluru road, and Pedestrian path!
Please Wait while comments are loading...