ನಮ್ಮ ಬೆಂಗಳೂರು ಹೀಗಾದರೆ ಚೆನ್ನ.. ವಿಡಿಯೋ ನೋಡಿ

Subscribe to Oneindia Kannada

ಬೆಂಗಳೂರು, ಫೆಬ್ರವರಿ, 15: ಮಹಾನಗರದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸುತ್ತಿದ್ದಾರೆ. ಉತ್ತಮ ರಸ್ತೆ ನಿರ್ಮಾಣ, ಮೇಲ್ಸೇತುವೆ, ಸ್ಕೈ ವಾಕ್ ಗಳ ನಿರ್ಮಾಣವೂ ಚಾಲ್ತಿಯಲ್ಲಿದೆ.

ಇದೆಲ್ಲದರ ನಡುವೆ ಓಕಳಿಪುರ ಸಿಗ್ನಲ್ ಫ್ರೀ ಅಷ್ಟ ಪಥದ ಕಾರಿಡಾರ್ ಈ ವರ್ಷದ ಕೊನೆಯೊಳಗೆ ಮುಗಿಯಬೇಕಿದೆ. ಇದರಿಂದ ರಾಜಾಜಿನಗರ ಕ್ಷೇತ್ರದ ನಾಗರಿಕರಿಗೆ ಅತಿಹೆಚ್ಚು ಅನುಕೂಲವಾಗಲಿದೆ.[ಜಯನಗರದ ಮೃತ್ಯುಕೂಪಕ್ಕೆ ಇನ್ನು ಮುಕ್ತಿ ಸಿಕ್ಕಿಲ್ಲ]

This is our Bengaluru: 8 lane Signal free Corriddor video

ಯೋಜನೆ ಅಂತಿಮವಾದರೆ ಬೆಂಗಳೂರು ನಾಗರಿಕರು ಹೇಗೆ ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಕಾಣಬಹುದು ಎಂಬುದರ ಕಲ್ಪನೆಯನ್ನು ಬಿಜೆಪಿ ನಾಯಕ ಸುರೇಶ್ ಕುಮಾರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.[ಮಹಾನಗರಕ್ಕೆ ವೇಷ ಹೊಂದಿಕೆಯಾಗ್ದಿದ್ರೆ ಅಷ್ಟೇ ಕತೆ!]

ಈ ಯೋಜನೆ ಅನುಷ್ಠಾನಕ್ಕೆ ಕಳೆದ 4 ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದೇನೆ. ನಿಮ್ಮ ಸಲಹೆ ಮತ್ತು ಸೂಚನೆಗಳನ್ನು ನೀಡಬಹುದು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ. ಹಾಗಾದರೆ ನೀವು ಯೋಜನೆಯ ರೂಪುರೇಷೆ ಮತ್ತು ಅದು ಅನುಷ್ಠಾನವಾದ ಮೇಲೆ ಸಿಗುವ ಲಾಭದ ಮೇಲೆ ಒಂದು ನೋಟ ಹರಿಸಿಕೊಂಡು ಬನ್ನಿ.....

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP leader Suresh Kumar posted a video about the Bengaluru Okalipuram 8 lane Signal free Corriddor project. This clipping gives an idea of Okalipuram 8 lane Signal free Corriddor, which once completed will be a great boon to our Rajajinagara Citizens. The project is scheduled to be completed by this year end.
Please Wait while comments are loading...