'ಭೀಮ್ ಆ್ಯಪ್ ಡೌನ್ ಲೋಡ್ ಮಾಡುವುದು ಹೇಗೆ?

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 31: ನವದೆಹಲಿಯಲ್ಲಿ ನರೇಂದ್ರ ಮೋದಿಯವರು ಶುಕ್ರವಾರ ಭೀಮ್( ಭಾರತ್ ಇಂಟರ್ ಫೇಸ್ ಮನಿ) ಎಂಬ ಆಧಾರ್ ಸಹಿತ, ನಗದು ರಹಿತ ತಂತ್ರಾಂಶವನ್ನು ಜಾರಿಗೊಳಿಸಿದ್ದು ಅದನ್ನು ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಅಭಿವೃದ್ದಿ ಪಡಿಸಿದೆ, ತಮ್ಮ ಆಂಡ್ರಾಯ್ದ್ ಫೋನಿನಲ್ಲಿ ಬಳಸಬಹುದಾಗಿದೆ.

ಪ್ರಸ್ತುತ ಭೀಮ್ ಅಪ್ಲಿಕೇಶನ್ ಆಂಡ್ರಾಯ್ಡ್ ಫೋನಿನಲ್ಲಿ ಬಳಕೆಯಾಗುತ್ತಿದ್ದು, ಆಂಡ್ರಾಯ್ಡಿನ ಗೂಗಲ್ ಪ್ಲೇ ಸ್ಠೋರಿನಲ್ಲಿ ಭೀಮ್ ಅಪ್ಲಿಕೇಶನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಎರಡು ಎಂಬಿ ಗಾತ್ರದ ಫೈಲ್ ಬಹುಬೇಗ ಡೌನ್ ಲೋಡ್ ಆಗುತ್ತದೆ. ಅಪ್ಲಿಕೇಶನ ಓಪನ್ ಮಾಡಿಕೊಂಡರೆ ಮೊದಲು ಹಿಂದಿ ಅಥವಾ ಇಂಗ್ಲಿಷ್ ಭಾಷೆಯನ್ನು ಕೇಳುತ್ತದೆ.[ನಗದು ರಹಿತ ವ್ಯವಸ್ಥೆಗೆ 'ಭೀಮ್' ಆ್ಯಪ್ ಬಿಡುಗಡೆಗೊಳಿಸಿದ ಮೋದಿ]

This is how to download the BHIM app on your phone

ನಂತರ ಭೀಮ್ ಬಳಕೆದಾರರಿಗೆ ಸ್ವಾಗತಿಸಿ ಸೆಕ್ಯೂರ್, ಸಿಂಪಲ್, ಸೂಪರ್ ಫಾಸ್ಟ್ ಎಂಬ ನಾಮಾಂಕಿತದೊಂದಿಗೆ ವಿವರವನ್ನು ತಿಳಿಸಲಾಗಿದೆ.

* ಎಲ್ಲ ರೀತಿಯ ವಹಿವಾಟನ್ನು ಸುರಕ್ಷಿತವಾಗಿ (ಸೆಕ್ಯೂರ್) ಯೂನಿಪೈಡ್ ಪೇಮೆಂಟ್ ಇಂಟರ್ ಫೇಸ್(ಯುಪಿಐ) ಮಾಡಲಾಗಿದೆ

This is how to download the BHIM app on your phone

* ಎಲ್ಲ ಹಣವು ನಿಮ್ಮ ಬ್ಯಾಂಕಿನ ಮೂಲಕ ವಹಿವಾಟು ನಡೆಸುವಂತೆ ಸುಲಭ(ಸಿಂಪಲ್) ಮಾಡಲಾಗಿದೆ.

* ಇನ್ನು ಕ್ಯೂ ಆರ್ ಕೋಡ್ ಮೂಲಕ ಸ್ಕಾನ್ ಮಾಡಿ ವೇಗವಾಗಿ(ಸೂಪರ್ ಫಾಸ್ಟ್) ಹಣವನ್ನು ಪಾವತಿಸುವ ಮತ್ತು ಪಡೆಯುವ ಅವಕಾಶವನ್ನು ಮಾಡಿಕೊಡಲಾಗಿದೆ.

ಇನ್ನು ಮುಂದುವರೆದಂತೆ ಎಸ್ ಎಂ ಎಸ್ ಮತ್ತು ಫೋನ್ ಮೂಲಕ ನೋಟಿಫಿಕೇಶನ್ ಇತ್ಯಾದಿಯನ್ನು ಬಳಸಲು ಅವಕಾಶ ನೀಡಲಾಗಿದೆ. ನಂತರ ಪರದೆಯಲ್ಲಿ ಮೂಡುವ ಅವಕಾಶಗಳನ್ನು ಬಳಸಿ ತಮ್ಮ ಬ್ಯಾಂಕಿನ ಖಾತೆ ಸಂಖ್ಯೆಯನ್ನು ನೋಂದಣಿ ಮಾಡಿಕೊಂಡು ಯುಪಿಐ ಪಿನ್ ಪಡೆದು ಬಳಿಕ ನಗದು ವಹಿವಾಟನ್ನು ಮಾಡಬಹುದಾಗಿದೆ. ಪ್ರಸ್ತುತ 32 ಬ್ಯಾಂಕಿನಲ್ಲಿ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ.

This is how to download the BHIM app on your phone

ಇನ್ನು ಈ ಅಪ್ಲಿಕೇಶನ್ ಬಗ್ಗೆ ಸಾರ್ವಜನಿಕರು ಪ್ರತಿಕ್ರಿಯಿಸಿದ್ದು, ಸಿಂಪಲ್ಲಾಗಿದೆ. ಸೂಪರಾಗಿದೆ. ಬಳಸಲು ಸುಲಭ ಇತ್ಯಾದಿ ಮಾತುಗಳನ್ನಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
On Friday, Prime Minister Narendra Modi launched a new mobile payment application called BHIM (Bharat Interface for Money). This app is aimed at making fast and secure payments. Currently the app developed by the National Payment Corporation of India is available only on Android devices.
Please Wait while comments are loading...