ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊದಲ ಬಾರಿಗೆ ಮತಚಲಾಯಿಸಿದ ತೃತೀಯ ಲಿಂಗಿ ಅಕೈ ಪದ್ಮಶಾಲಿ

By Nayana
|
Google Oneindia Kannada News

ಬೆಂಗಳೂರು, ಮೇ 12: ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತೃತೀಯ ಲಿಂಗಿಗಳು ಮತ ಚಲಾಯಿಸಿದ್ದಾರೆ.ಬೆಂಗಳೂರಿನಲ್ಲಿ ಅಕೈ ಪದ್ಮಶಾಲಿ ಹಾಗೂ ಜಂಕಿ ಸೇರಿದಂತೆ ಅನೇಕರು ಮತದಾನ ಮಾಡಿದ್ದಾರೆ.

ಲೈಂಗಿಕ ಅಲ್ಪಸಂಖ್ಯಾತ ಅಥವಾ ಮಂಗಳಮುಖಿಯರ ಪರ ಹೋರಾಟಗಾರ್ತಿ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಅಕೈ ಪದ್ಮಶಾಲಿ ಅವರು ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ.

LIVE: ಇದುವರೆಗೆ ಶೇ.24 ರಷ್ಟು ಮತದಾನ ದಾಖಲು LIVE: ಇದುವರೆಗೆ ಶೇ.24 ರಷ್ಟು ಮತದಾನ ದಾಖಲು

ಈ ಬಗ್ಗೆ ಫೇಸ್ ಬುಕ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ಅವರು, ತಮ್ಮ 16 ವರ್ಷಗಳ ಸತತ ಹೋರಾಟಕ್ಕೆ ಫಲ ಸಂದಿದ್ದು, ಇದೇ ಮೊದಲ ಬಾರಿಗೆ ತಾವು ತಮ್ಮ ಹಕ್ಕನ್ನು ಚಲಾಯಿಸಿದ್ದೇನೆ. ನೀವೂ ಕೂಡ ನಿಮ್ಮ ಹಕ್ಕು ಚಲಾಯಿಸುವ ಮೂಲಕ ಪ್ರಜ್ಞಾವಂತ ಪ್ರಜೆಯಾಗಿ ಎಂದು ಕರೆ ನೀಡಿದ್ದಾರೆ.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

Third gender voters exercises their vote after long struggle

ಸಿವಿ ರಾಮನ್‌ ನಗರ ಮತಗಟ್ಟೆಯಲ್ಲಿ ತೃತೀಯ ಲಿಂಗಿಯಾದಂತಹ ಜಂಕಿ ಸೇರಿದಂತೆ ಮತಗಟ್ಟೆ 161 ರಲ್ಲಿ 35 ತೃತೀಯಲಿಂಗಿಗಳು ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿದ್ದಾರೆ. ಕಳೆದ 16 ವರ್ಷಗಳಿಂದ ನಾನು ನನ್ನ ಹಕ್ಕಿಗಾಗಿ ಹೋರಾಟ ನಡೆಸಿದ್ದೆ, ಆದರೆ ಈ ಬಾರಿ ನಾನು ನನ್ನ ಹಕ್ಕು ಚಲಾಯಿಸಿದ್ದೇನೆ. ತುಂಬಾ ಖುಷಿಯಾಗುತ್ತಿದೆ. ನೀವೂ ಕೂಡ ನಿಮ್ಮ ಹಕ್ಕು ಚಲಾಯಿಸಿ ಎಂದು ಪದ್ಮಶಾಲಿ ಹೇಳಿದ್ದಾರೆ.

Third gender voters exercises their vote after long struggle

ಇನ್ನು ಈ ಹಿಂದೆ ತಮ್ಮ ವಿವಾಹ ನೋಂದಣಿ ಮಾಡಿಸುವ ಮೂಲಕವೂ ದಾಖಲೆ ಬರೆದಿದ್ದರು. ತಮ್ಮ ಹೋರಾಟಗಳ ಮೂಲಕವೇ ಖ್ಯಾತಿಗಳಿಸಿರುವ ಅಕೈ ಪದ್ಮಶಾಲಿ ಅವರಿಗೆ ರಾಜ್ಯ ಸರ್ಕಾರ ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

English summary
Including state awardee Akkai Padmashali, who is struggling for welfare of third gender, many of third gender voter have exercised their vote on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X