ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಚಾರವಿಲ್ಲದ ನಾಲಗೆ, ನೀಚ ಬುದ್ಧಿಯ ಬಿಡು ನಾಲಗೆ : ಸೂಲಿಬೆಲೆ ಸಂದರ್ಶನ

|
Google Oneindia Kannada News

"ಕರ್ನಾಟಕದ ಎಲ್ಲ ಪಕ್ಷಗಳು ತಮ್ಮ ಜನಪ್ರತಿನಿಧಿಗಳಿಗೆ ಸೂಚನೆ ನೀಡಬೇಕು. ಈ ವಿಚಾರದಲ್ಲಿ ಕಾಂಗ್ರೆಸ್- ಬಿಜೆಪಿ ಅಥವಾ ಜೆಡಿಎಸ್ ಎಂಬ ಯಾವ ಭೇದವೂ ಇಲ್ಲ. ನಾಲಗೆ ಹತೋಟಿಯಲ್ಲಿಟ್ಟುಕೊಂಡು ಮಾತನಾಡಬೇಕು. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ. ಅವರ ಬಗ್ಗೆ ಎಂಥ ಹೀನ ಮಟ್ಟದ ಮಾತನಾಡಿದ್ದಾರೆ. ಇದರಿಂದ ಇಡೀ ರಾಜ್ಯಕ್ಕೆ ಅವಮಾನವಾಗಿದೆ" ಎಂದರು ಚಿಂತಕ ಚಕ್ರವರ್ತಿ ಸೂಲಿಬೆಲೆ.

ಟ್ವಿಟ್ಟರ್ ನಲ್ಲಿ ಕ್ಷಮೆ ಯಾಚಿಸಿದ ರೋಷನ್ ಬೇಗ್ಟ್ವಿಟ್ಟರ್ ನಲ್ಲಿ ಕ್ಷಮೆ ಯಾಚಿಸಿದ ರೋಷನ್ ಬೇಗ್

ಪ್ರಧಾನಿ ಮೋದಿ ವಿರುದ್ಧ ಸಚಿವ ರೋಷನ್ ಬೇಗ್ ಆಡಿದ್ದಾರೆ ಎನ್ನಲಾದ ಅವಾಚ್ಯ ಮಾತುಗಳ ವಿರುದ್ಧ 'ಐಯಾಮ್ ಮೋದಿ' ಎಂಬ ಅಭಿಯಾನ ಶುರು ಮಾಡುವುದಾಗಿ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದರು. ಅಭಿಯಾನದ ವಿಚಾರವಾಗಿ ಅವರ ಜತೆ ಒನ್ಇಂಡಿಯಾ ಕನ್ನಡ ಸಂದರ್ಶನ ನಡೆಸಿದೆ.

ರೋಷನ್ ಬೇಗ ವಿವಾದಾತ್ಮಕ ಹೇಳಿಕೆ: ಸೂಲಿಬೆಲೆ ಟ್ವಿಟ್ಟರ್ ನಲ್ಲೇನಿದೆ?ರೋಷನ್ ಬೇಗ ವಿವಾದಾತ್ಮಕ ಹೇಳಿಕೆ: ಸೂಲಿಬೆಲೆ ಟ್ವಿಟ್ಟರ್ ನಲ್ಲೇನಿದೆ?

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿದರು ಎಂಬ ಕಾರಣಕ್ಕಷ್ಟೇ ಈ ಅಭಿಯಾನ ಅಂತ ಯಾರಾದರೂ ಭಾವಿಸಿದ್ದರೆ ಅಂಥವರಿಗೆ ಹೇಳ್ತಿದ್ದೀನಿ: ಅಂತಹ ಹೀನ ಅಭಿರುಚಿಯ, ಕೆಳ ಮಟ್ಟದ ಶಬ್ದವನ್ನು ಸಿದ್ದರಾಮಯ್ಯ ಅವರ ವಿರುದ್ಧ ಬಳಸಿದರೂ ಅದಕ್ಕೆ ವಿರೋಧವಿದೆ. ಈ ಬಗ್ಗೆ ಎಲ್ಲ ಪಕ್ಷಗಳ ಜನ ಪ್ರತಿನಿಧಿಗಳಿಗೂ ಸ್ಪಷ್ಟವಾದ ಸಂದೇಶ ರವಾನಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ಅವರು ನೀಡಿದ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

ಪ್ರಶ್ನೆ: ಪ್ರಧಾನಿ ಮೋದಿ ಅವರ ವಿರುದ್ಧ ಹೀಗೆ ಮಾತನಾಡಿದರು ಎಂಬ ಕಾರಣಕ್ಕೆ ನಿಮ್ಮ ಈ ಅಭಿಯಾನವೇ?

ಪ್ರಶ್ನೆ: ಪ್ರಧಾನಿ ಮೋದಿ ಅವರ ವಿರುದ್ಧ ಹೀಗೆ ಮಾತನಾಡಿದರು ಎಂಬ ಕಾರಣಕ್ಕೆ ನಿಮ್ಮ ಈ ಅಭಿಯಾನವೇ?

ಚಕ್ರವರ್ತಿ ಸೂಲಿಬೆಲೆ: ಮಾತನಾಡಿರುವವರು ಒಂದು ಕ್ಷೇತ್ರದ ಶಾಸಕರಷ್ಟೇ ಅಲ್ಲ. ಅವರು ಇಡೀ ರಾಜ್ಯವನ್ನು ಪ್ರತಿನಿಧಿಸುತ್ತಾರೆ. ಇವರ ಮಾತು ಕೇಳುವವರು ಇದೇನಾ ಕರ್ನಾಟಕದ ಸಂಸ್ಕೃತಿ ಅಂದುಕೊಳ್ಳಲ್ಲವೇ? ಟೀಕೆ- ಟಿಪ್ಪಣಿ, ವಿಮರ್ಶೆ, ಭಿನ್ನ ಅಭಿಪ್ರಾಯಗಳು ಪ್ರಜಾಪ್ರಭುತ್ವದಲ್ಲಿ ಸಹಜ. ಆದರೆ ಅದು ಯಾವ ಮಟ್ಟದಲ್ಲಿರಬೇಕು ಅನ್ನೋದು ಗೊತ್ತಿರಬೇಕು.

ಪ್ರಶ್ನೆ: ಸಚಿವ ರೋಷನ್ ಬೇಗ್ ಕ್ಷಮೆ ಕೇಳಿದ್ದಾರೆ. ನಿಮ್ಮ ಅಭಿಯಾನ ನಿಲ್ಲಿಸ್ತೀರಾ?

ಪ್ರಶ್ನೆ: ಸಚಿವ ರೋಷನ್ ಬೇಗ್ ಕ್ಷಮೆ ಕೇಳಿದ್ದಾರೆ. ನಿಮ್ಮ ಅಭಿಯಾನ ನಿಲ್ಲಿಸ್ತೀರಾ?

ಚಕ್ರವರ್ತಿ ಸೂಲಿಬೆಲೆ: ಓ ಹೌದಾ? ನಿಜಕ್ಕೂ ಸಂತೋಷದ ವಿಚಾರ. ಒಳ್ಳೆ ಕೆಲಸ ಮಾಡಿದ್ದಾರೆ. ಆದರೆ ನಮ್ಮ ಅಭಿಯಾನ ಕಾಂಗ್ರೆಸ್ ನ ಅಥವಾ ರೋಷನ್ ಬೇಗ್ ಅವರ ವಿರುದ್ಧ ಮಾತ್ರ ಆಗಿರಲಿಲ್ಲ. ಅಂಥ ಮಾತನಾಡುವ ಎಲ್ಲ ಪಕ್ಷಗಳ, ಜನಪ್ರತಿನಿಧಿಗಳು- ನಾಯಕರ ವಿರುದ್ಧ ಈ ಅಭಿಯಾನ. ನಾಲಗೆಯನ್ನು ಹತೋಟಿಯಲ್ಲಿಟ್ಟುಕೊಂಡು ಮಾತನಾಡಿ ಎಂಬ ಸಂದೇಶವನ್ನು ಎಲ್ಲ ಪಕ್ಷದವರೂ ಜನ ಪ್ರತಿನಿಧಿಗಳಿಗೆ ನೀಡಬೇಕು.

ಪ್ರಶ್ನೆ: ಜೆಡಿಎಸ್- ಬಿಜೆಪಿ ಮೈತ್ರಿಕೂಟದ ಸರಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ಇಂಥ ಆರೋಪ-ಪ್ರತ್ಯಾರೋಪ ಕೇಳ್ತಿದ್ದೀವಲ್ಲಾ?

ಪ್ರಶ್ನೆ: ಜೆಡಿಎಸ್- ಬಿಜೆಪಿ ಮೈತ್ರಿಕೂಟದ ಸರಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ಇಂಥ ಆರೋಪ-ಪ್ರತ್ಯಾರೋಪ ಕೇಳ್ತಿದ್ದೀವಲ್ಲಾ?

ಚಕ್ರವರ್ತಿ ಸೂಲಿಬೆಲೆ: ನಿಜ. ಆದರೆ ಆರೋಪ- ಪ್ರತ್ಯಾರೋಪ, ಟೀಕೆಗಳು, ವಾದ- ವಿವಾದಗಳು ಬೇಕು. ಆದರೆ ಆರೋಗ್ಯಕರವಾಗಿರಬೇಕು. ಸಭ್ಯತೆಯ ಚೌಕಟ್ಟು ಮೀರಬಾರದು. ಉತ್ತಮ ಸಮಾಜಕ್ಕೆ ಟೀಕೆಗಳು ಬೇಕು. ಆದರೆ ಪದ ಬಳಕೆ ಬಗ್ಗೆ ಪ್ರಜ್ಞೆ ಇರಬೇಕು.

ಪ್ರಶ್ನೆ: ನೀವು ಹೇಳುತ್ತಿರುವುದು ನೈತಿಕತೆಯ ಮಾತಾಯಿತು. ರಾಜಕಾರಣದ ಆಯಾಮದಲ್ಲಿ ಈ ರೀತಿಯ ಟೀಕೆಗಳನ್ನು ಹೇಗೆ ಪರಾಮರ್ಶಿಸುತ್ತೀರಿ?

ಪ್ರಶ್ನೆ: ನೀವು ಹೇಳುತ್ತಿರುವುದು ನೈತಿಕತೆಯ ಮಾತಾಯಿತು. ರಾಜಕಾರಣದ ಆಯಾಮದಲ್ಲಿ ಈ ರೀತಿಯ ಟೀಕೆಗಳನ್ನು ಹೇಗೆ ಪರಾಮರ್ಶಿಸುತ್ತೀರಿ?

ಚಕ್ರವರ್ತಿ ಸೂಲಿಬೆಲೆ: ರಾಜಕೀಯ ಎದುರಾಳಿಗಳನ್ನು ದುರ್ಬಲ ಮಾಡುವುದಕ್ಕೆ ಇಂಥ ಟೀಕೆಗಳನ್ನು ಮಾಡುತ್ತಾರೆ. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗದಂಥ ಆರೋಪಗಳನ್ನು ಮಾಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಇಂಥ ಟೀಕೆಗಳನ್ನು ಮಾಡುತ್ತಾರೆ.

ಈ ಹಿಂದೆ ಮೌತ್ ಕಾ ಸೌದಾಘರ್ ನಂಥ ಟೀಕೆ ಮಾಡಿದ್ದಾಗಿದೆ. ಕಡೇ ಪಕ್ಷ ಆ ಮಾತನ್ನು ಇನ್ನೊಬ್ಬರಿಗೆ ಹೀಗೆ ಅಂದರು ಅಂತ ಹೇಳಬಹುದು. ಆದರೆ ರೋಷನ್ ಬೇಗ್ ಬಳಸಿದ ಮಾತುಗಳು ಇವು ಎಂದು ಮತ್ತೊಮ್ಮೆ ಹೇಳುವುದಕ್ಕೂ ಸಾಧ್ಯವಿಲ್ಲ.

ಪ್ರಶ್ನೆ: ರಾಜಕೀಯಕ್ಕೆ, ಮೌಲ್ಯಯುತ ರಾಜಕಾರಣಕ್ಕೆ ನೀವೇ ಒಂದು ಮಾದರಿ ಯಾಕಾಗಬಾರದು?

ಪ್ರಶ್ನೆ: ರಾಜಕೀಯಕ್ಕೆ, ಮೌಲ್ಯಯುತ ರಾಜಕಾರಣಕ್ಕೆ ನೀವೇ ಒಂದು ಮಾದರಿ ಯಾಕಾಗಬಾರದು?

ಚಕ್ರವರ್ತಿ ಸೂಲಿಬೆಲೆ: ನಾನು ರಾಜಕಾರಣವನ್ನೇ ಮಾಡುತ್ತಿರುವುದು. ಆದರೆ ಅಧಿಕಾರ ಕೇಂದ್ರಿತ ರಾಜಕಾರಣವಲ್ಲ. ಈ ದೇಶಕ್ಕೆ ಒಬ್ಬನೇ ನಾಯಕನನ್ನು ಮೆಚ್ಚಿ ಕೂರುವ ಸ್ಥಿತಿ ಬರಬಾರದು. ಅದಕ್ಕೆ ಪ್ರಜ್ಞಾವಂತ ಮತದಾರರು ರೂಪುಗೊಳ್ಳಬೇಕು. ಆಗ ಒಬ್ಬ ನರೇಂದ್ರ ಮೋದಿಗಾಗಿ ಕಾಯುತ್ತಾ ಕೂರುವ ಅಗತ್ಯ ಇರುವುದಿಲ್ಲ.

ನಾನು ಆ ಪ್ರಯತ್ನದಲ್ಲಿದ್ದೀನಿ. ಸಾರ್ವಜನಿಕವಾಗಿ ಘೋಷಿಸಿಯೂ ಆಗಿದೆ, ನಾನು ರಾಜಕಾರಣಕ್ಕೆ ಬರುವುದಿಲ್ಲ ಅಂತ. ಹಾಗೊಂದು ವೇಳೆ ಬರುವ ಹಾಗಿದ್ದರೆ ಕಳೆದ ಬಾರಿ ನನಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನ ಆಫರ್ ಬಂದಿತ್ತು. ನನಗೆ ಮೋದಿ ಅಲೆಯಲ್ಲಿ ಗೆಲ್ಲುವುದು ಸುಲಭವೂ ಇತ್ತು. ಆದರೆ ನಾನು ಮಾತು ಕೊಟ್ಟಾಗಿದೆ. ಜನರು ನನ್ನ ಬಗ್ಗೆಯೂ ಭರವಸೆ ಕಳೆದುಕೊಳ್ಳುವುದು ಬೇಡ. ರಾಜಕಾರಣಕ್ಕೆ, ಅಧಿಕಾರ ಕೇಂದ್ರಿತ ರಾಜಕಾರಣಕ್ಕೆ ನಾನು ಬರೊಲ್ಲ.

ಪ್ರಶ್ನೆ: ಅಧಿಕಾರ ಇಲ್ಲದೆ ಎಂಥ ಬದಲಾವಣೆ ತರಲು ಸಾಧ್ಯ?

ಪ್ರಶ್ನೆ: ಅಧಿಕಾರ ಇಲ್ಲದೆ ಎಂಥ ಬದಲಾವಣೆ ತರಲು ಸಾಧ್ಯ?

ಚಕ್ರವರ್ತಿ ಸೂಲಿಬೆಲೆ: ಅದಕ್ಕಾಗಿಯೇ ನನ್ನ ಕನಸಿನ ಕರ್ನಾಟಕ ಎಂಬ ಅಭಿಯಾನ ರೂಪಿಸುತ್ತಿದ್ದೇವೆ. ನವೆಂಬರ್ ಒಂದರ ಕನ್ನಡ ರಾಜ್ಯೋತ್ಸವದ ವೇಳೆಗೆ ನಿಮ್ಮೆದುರು ಬರುತ್ತೇವೆ. ಅದರ ಪ್ರಕಾರ ಶೇ ಐವತ್ತರಷ್ಟು ಕೆಲಸ ಜನರೇ ಮಾಡುತ್ತಾರೆ. ಇನ್ನು ಇಪ್ಪತ್ತೈದರಷ್ಟನ್ನು ಅಧಿಕಾರಿಗಳು ಮಾಡುತ್ತಾರೆ. ಅಧಿಕಾರ ಅಗತ್ಯವಿದೆ ಹಾಗೂ ಪ್ರಮುಖವಾದ ಇಪ್ಪತ್ತೈದರಷ್ಟು ಕೆಲಸ ಮಾತ್ರ ರಾಜಕಾರಣಿಗಳ ಪಾಲಿಗೆ ಉಳಿಯುತ್ತದೆ.

ಇನ್ನು ಐದು ವರ್ಷ ಯಾವುದೇ ಸರಕಾರ ಕೆಲಸವೇ ಮಾಡಲಿಲ್ಲ ಅಂದರೂ ಜನರು ಅದಕ್ಕಾಗಿ ಕಾಯುತ್ತಾ ಕೂರಬಾರದು. ನಮ್ಮ ಒಳಿತನ್ನು ನಾವೇ ಮಾಡಿಕೊಳ್ಳಬೇಕು. ಅದಕ್ಕಾಗಿ ನನ್ನ ಕನಸಿನ ಕರ್ನಾಟಕ ಅಭಿಯಾನ ಶುರು ಆಗುತ್ತದೆ. ಇದಕ್ಕೆ ಎಂಥ ಅಧಿಕಾರ ಬೇಕು ಹೇಳಿ.

ಪ್ರಶ್ಸ್ನೆ: ನಿಮ್ಮ ಮಾತು, ಕಾರ್ಯ ವೈಖರಿ, ಸಿದ್ಧಾಂತ ಒಂದು ಪಕ್ಷದ ಪರ ಇರುವಂತಿದೆ. ನೇರವಾಗಿ ಬಿಜೆಪಿ ಪರವಾಗಿ ಇರುವಂತಿದೆಯಲ್ಲಾ?

ಪ್ರಶ್ಸ್ನೆ: ನಿಮ್ಮ ಮಾತು, ಕಾರ್ಯ ವೈಖರಿ, ಸಿದ್ಧಾಂತ ಒಂದು ಪಕ್ಷದ ಪರ ಇರುವಂತಿದೆ. ನೇರವಾಗಿ ಬಿಜೆಪಿ ಪರವಾಗಿ ಇರುವಂತಿದೆಯಲ್ಲಾ?

ಚಕ್ರವರ್ತಿ ಸೂಲಿಬೆಲೆ: ನನಗೆ ನರೇಂದ್ರ ಮೋದಿ ಅವರ ಕಾರ್ಯವೈಖರಿ ಇಷ್ಟ. ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಮಾಡಿದ ಕೆಲಸಗಳನ್ನು ಕಣ್ಣಾರೆ ನೋಡಿದ್ದೀನಿ. ರಾಜ್ಯದ- ದೇಶದ ಉದ್ಧಾರಕ್ಕೆ ಕೆಲಸ ಮಾಡುವ ಯಾವುದೇ ಪಕ್ಷದ ನಾಯಕರಿರಲಿ, ಅವರನ್ನು ನಮ್ಮ ಹೆಗಲ ಮೇಲಿಟ್ಟುಕೊಂಡು ನಡೆಸುತ್ತೇವೆ. ಮೋದಿ ಹೆಸರು ಹೇಳಿದಾಕ್ಷಣ ಬಿಜೆಪಿಯವನು ಅಂತ ಬ್ರ್ಯಾಂಡ್ ಮಾಡಿದರೆ ಹೇಗೆ?

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿರುವಾಗ ಮೂವರು ಮುಖ್ಯಮಂತ್ರಿಗಳನ್ನು ಮಾಡಿದ್ದಕ್ಕೆ ಟೀಕೆ ಮಾಡಿದ್ದೇನೆ. ಶಾಸ್ತ್ರೀಜಿ ಆಡಳಿತ ವೈಖರಿ, ಇಂದಿರಾ ಗಾಂಧಿಯವರ ಬಾಂಗ್ಲಾ ವಿಮೋಚನೆ ಇವೆಲ್ಲವನ್ನು ಮೆಚ್ಚಿಕೊಂಡಿದ್ದೇವೆ. ಇದರ ಹೊರತಾಗಿಯೂ ಬ್ರ್ಯಾಂಡ್ ಮಾಡುವುದಾದರೆ ನಾವೇನೂ ಮಾಡುವುದಕ್ಕೆ ಸಾಧ್ಯವಿಲ್ಲ.

English summary
Thinker Chakravarthy Sulibele exclusive interview about Iam Modi campaign from Oneindia Kannada. He speaks about political situation and how personal attack become more in recent days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X