ಡಿಐಜಿ ಕಚೇರಿಗೆ ಸಿಸಿಟಿವಿ, ಹತ್ತಿ ಕ್ಷೇತ್ರೋತ್ಸವ, ಯೋಗ ಸ್ಪರ್ಧೆ

Posted By:
Subscribe to Oneindia Kannada

ಬೆಂಗಳೂರು,ಡಿಸೆಂಬರ್ 7: ರಾಜ್ಯದಲ್ಲಿ ಕೆ.ಸಿ. ವ್ಯಾಲಿ ಕಾಮಗಾರಿಗೆ ಸಚಿವ ಟಿ.ಬಿ.ಜಯಚಂದ್ರ ಚಾಲನೆ ನೀಡಿದರು. ಬೆಂಗಳೂರಿನಲ್ಲಿ ಗೃಹಸಚಿವ ಡಿಐಜಿ ಕಚೇರಿಯಲ್ಲಿ ಸಿಸಿಟಿವಿ ಅಳವಡಿಕೆ. ನಿಯಂತ್ರಣ ಕೊಠಡಿಯನ್ನು ಗೃಹ ಸಚಿವ ಜಿ ಪರಮೇಶ್ವರ್ ಉದ್ಘಾಟಸಿದರು.

ದಾರವಾಡದಲ್ಲಿ ಹತ್ತಿಬೆಳೆ ಕ್ಷೇತ್ರೋತ್ಸವ ನಡೆದಿದೆ. ಬಳ್ಳಾರಿಯಲ್ಲಿ ಯೋಗ ಸ್ಫರ್ಧೆ ಪ್ರಾರಂಭ ಗೊಂಡಿದೆ. ಬಳ್ಳಾರಿಯಲ್ಲಿ ವಿಶ್ವ ಮಣ್ಣು ದಿನಾಚರಣೆ, 12 ಲಕ್ಷ ಮಣ್ಣಿನ ಪರೀಕ್ಷೆಯನ್ನು ನಡೆಸಿರುವುದಾಗಿ ಕೃಷಿ ಸಚಿವ ಕೃಷ್ಣಭೈರೇಗೌಡ ತಿಳಿಸಿದರು. ಗದಗದಲ್ಲಿ ಪರಿನಿರ್ವಾಣ ದಿನಾಚರಣೆಯನ್ನು ಗದಗ ಜಿಲ್ಲೆಯ ಜಿಲ್ಲಾಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ನಡೆಸಿಕೊಟ್ಟಿದ್ದು ವಿವಿಧ ಕಾಮಗಾರಿಗಳು ಚಿತ್ರ ಮಾಹತಿ ಇಲ್ಲಿದೆ

ಕೆ.ಸಿ.ವ್ಯಾಲಿ ಪೈಪ್ ಲೈನ್ ಕಾಮಗಾರಿಗೆ ಚಾಲನೆ

ಕೆ.ಸಿ.ವ್ಯಾಲಿ ಪೈಪ್ ಲೈನ್ ಕಾಮಗಾರಿಗೆ ಚಾಲನೆ

ಬೆಂಗಳೂರು ನಗರದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಒಟ್ಟು 126 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಕಾಮಗಾರಿಯ ಕೋರಮಂಗಲ ಮತ್ತು ಚಲ್ಲಘಟ್ಟ ಎಸ್ ಟಿ ಪಿ ಸ್ಥಾವರದಲ್ಲಿ ಜಾಕ್ವೆಲ್ ಕಂ ಪಂಪ್ ಹೌಸ್, ಸ್ಟಾಫ್ ಕ್ವಾಟ್ರಸ್ ನಿಂದ ಬೆಳ್ಳಂದೂರು ಎಸ್ ಟಿ ಪಿ ವರೆಗೆ ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆ ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಟಿ.ಬಿ.ಜಯಚಂದ್ರ ಅವರು ಚಾಲನೆ ನೀಡಿದರು.

ಡಿಐಜಿ ಕಚೇರಿಯಲ್ಲಿ ಸಿಸಿಟಿವಿ ಸೇವೆಗೆ ಜಿ. ಪರಮೇಶ್ವರ ಚಾಲನೆ

ಡಿಐಜಿ ಕಚೇರಿಯಲ್ಲಿ ಸಿಸಿಟಿವಿ ಸೇವೆಗೆ ಜಿ. ಪರಮೇಶ್ವರ ಚಾಲನೆ

ಗೃಹ ಸಚಿವ ಜಿ ಪರಮೇಶ್ವರ್ ಅವರು ಡಿಜಿಪಿ (ಕಾರಾಗೃಹ) ಕಚೇರಿಯಲ್ಲಿ ಸಿಸಿಟಿವಿ ನಿಯಂತ್ರಣ ಕೊಠಡಿಯನ್ನು ಉದ್ಘಾಟಿಸಿದರು. ಇದೇ ಸಂಧರ್ಭದಲ್ಲಿ ರಾಷ್ಟ್ರಪತಿ ಪದಕ ಪುರಸ್ಕೃತರಾದ ಪೋಲೀಸ್ ಅದಿಕಾರಿಗಳಿಗೆ ಪದಕ ಪ್ರಧಾನ ಮಾಡಿದರು, ಕಾರಾಗೃಹ ಡಿಜಿಪಿ ಸತ್ಯನಾರಾಯಣ ರಾವ್ ಎಚ್ ಎನ್ ಉಪಸ್ಥಿತರಿದ್ದರು.

ಹತ್ತಿ ಬೆಳೆ ಕ್ಷೇತ್ರೋತ್ಸವಕ್ಕೆ ಚಾಲನೆ

ಹತ್ತಿ ಬೆಳೆ ಕ್ಷೇತ್ರೋತ್ಸವಕ್ಕೆ ಚಾಲನೆ

ಧಾರವಾಡದ ಹೆಬ್ಬಳ್ಳಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ, ಹತ್ತಿ ಬೆಳೆ ಕ್ಷೇತ್ರೋತ್ಸವವನ್ನು ಗಣಿ ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಉದ್ಘಾಟಿಸಿದರು.

ಬಳ್ಳಾರಿಯಲ್ಲಿ ಯೋಗ ಸ್ಪರ್ಧೆ

ಬಳ್ಳಾರಿಯಲ್ಲಿ ಯೋಗ ಸ್ಪರ್ಧೆ

ಬಳ್ಳಾರಿಯಲ್ಲಿ ರಾಜ್ಯಮಟ್ಟದ ಪಿಯುಸಿ ವಿದ್ಯಾರ್ಥಿಗಳ ಯೋಗ ಸ್ಪರ್ಧೆಗೆ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಜ್ಯದ 30 ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಎರಡು ದಿನಗಳ ಕಾಲ ಈ ಸ್ಪರ್ಧೆ ನಡೆಯಲಿದೆ.

ಬಳ್ಳಾರಿಯಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರನೆ

ಬಳ್ಳಾರಿಯಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರನೆ

ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಕೂರಿಗೆ ಬಿತ್ತನೆ ಭತ್ತ ಕ್ಷೇತ್ರೋತ್ಸವವನ್ನು ಕೃಷಿ ಸಚಿವ ಕೃಷ್ಣ ಭೈರೇಗೌಡ ಉದ್ಘಾಟಿಸಿದರು. ಬಳ್ಳಾರಿ ತಾಲೂಕಿನ ಚರಕುಂಟ ಗ್ರಾಮದಲ್ಲಿ ಕೃಷಿ ಇಲಾಖೆ ಕಾರ್ಯಕ್ರಮ ಆಯೋಜಿಸಿತ್ತು.ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಸ್ಥಳಗಳಿಂದ ರೈತರು ಆಗಮಿಸಿದರು.

ರಾಜ್ಯದಲ್ಲಿ 12 ಲಕ್ಷ ಮಣ್ಣಿನ ಮಾದರಿ ಪರೀಕ್ಷೆ: ಕೃಷಿ ಸಚಿವ

ರಾಜ್ಯದಲ್ಲಿ 12 ಲಕ್ಷ ಮಣ್ಣಿನ ಮಾದರಿ ಪರೀಕ್ಷೆ: ಕೃಷಿ ಸಚಿವ

ಕೃಷಿ ಇಲಾಖೆ ಸದ್ಯ ರೈತರ 12 ಲಕ್ಷ ಮಣ್ಣಿನ ಮಾದರಿಗಳನ್ನು ಪರೀಕ್ಷೆಗೆ ನಡೆಸಲಾಗಿದೆ. ಮುಂದಿನ ಆರು ತಿಂಗಳಿನಲ್ಲಿ 16.5 ಲಕ್ಷ ಮಣ್ಣಿನ ಮಾದರಿಗಳನ್ನು ಪರೀಕ್ಷೆ ಮಾಡುವ ಗುರಿ ಹೊಂದಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದರು.

ಗದಗದಲ್ಲಿ ಮಹಾ ಪರಿನಿರ್ವಾಣ ದಿನ

ಗದಗದಲ್ಲಿ ಮಹಾ ಪರಿನಿರ್ವಾಣ ದಿನ

ಸ೦ವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ. ಆರ್. ಅ೦ಬೇಡ್ಕರ್ ರವರ 60ನೇ ಮಹಾ ಪರಿನಿರ್ವಾಣ ದಿನಾಚರಣೆ ಗದಗದಲ್ಲಿ ನಡೆಯಿತು. ಗ್ರಾಮೀಣಾಭಿವೃಧ್ದಿ ಹಾಗೂ ಪ೦ಚಾಯತ್ ರಾಜ್ ಇಲಾಖೆ ಸಚಿವ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ್ ಅವರು ಗದಗ ಬೆಟಗೇರಿ ನಗರ ಸಬೆ ಆವರಣದಲ್ಲಿರುವ ಡಾ. ಅ೦ಬೇಡ್ಕರ್ ಪ್ರತಿಮೆಗೆ ಹೂ ಮಾಲೆ ಹಾಕಿ ಗೌರವ ಸಲ್ಲಿಸಿದರು. ಡಾ. ಅ೦ಬೇಡ್ಕರ್ ವರ ಜೀವನ ನಮಗೆಲ್ಲರಿಗೂ ಆದಶ೯ಪ್ರಾಯವಾಗಲಿ ಎ೦ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
some development program are there in karnataka in some district. K.C.Vyali work to pipe line, bengaluru, DIG's office to drive the CCTV service, 12 lakh in the state of the soil sample test says krishna bairegowda in ballary etc.
Please Wait while comments are loading...