ಟೆಕ್ಕಿಗೆ ಸಾವು ತಂದ ಹೊಸವರ್ಷ, ಮನೆಯಲ್ಲಿ ದುಃಖದ ಹೊಳೆ

Posted By:
Subscribe to Oneindia Kannada

ಬೆಂಗಳೂರು, ಜನವರಿ.02: ಹೊಸವರ್ಷ ಎಲ್ಲರ ಪಾಲಿಗೆ ಸಂತಸದ ಹೊಳೆಯನ್ನೇ ಹರಿಸಿದರೆ, ಬೆಂಗಳೂರಿನ ಒಂದು ಕುಟುಂಬ ಮತ್ತು ಕೆಲವು ಸ್ನೇಹಿತರಿಗೆ ಎಂದೂ ಮಾಸದ ದುಃಖ ತಂದಿದೆ. ಹೊಸ ವರ್ಷ ಪಾರ್ಟಿ ಮುಗಿಸಿದ ಟೆಕ್ಕಿಯೊಬ್ಬ ಶುಕ್ರವಾರ ಬಾಲ್ಕನಿಯಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ.

ಬಾಲ್ಕನಿಯಿಂದ ಬಿದ್ದು ಸಾವನ್ನಪ್ಪಿದ ವ್ಯಕ್ತಿಯೇ ಶಿವಕೃಷ್ಣ (27). ಈತ ತೆಲಂಗಾಣದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸಿದ್ದನು. ಈತನ ಕುಟುಂಬದವರು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಸವಾಗಿದ್ದರು.[ಹೊಸವರ್ಷ ಬಂಪರ್, ಸ್ಪೈಸ್ ಜೆಟ್ ಪ್ರಯಾಣ ದರ ಕಡಿತ]

The techie died when fell down the balcony after new year party in Bengaluru

ಶಿವಕೃಷ್ಣ ಮತ್ತು ಆತನ ಸ್ನೇಹಿತರು ಗುರುವಾರ ಸಂಜೆ ತನ್ನ ಬೆಂಗಳೂರಿನ ಮನೆಯಲ್ಲಿ ಹೊಸವರ್ಷದ ಪಾರ್ಟಿ ಮುಗಿಸಿದ್ದಾರೆ. ಹೊಸವರ್ಷದ ಸಂತೋಷದಲ್ಲಿದ್ದ ಆತ ಕುಟುಂಬದ ಮಂದಿ ಮತ್ತು ಇನ್ನಿತರ ಸ್ನೇಹಿತರಿಗೆ ಹೊಸವರ್ಷ ಶುಭಾಶಯ ತಿಳಿಸಲು ಬಾಲ್ಕನಿಗೆ ತೆರಳಿದ್ದಾನೆ.

ಕರೆ ಮಾಡುವ ಸಂದರ್ಭದಲ್ಲಿ ಬಾಲ್ಕನಿಗೆ ಹಾಕಿರುವ ಕಂಬಿ ಮೇಲೆ ಕುಳಿತು ಮದುವೆಯಾಗುವ ಹುಡುಗಿಯೊಂದಿಗೆ ಮಾತನಾಡಿದ್ದಾನೆ. ಆಗ ಆತನ ಬ್ಯಾಲೆನ್ಸ್ ತಪ್ಪಿದ್ದು ಬಾಲ್ಕನಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಈ ಘಟನೆ ಸುಮಾರು ಶುಕ್ರವಾರ 2 ಗಂಟೆಯಲ್ಲಿ ನಡೆದಿದ್ದು, 4.30ರವರೆಗೆ ಈ ವಿಚಾರ ಯಾರಿಗೂ ತಿಳಿದೇ ಇರಲಿಲ್ಲ.[2015ರ ಕೊನೆಗಳಿಗೆಯಲ್ಲಿ ಕಂಡ ಸೂರ್ಯನ ನಾನಾ ಚಿತ್ತಾರ]

ಬಳಿಕ ರಕ್ತಸಿಕ್ತವಾಗಿದ್ದ ಶಿವಕೃಷ್ಣನನ್ನು ಕಂಡ ನೆರೆಹೊರೆಯದವರು ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತ ಬದುಕುಳಿಯಲಿಲ್ಲ. ಶಿವಕೃಷ್ಣ ಫೋನಿನಲ್ಲಿ ಮಾತನಾಡುವ ವೇಳೆಗೆ ಆತನ ಕೈಯಲ್ಲಿದ್ದ ಸಿಗರೇಟ್ ಮತ್ತು ಲೈಟರ್ ಕೆಳಗೆ ಬಿದ್ದಿದೆ. ಅದನ್ನು ನೋಡಲು ಹೋಗಿ ಆತನಿಗೆ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರಬಹುದೆಂದು ಪೊಲೀಸರು ಶಂಕಿಸಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The techie Shiva Krishna(27)accidently fell off the balcony and died in the wee hours of Friday morning on January 2nd in Bengaluru. worked as lab technician was from Telangana and was living in Whitefield, Bengaluru for the past 4 years.
Please Wait while comments are loading...