ಕಡ್ಲೆಕಾಯಿ ಪರಿಷೆಯಲ್ಲಿ ಕಡ್ಲೆಕಾಯಿ ಬೇಡಿ ಅಮಾನತುಗೊಂಡ ಪೊಲೀಸ್ ಪೇದೆ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 15 : ಬೆಂಗಳೂರಿನ ಬಸವನಗುಡಿಯಲ್ಲಿ ನಡೆಯುತ್ತಿರುವ ಕಡಲೆಕಾಯಿ ಪರಿಷೆಯಲ್ಲಿ ಮಾಮೂಲಿ ರೂಪದಲ್ಲಿ ವ್ಯಾಪಾರಿಗಳಿಂದ ಅಕ್ರಮವಾಗಿ ಕಡಲೆಕಾಯಿಯನ್ನು ಸಂಗ್ರಹಿಸಿದ್ದ ಪೇದೆಯನ್ನು ಅಮಾನತು ಮಾಡಲಾಗಿದೆ.

ಎಸ್ ಪಿ ಮಂಡಕ್ಕಿ ಅಮಾನತುಗೊಂಡಿರುವ ಪೇದೆ. ಸಿಎಆರ್ ಡಿಸಿಪಿ ತಿಮ್ಮಣ್ಣನವರ್ ಅವರು ಎಸ್ ಪಿ ಮಂಡಕ್ಕಿ ಅವರನ್ನು ಅಮಾನತು ಮಾಡಿ ಬುಧವಾರ ಆದೇಶ ಹೊರಡಿಸಿದ್ದಾರೆ.

The Police constable suspended for asking groundnuts in kadlekai parishe at Basavanagudi

ಸೋಮವಾರದಿಂದ ಬಸವನಗುಡಿಯಲ್ಲಿ ಆರಂಭವಾಗಿರುವ ಕಡ್ಲೆಕಾಯಿ ಪರಿಷೆ ವೇಳೆ ಪೊಲೀಸ್ ಪೇದೆ ಸಣ್ಣದಾದ ಚೀಲವೊಂದನ್ನು ಹಿಡಿದುಕೊಂಡು ಕಡ್ಲೆಕಾಯಿ ಬೇಡುತ್ತಿರುವುದನ್ನು ನೆರೆದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ಪೇದೆಯ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Police constable SP Mandakki suspended for asking groundnuts from traders in Kadlekai Parishe at Basavanagudi, Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ