ಕಿಂಗ್ ಆಫ್ ಗುಡ್ ಟೈಮ್ ಮಲ್ಯ ಈಗ ಟ್ರಾಲ್ ಕಿಂಗ್

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 12: ಉದ್ಯಮಿ ವಿಜಯ್ ಮಲ್ಯ ಎಲ್ಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಾಲ ಯಾವಾಗ ತೀರಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಯಾರ ಬಳಿಯೂ ಇಲ್ಲ. ಬ್ಯಾಂಕುಗಳಿಂದ ತಪ್ಪಿಸಿಕೊಂಡು ಲಂಡನ್ನಿನಲ್ಲಿ ಸ್ಕಾಚ್ ಹೀರುತ್ತಿರುವ ಮಲ್ಯರನ್ನು ಟ್ರಾಲ್ ಹೈಕ್ಳು, ಟ್ರಾಲ್ ಬೆಂಗಳೂರು ಸೇರಿದಂತೆ ಅಣಕು ಪ್ರಿಯರು ಹಿಡಿದು ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಹಾಕಿ ಜನರನ್ನು ರಂಜಿಸಿದ್ದಾರೆ.[ಸಂಥಿಂಗ್ ವಿತ್ ಶಾಮ್ ನಲ್ಲಿ ಮಲ್ಯ, ದರ್ಶನ್ ಬಗ್ಗೆ, ಕ್ಲಿಕ್ ಮಾಡಿ]

ಮಲ್ಯ ಅವರು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಗೆ ರಾಜೀನಾಮೆ ಇತ್ತು ಲಂಡನ್ನಿಗೆ ಹಾರಿದ ಸುದ್ದಿ ಬರುತ್ತಿದ್ದಂತೆ 'ಅರುವತ್ತಕ್ಕೆ ಅರಳು ಮರಳು, ಅಡ್ವಾಣಿಯಂತಾದ ಮಲ್ಯ ಎಂದು ಟ್ರಾಲ್ ಮಾಡಲಾಗಿತ್ತು.[ಮಲ್ಯ ಟ್ವೀಟ್ ಸಮಜಾಯಿಷಿಗೆ ಸಿಬಿಐನಿಂದ ಗುದ್ದು]

ಇತ್ತೀಚೆಗಷ್ಟೇ 60ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಮಲ್ಯ ಅವರ ಮುಂದಿನ ನಡೆ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಸದ್ಯಕ್ಕೆ ಅಧಿಕಾರವಿಲ್ಲದ ಸ್ಥಾಪಕನಾಗಿ ಮಲ್ಯ ಅವರಿರುತ್ತಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಎಫ್ 1 ವಾಹನ ಓಡಿಸಿಕೊಂಡು ಸ್ಕಾಚ್ ಹಿರುವುದು ಸದ್ಯದ ಯೋಜನೆ.

ಉದ್ದೇಶಪೂರ್ವಕ ಸುಸ್ತಿದಾರನಾಗಿ ಬ್ಯಾಂಕ್ ಗಳಿಗೆ ಸುಸ್ತು ಮಾಡಿರುವ ಬಂಡ ಅಲ್ಲ ಬಹದ್ದೂರ್. ಮಲ್ಯ ಯಾವತ್ತಿಗೂ 'ಕಿಂಗ್ ಆಫ್ ಗುಡ್ ಟೈಮ್' ಈಗ ಟ್ರಾಲ್ ಗಳಲ್ಲಿ ಕಿಂಗ್ ಆಗುತ್ತಿದ್ದಾರೆ

ಚಾಲಾಕಿ ಮಲ್ಯ ಯಾರ ಹಿಡಿತಕ್ಕೂ ಸಿಗುತ್ತಿಲ್ಲ

ಚಾಲಾಕಿ ಮಲ್ಯ ಯಾರ ಹಿಡಿತಕ್ಕೂ ಸಿಗುತ್ತಿಲ್ಲ

ಮಲ್ಯ ಅವರು ಕಾನೂನು ಪ್ರಕಾರವಾಗಿ ನಡೆದುಕೊಳ್ಳುತ್ತಿದ್ದು, ಆಸ್ತಿ ಹರಾಜು ಹಾಕಿದರೂ ಬ್ಯಾಂಕ್ ಗಳಿಗೆ ಅಸಲು ಕೂಡಾ ಸಿಗದಂತೆ ಮಾಡಿಬಿಟ್ಟಿದ್ದಾರೆ. ಬ್ರಿಟಿಷರನ್ನು ಹಾಳು ಮಾಡಲು ಎಲ್ಲಾ ರಿಟೈರ್ ಆದವರು ಅಲ್ಲಿ ಹೋಗಿ ನೆಲೆಸಿದರೆ ಸಾಕು ಎಂದು ಪ್ರತಿಕ್ರಿಯೆಗಳು ಬಂದಿವೆ.

ಮಲ್ಯ ಈಗ ಟ್ರಾಲ್ ಕಿಂಗ್

ಮಲ್ಯ ಈಗ ಟ್ರಾಲ್ ಕಿಂಗ್

ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ನ ಸ್ಥಾಪಕ ಮಲ್ಯರ ಮನಸ್ಥಿತಿ ಹೇಗಿರುತ್ತದೆ

ಎದ್ದೇಳು ಮಂಜುನಾಥ ಸ್ಟೈಲಲ್ಲಿ ಸಾಲ ಕೇಳಿದರೆ

ಎದ್ದೇಳು ಮಂಜುನಾಥ ಸ್ಟೈಲಲ್ಲಿ ಸಾಲ ಕೇಳಿದರೆ

ಎದ್ದೇಳು ಮಂಜುನಾಥ ಸ್ಟೈಲಲ್ಲಿ ಮಲ್ಯ ಸಾಲ ಕೇಳಿದರೆ ಹೇಗೆ

ಮಲ್ಯ ಈಗ ಏನು ಮಾಡುತ್ತಿರಬಹುದು?

ಮಲ್ಯ ಈಗ ಏನು ಮಾಡುತ್ತಿರಬಹುದು?

ಮಲ್ಯ ಈಗ ಏನು ಮಾಡುತ್ತಿರಬಹುದು? ಇಲ್ಲಿದೆ ಉತ್ತರ

ಶಿವ ಅಂತಾ ಹೋಗುತ್ತಿದೆ ರೋಡಿನಲ್ಲಿ

ಶಿವ ಅಂತಾ ಹೋಗುತ್ತಿದೆ ರೋಡಿನಲ್ಲಿ

ಶಿವ ಅಂತಾ ಹೋಗುತ್ತಿದೆ ರೋಡಿನಲ್ಲಿ ಸಿಕ್ಕಾಪಟ್ಟೆ ಸಾಲ ಇತ್ತು

ಸಾಲ ಮಾಡಿ ತುಪ್ಪ ತಿನ್ನು

ಸಾಲ ಮಾಡಿ ತುಪ್ಪ ತಿನ್ನು

ಸಾಲ ಮಾಡಿ ತುಪ್ಪ ತಿನ್ನು ಅನ್ನೋದು ಸರಿ, ರಾಗಿಣಿ ಹತ್ತಿರ ಬೇಕಾದರೂ ಹೋಗ್ತೇನೆ

ಎ ಚಿತ್ರದ ದೃಶ್ಯ ಹಾಡು ಕೂಡಾ ಟ್ರಾಲ್

ಎ ಚಿತ್ರದ ದೃಶ್ಯ ಹಾಡು ಕೂಡಾ ಟ್ರಾಲ್

ಎ ಚಿತ್ರದ ದೃಶ್ಯ ಹಾಡು ಕೂಡಾ ಟ್ರಾಲ್ ಆಗಲು ಮಲ್ಯ ಕಾರಣರಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
While banks struggle to recover their loans from the former chairman of liquor company United Spirits, Social sites has gone crazy with trolls about Indian Businessman, politician Vijay Mallya.
Please Wait while comments are loading...