ರಾಜಧಾನಿಯಲ್ಲಿ ಮೇಳೈಸಿದ ಆಕರ್ಷಕ ಕೊಡವ ಸಾಂಸ್ಕೃತಿಕ ಸಂಗಮ

By: ಬಿಎಂ ಲವಕುಮಾರ್
Subscribe to Oneindia Kannada

ಬೆಂಗಳೂರು, ಜುಲೈ 31: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ದಾಸರಹಳ್ಳಿಯ ಕೊಡವ ಅಸೋಸಿಯೇಷನ್ ಜಂಟಿ ಆಶ್ರಯದಲ್ಲಿ ಬೆಂಗಳೂರಿನ ದಾಸರಹಳ್ಳಿಯ ಸರಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಭಾನುವಾರ ಕೊಡವ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗಮ ನಡೆಯಿತು.

ರಾಜಧಾನಿ ಬೆಂಗಳೂರಿನಲ್ಲಿ ಕೊಡಗಿನ ಸಾಂಸ್ಕೃತಿಕ ಕಂಪನ್ನು ಪಸರಿಸುವಲ್ಲಿ ಇದು ಯಶಸ್ವಿಯಾಯಿತು.

ಭಾಗಮಂಡಲದಲ್ಲಿ ಸಂಭ್ರಮದ ಜರಗಿದ ಪೊಲಿಂಕಾನ ಉತ್ಸವ

ದಾಸರಳ್ಳಿಯ ಪ್ರೌಢಶಾಲೆಯ ಮೈದಾನದಲ್ಲಿ 21 ಸುತ್ತಿನ ಕುಶಾಲತೋಪು ಹಾರಿಸುವ ಮೂಲಕ ಕೊಡವ ಸಾಂಪ್ರದಾಯಿಕ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸಾಂಪ್ರದಾಯಿಕ ಉಡುಗೆ ತೊಟ್ಟು ತಮ್ಮ ಸಂಸ್ಕೃತಿಯ ಪ್ರತೀಕವಾದ ಕೋವಿ, ಒಡಿಕತ್ತಿ, ತೆರೆ, ಚಂಡೆ, ವಾಲಗ ಕಪಾಳ ಕಳಿಯೊಂದಿಗೆ ಮೆರವಣಿಗೆಯಲ್ಲಿ ಸಾಗಿ ಕೊಡವರು ಎಲ್ಲರ ಗಮನಸೆಳೆದರು; ಜತೆಗೆ ಕೊಡಗಿನ ಸಂಸ್ಕೃತಿಯನ್ನು ಬಿಂಬಿಸಿದರು.

 ಕುಶಾಲತೋಪು ಸಿಡಿಸಿ ಕಾರ್ಯಕ್ರಮ ಉದ್ಘಾಟನೆ

ಕುಶಾಲತೋಪು ಸಿಡಿಸಿ ಕಾರ್ಯಕ್ರಮ ಉದ್ಘಾಟನೆ

ವಿಧಾನ ಸಭಾ ಸದಸ್ಯರಾದ ಮುನಿರಾಜು ಅವರು ಕೊಡವರ ಜತೆಯಲ್ಲಿಯೇ ಕುಶಾಲತೋಪನ್ನು ಸಿಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಬಿದ್ದಂಡ ಅಶೋಕ್ ಕುಮಾರ್ ಮತ್ತು ಸ್ಥಳೀಯ ಮಹಾನಗರಪಾಲಿಕೆ ಸದಸ್ಯೆ ಉಮಾದೇವಿ, ಅಕಾಡೆಮಿಯ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಉಪಸ್ಥಿತರಿದ್ದರು.

ಕೊಡಗು: ಹಳ್ಳಿ ಹೈದನ ಪತ್ರಕ್ಕೆ ಪ್ರಧಾನಿ ಮೋದಿ ಸ್ಪಂದನೆ!

 ಟೈಗರ್ ಮಾತು

ಟೈಗರ್ ಮಾತು

ಹೆಣ್ಣುಮಕ್ಕಳ ಸ್ವಾಗತ ನೃತ್ಯದೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು. ನಿವೃತ್ತ ಪೊಲೀಸ್ ಅಧಿಕಾರಿ ಬಿದ್ದಂಡ ಟೈಗರ್ ಅಶೋಕ್ ಕುಮಾರ್ ಮಾತನಾಡಿ, "ದಾಸರಹಳ್ಳಿಯ ಕೊಡವರು ಒಗ್ಗಟಿನಲ್ಲಿ ಮುಂದು ಎನ್ನುವುದನ್ನು ಕೇಳಿದ್ದೆ. ಆದರೆ, ಇಷ್ಟೊಂದು ಸಂಖ್ಯೆಯಲ್ಲಿ ಜನಾಂಗದವರು ಸೇರಿ ಅದನ್ನು ನಿಜ ಮಾಡಿರುವುದು ಖುಷಿ ತಂದಿದೆ," ಎಂದರು.

 ಮಹಾನಗರಪಾಲಿಕೆ ಸದಸ್ಯೆ ಉಮಾದೇವಿ

ಮಹಾನಗರಪಾಲಿಕೆ ಸದಸ್ಯೆ ಉಮಾದೇವಿ

ಮಹಾನಗರಪಾಲಿಕೆ ಸದಸ್ಯೆ ಉಮಾದೇವಿ ಮಾತನಾಡಿ ನನ್ನ ವಾರ್ಡಿನಲ್ಲಿರುವ ಕೊಡವರು ಚುನಾವಣೆಯಲ್ಲಿ ಬೆಂಬಲಿಸಿ ಗೆಲುವಿಗೆ ಸಹಕರಿಸಿದ್ದಾರೆ. ನಾನು ಅವರಿಗೆ ಋಣಿಯಾಗಿರುವುದಾಗಿ ಹೇಳಿದರು.

 ಇಷ್ಟೊಂದು ಸಂಖ್ಯೆಯಲ್ಲಿ ಸೇರಿರುವುದು ತುಂಬ ಆಶ್ಚರ್ಯ

ಇಷ್ಟೊಂದು ಸಂಖ್ಯೆಯಲ್ಲಿ ಸೇರಿರುವುದು ತುಂಬ ಆಶ್ಚರ್ಯ

ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮಾತನಾಡಿ, "ದಾಸರಹಳ್ಳಿಯ ಕೊಡವರು ಬೃಹತ್ ಮಟ್ಟದಲ್ಲಿ ಸೇರಿರುವುದು ನಮಗೆ ಸಂತಸ ತಂದಿದೆ. ತಾನು ಬೆಂಗಳೂರಿನಲ್ಲಿ ಹಲವು ಕಾರ್ಯಕ್ರಮಗಳನ್ನು ಅಕಾಡೆಮಿಯ ಸಹಯೋಗದೊಂದಿಗೆ ನಡೆಸಿದ್ದೇನೆ. ಆದರೆ ತಾವುಗಳು ಇಷ್ಟೊಂದು ಸಂಖ್ಯೆಯಲ್ಲಿ ಸೇರಿರುವುದು ತುಂಬ ಆಶ್ಚರ್ಯ ತಂದಿದೆ," ಎಂದರು.

 'ಜಮ್ಮು ನಾಟಕ' ಬಿಡುಗಡೆ

'ಜಮ್ಮು ನಾಟಕ' ಬಿಡುಗಡೆ

ಪ್ರೊ. ಇಟ್ಟಿರ ಬಿದ್ದಪ ರಚಿಸಿದ ಪುಸ್ತಕ 'ಜಮ್ಮು ನಾಟಕ'ವನ್ನು ಬೆಂಗಳೂರಿನ ಖ್ಯಾತ ವಕೀಲರಾದ ಮುಕ್ಕಾಟಿರ ನಾಣಯ್ಯ ಬಿಡುಗಡೆ ಮಾಡಿದರು. ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು.

Bengaluru : Electronic City Flyover Has a Crack
 ಕೊಡವ ಸಂಸ್ಕೃತಿಯ ಪ್ರದರ್ಶನ

ಕೊಡವ ಸಂಸ್ಕೃತಿಯ ಪ್ರದರ್ಶನ

ಇದೇ ವೇಳೆ ನಡೆದ ಕೊಡವ ಸಾಂಪ್ರದಾಯಿಕ ಉಮ್ಮತಾಟ್, ಕೋಲಾಟ್, ಪರೆಯಕಳಿ, ಕತ್ತಿಯಾಟ್, ಕೊಡವ ವಿವಾಹ ಮೊದಲಾದವು ಗಮನಸೆಳೆದವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Kodava Literature and Cultural Conference held on Sunday at the Government High School grounds in Dasarahalli, Bangalore. The program was organized jointly by Karnataka Kodava Sahitya Akademi and Kodava Association of Dasarahalli.
Please Wait while comments are loading...