ಫೇಸ್ಬುಕ್ ಫೋಟೊ ಪಬ್ಲಿಕ್ ಆಗುತ್ತಂತೆ, ಫೇಕ್ ನ್ಯೂಸ್ ಕಣ್ರಿ

Posted By:
Subscribe to Oneindia Kannada

ಬೆಂಗಳೂರು, ಜೂನ್ 29 : ಜನಪ್ರಿಯ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲಿ ನಿಮ್ಮ ಖಾತೆಯ ಗೌಪ್ಯತೆಗೆ ಭಾರಿ ಪೆಟ್ಟು ಬೀಳಲಿದೆ. ನಿಮ್ಮ ಪ್ರೈವೇಟ್ ಸಂದೇಶ, ಚಿತ್ರ ಎಲ್ಲವೂ ಇನ್ಮುಂದೆ ಪಬ್ಲಿಕ್ ಆಗಲಿದೆ ಎಂಬ ಸಂದೇಶ ಮತ್ತೊಮ್ಮೆ ಹರಿದಾಡುತ್ತಿದೆ. ಆದರೆ, ಬಳಕೆದಾರರು ಆತಂಕ ಪಡಬೇಕಾಗಿಲ್ಲ, ಇದೊಂದು ಕುಚೋದ್ಯದ ಸಂದೇಶವಾಗಿದೆ ಅಷ್ಟೆ.

"I do not give Facebook or any entities associated with Facebook permission to use my pictures, information, or posts, both past and future. By this statement, I give notice to Facebook it is strictly forbidden to disclose, copy, distribute, or take any other action against me based on this profile and/or its contents. The content of this profile is private and confidential information. The violation of privacy can be punished by law (UCC 1-308- 1 1 308-103 and the Rome Statute).
NOTE: Facebook is now a public entity. All members must post a note like this. If you prefer, you can copy and paste this version. If you do not publish a statement at least once it will be tactically allowing the use of your photos, as well as the information contained in the profile status updates. DO NOT SHARE. copy and paste."[ಫೇಸ್ ಬುಕ್ ನಿಂದ ವಿಡಿಯೋ ಡೌನ್ ಲೋಡ್ ಮಾಡುವುದು ಹೇಗೆ?]

ಮೇಲ್ಕಂಡ ಪ್ರೈವಸಿ ನೊಟೀಸ್ ಬಹುತೇಕರಿಗೆ ಬಂದಿದೆ ಹಾಗೂ ಎಷ್ಟೋ ಮಂದಿ ಹಂಚಿಕೊಂಡಿದ್ದಾರೆ ಕೂಡಾ. ಫೇಸ್ ಬುಕ್ ಈಗ ಖಾಸಗಿ ಪೋಸ್ಟ್‌ಗಳನ್ನೂ ಸಾರ್ವಜನಿಕ ಮಾಡುತ್ತದೆ ಎಂದರೆ ಎಲ್ಲರೂ ಒಂದು ಕ್ಷಣ ಬೆಚ್ಚುವುದು ಸಹಜ. ಆದರೆ, ಇದೇ ರೀತಿ ಸಂದೇಶ 2012, 2014 ಮತ್ತು 2015ರಲ್ಲೂ ಬಂದಿತ್ತು. ಆದರೆ, ಈ ರೀತಿ ಅಪ್ ಡೇಟ್ ಮಾಡಿಕೊಳ್ಳಿ ಎಂಬುದು ಸುಳ್ಳು ಸುದ್ದಿ.

The Facebook privacy notice update is back, and yes it’s still a hoax

ಫೇಸ್ ಬುಕ್ ಆಗಾಗ್ಗೆ ಪರಿಶೀಲನೆ, ಘೋಷಣೆ ಮತ್ತು ಲೈವ್ ವೀಡಿಯೋಗಳ ಮೂಲಕ ಸಂದೇಶಗಳನ್ನು ಶೇರ್ ಮಾಡುವುದರಿಂದ ಏನೂ ಆಗುವುದಿಲ್ಲ ಎಂದು ಹೇಳುತ್ತಾ ಬಂದಿದೆ.

ಫೇಸ್ ಬುಕ್ ಸಾರ್ವಜನಿಕ ಕಂಪೆನಿಯಾಗಿದ್ದು, ಪ್ರೈವಸಿ ನೀತಿ ಬದಲಾಯಿಸಿಲ್ಲ, ಫೇಸ್ ಬುಕ್ ನಿಮ್ಮ ಫೋಟೋಗಳನ್ನು ಜಾಹೀರಾತಿಗೆ ಬಳಸುವಂತಿಲ್ಲ ಎಂದು ಅನೇಕ ಬಾರಿ ತಿಳಿಸಲಾಗಿದೆ. ಆದರೆ, ಚಾನಲ್ 13 ಸುದ್ದಿ ವಾಹಿನಿಯೂ ಈಗಷ್ಟೇ ಫೇಸ್ ಬುಕ್ ನ ಈ ಪ್ರೈವಸಿ ನೀತಿಯ ಬಗ್ಗೆ ಮಾತನಾಡುತ್ತಿದೆ ಎಂದು ಗಾಳಿ ಸುದ್ದಿಗೆ ಬಲ ತರಲಾಗುತ್ತಿದೆ.[ಯುವ ಪೀಳಿಗೆಯ ಆಯ್ಕೆ: ಫೇಸ್ಬುಕ್? ವಾಟ್ಸಪ್?]

ನನಗೆ ಈಗಲೂ ನಂಬಿಕೆ ಇಲ್ಲ : ಗೂಗಲ್ ಸರ್ಚ್ ಗೆ ಹೋಗಿ. "Rome Statute" ಎಂದು ಹುಡುಕಾಡಿ, ಹೇಗ್ ಅಲ್ಲಿ ರೂಪಿಸಿದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದ ಬಗ್ಗೆ ತಿಳಿಯುತ್ತದೆ. ಅದು ಪ್ರೈವಸಿ ಅಥವಾ ಫೇಸ್ ಬುಕ್ ಬಗ್ಗೆ ಸಂಬಂಧಿಸಿಲ್ಲ ಎನ್ನುವುದೂ ತಿಳಿಯಲಿದೆ.

ಈಗಲೂ ಫೇಸ್ ಬುಕ್ ಪ್ರೈವಸಿ ಬಗ್ಗೆ ಭಯ ಇರುವವರು ಸೆಟ್ಟಿಂಗ್ ಹೋಗಿ ಪ್ರತಿಯೊಂದನ್ನೂ only me ಎಂದು ಬದಲಿಸಿಕೊಳ್ಳಿ. ಹಾಗೆ ಮಾಡಿದರೆ ನಿಮ್ಮ ಸ್ನೇಹಿತರೂ ನಿಮ್ಮ ಪೋಸ್ಟ್ ನೋಡಲಾಗುವುದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Facebook Privacy Notice scam is back again this year. You might have noticed the ‘legal’-sounding message which claims to ‘protect’ a user’s content, because Facebook will now make even private posts public. The hoax had surfaced in 2012, in 2014, 2015 and now is being shared on the social media site again, with the format pretty much the same as reported by The Indian Express.
Please Wait while comments are loading...