ನಮ್ಮ ಮೆಟ್ರೋದಲ್ಲಿ ವಿಕಲಚೇತನಿರಿಗೂ ಪ್ರತ್ಯೇಕ ಬೋಗಿ ಸಾಧ್ಯತೆ

Posted By: Nayana
Subscribe to Oneindia Kannada

ಬೆಂಗಳೂರು, ನವೆಂಬರ್ 28 : ನಮ್ಮ ಮೆಟ್ರೋದಲ್ಲಿ ಪ್ರತ್ಯೇಕ ಮಹಿಳಾ ಬೋಗಿ ಬೇಕೆಂಬ ಬೇಡಿಕೆಯು ಈಡೇರುವ ದಿನಗಳು ಸಮೀಪಿಸುತ್ತಿದ್ದು, ಡಿಸೆಂಬರ್ ಅಂತ್ಯದಲ್ಲಿ ಕೆಲ ಬೋಗಿಗಳು ಬಿಎಂಆರ್ ಸಿಎಲ್ ಗೆ ಹಸ್ತಾಂತರವಾಗಲಿದೆ.

ನಮ್ಮ ಮೆಟ್ರೋ ಟೋಕನ್ ಕಳೆದುಕೊಂಡರೆ 500 ರೂ. ದಂಡ

ಸರ್ವೆ: ಬೋಗಿ ಖರೀದಿಗೆ ಟೆಂಡರ್ ಪ್ರಕ್ರಿಯೆ ನಡೆಯುವ ಮುನ್ನವೇ ಬಿಎಂಆರ್ ಸಿ ಎಲ್ ಪ್ರತಿ ದಿನ ಪ್ರಯಾಣಿಸುವ ಮಹಿಳೆಯರ ಸಂಖ್ಯೆಯನ್ನು ಲೆಕ್ಕ ಹಾಕಲು ಸರ್ವೆ ಮಾಡಿದೆ. ಪ್ರತಿ ನಿಲ್ದಾಣದಿಂದ ಟೋಕನ್ ಪಡೆಯುವ ಮಹಿಳೆಯರ ಸಂಖ್ಯೆಯನ್ನು ಲೆಕ್ಕಮಾಡಲಾಗಿದೆ.

ಮೈಸೂರು ರಸ್ತೆ ಮೆಟ್ರೋ ನಿಲ್ದಾಣದ 'ಸಿ' ಪ್ರವೇಶ ದ್ವಾರ ಮುಚ್ಚಲಾಗಿದೆ

The BMRCL is planning to dedicate a coach for Disabled also

ಅದರಂತೆ ಒಟ್ಟು ಪ್ರಯಾಣಿಕರಲ್ಲಿ ಶೇ. 40 ರಷ್ಟು ಮಂದಿ ಮಹಿಳೆಯರು ಎಂದು ಅಂದಾಜಿಸಲಾಗಿದೆ. ಬೆಳಗ್ಗೆ 8.30 ರಿಂದ 10.30 ರವರೆಗೆ ಮಹಿಳೆಯರು ಹೆಚ್ಚಿನ ಸಮಖ್ಯೆಯಲ್ಲಿ ಪ್ರಯಾಣಿಸುತ್ತಾರೆ. ಅವರಲ್ಲಿ ಹೆಚ್ಚಿನವರು ಉದ್ಯೋಗಿಗಳಾಗಿದ್ದಾರೆ.

ವಿಕಲಚೇತನರು, ವೃದ್ಧರಿಗೆ ಪ್ರತ್ಯೇಕ ಬೋಗಿ: ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿ ಬೇಕೆಂಬ ಕೂಗು ಒಂದು ವರ್ಷದಿಂದ ಕೇಳಿಬರುತ್ತಿದೆ. ಇತ್ತೀಚೆಗೆ ವಿಕಲಚೇತನರು ಹಾಗೂ ವೃದ್ಧರಿಗಾಗಿ ಪ್ರತ್ಯೇಕ ಬೋಗಿ ಬೇಕೆಂಬ ಒತ್ತಾಯವೂ ಕೇಳಿಬಂದಿದೆ. ಮಹಿಳೆಯರಿಗೆ ಮೀಸಲಿಡುವ ಬೋಗಿಯಲ್ಲಿ ಈ ವರ್ಗದ ಮಂದಿಗೂ ಮೀಸಲು ನೀಡುವ ಸಾಧ್ಯತೆಯಿದೆ.

ನಮ್ಮ ಮೆಟ್ರೋ ರೈಲು 3 ನಿಮಿಷಕ್ಕೊಂದರಂತೆ ಸಂಚಾರ: ಜಾರ್ಜ್

ಒಂದನೇ ಹಂತದ ಪೂರ್ಣ ಸಂಚಾರ ಆರಂಭವಾದ ನಂತರ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವುದರಿಂದ 1,421 ಕೋಟಿ ರೂ. ವೆಚ್ಚದಲ್ಲಿ150 ಬೋಗಿಗಳನ್ನು ಬಿಇಎಂಎಲ್ ನಿಂದ ಖರೀದಿಸಲಾಗುತ್ತಿದೆ. ಎಲ್ಲ ಬೋಗಿಗಳನ್ನಿ ಹಸ್ತಾಂತರ ಮಾಡುವ ಪ್ರಕ್ರಿಯೆ 2018ರ ಕೊನೆಗೆ ಪೂರ್ಣಗೊಳ್ಳಲಿದೆ. ಆದರೆ ಕೆಲ ಬೋಗಿಗಳನ್ನು 2017 ರ ಡಿಸೆಂಬರ್ ಅಂತ್ಯದಲ್ಲೇ ನೀಡಲು ಸಿದ್ಧರೆ ಮಾಡಿಕೊಳ್ಳಲಾಗಿದೆ.

ಈ ಕುರಿತು ಬಿಎಂಆರ್ಸಿಎಲ್ ಅಧಿಕಾರಿಗಳುಖಚಿತಪಡಿಸಿದ್ದು, ಡಿಸೆಂಬರ್ ಅಂತ್ಯದಲ್ಲೇ ಬೋಗಿಗಳನ್ನು ನೀಡುವುದಾಗಿ ಬಿಇಎಂಎಲ್ ತಿಳಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಬೋಗಿಗಳು ಬಂದ ಕೂಡಲೇ ರೈಲುಗಳಿಗೆ ಜೋಡಿಸಿ ಮೂರು ಬೋಗಿಗಳನ್ನು ಆರು ಬೋಗಿಗಳನ್ನಾಗಿ ಮಾಡಲಾಗುತ್ತದೆ. ಬಳಿಕ ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿ ಮೀಸಲಿಡಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Woman coach in Namma Metro from December, The survey conducted by BMRCL revealed that around 40 percent of commuters are women between 8.30am to 10pm. Now they are planning to dedicate a coach for desabled also.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ