ಬೆಂಗಳೂರು: ಕೆಂಬಣ್ಣದ ಉಡುಗೆಯಲ್ಲಿ ಶ್ರೀದೇವಿ ಕ್ಯಾಟ್ ವಾಕ್

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 10: ಬಣ್ಣ ಬಣ್ಣದ, ಮನಮೋಹನಕ ಉಡುಗೆಗಳು, ರ್ಯಾಂಪ್ ಮೇಲೆ ಬಳಕುತ್ತ ನಡೆಯುವ ಸುಂದರ ಲಲನೆಯರು... ಬೆಂಗಳೂರಿನ ಟೈಮ್ಸ್ ಫ್ಯಾಷನ್ ವೀಕ್ ನ ಮೊದಲ ಆವೃತ್ತಿಯಲ್ಲಿ ಕಂಡುಬಂದ ದೃಶ್ಯ ಇದು.

ರಾಜಧಾನಿ ಬೆಂಗಳೂರಿನಲ್ಲಿ ಅಕ್ಟೋಬರ್ 7 ಮತ್ತು 8 ರಂದು ನಡೆದ ಫ್ಯಾಶನ್ ಶೋ, ಫ್ಯಾಶನ್ ಲೋಕದಲ್ಲೇ ಒಂದು ಮೈಲಿಗಲ್ಲು ಎನ್ನಿಸಿತು. ಶ್ರೀದೇವಿಯವರಂಥ ಹಿರಿಯ ನಟಿ ಸಹ ಕೆಂಬಣ್ಣದ ಉಡುಗೆ ತೊಟ್ಟು ವಯಸ್ಸನ್ನೇ ನಾಚಿಸುವಂತೆ ಮಿಂಚಿದರು.

ಶ್ರೀದೇವಿ ಮಾತ್ರವಲ್ಲದೆ, ಶ್ರುತಿ ಹಾಸನ್, ಸೈನಾ ನೆಹ್ವಾಲ್, ಜೋಯಾ ಅಫ್ರೋಜ್, ಸನಾ ದುವಾ, ರಾಗಿಣಿ ದ್ವಿವೇದಿ, ಐಂದ್ರಿತಾ ರೇ ಸೇರಿದಂತೆ ಖ್ಯಾತನಾಮರು ಈ ಫ್ಯಾಷನ್ ಶೋನಲ್ಲಿ ಭಾಗವಹಿಸಿದ್ದರು. ಪ್ರಿಯಾ ಕಟಾರಿಯಾ ಪುರಿ, ಸಾಸ್ಸಿ ದಿವಾ, ಶ್ರವಣ್ ಕುಮಾರ್ ಸೇರಿದಂತೆ ಹಲವು ವಸ್ತ್ರ ವಿನ್ಯಾಸಕಾರರ ಸಂಗ್ರಹದ ಉಡುಗೆಗಳನ್ನು ಈ ಫ್ಯಾಷನ್ ಶೋ ನಲ್ಲಿ ಪರಿಚಯಿಸಲಾಯಿತು.

ಚೆಂದದ ನಟಿಯರು, ಸುಂದರ ಉಡುಗೆಗಳನ್ನು ತೊಟ್ಟು ಕ್ಯಾಟ್ ವಾಕ್ ಮಾಡಿದ ಒಂದಷ್ಟು ಚಿತ್ರಗಳು, ನಿಮಗಾಗಿ ಇಲ್ಲಿವೆ.

ಕೆಂಬಣ್ಣದ ಹುಡುಗೆಯಲ್ಲಿ ಮಿಂಚಿದ ಶ್ರೀದೇವಿ

ಕೆಂಬಣ್ಣದ ಹುಡುಗೆಯಲ್ಲಿ ಮಿಂಚಿದ ಶ್ರೀದೇವಿ

ಕೆಂಪು ಬಣ್ಣದ ಉಡುಗೆ ತೊಟ್ಟು ವಯಸ್ಸನ್ನೇ ನಾಚಿಸುವಂತೆ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ ಬಾಲಿವುಡ್ ನಟಿ ಶ್ರೀದೇವಿ.

ಹಳದಿ ಗಾಗ್ರಾದಲ್ಲಿ ಗಮನಸೆಳೆದ ಸೈನಾ

ಹಳದಿ ಗಾಗ್ರಾದಲ್ಲಿ ಗಮನಸೆಳೆದ ಸೈನಾ

ಹಳದಿ ಬಣ್ಣದ ಗಾಗ್ರಾ ತೊಟ್ಟಿದ್ದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಯಾವ ನಟಿಗೂ ಕಡಿಮೆ ಇಲ್ಲ ಎಂಬಂತೆ ರ್ಯಾಂಪ್ ವಾಕ್ ಮಾಡಿದರು.

ಶ್ರುತಿ ಹಾಸನ್ ಝಲಕ್

ಶ್ರುತಿ ಹಾಸನ್ ಝಲಕ್

ನಟಿ ಶ್ರುತಿ ಹಾಸನ್ ಸಹ ಕ್ಯಾಟ್ ವಾಕ್ ಮಾಡಿ ಗಮನಸೆಳೆದರು.

ಸಾಂಪ್ರದಾಯಿಕ ಉಡುಗೆಯಲ್ಲಿ ರಾಗಿಣಿ ದ್ವಿವೇದಿ

ಸಾಂಪ್ರದಾಯಿಕ ಉಡುಗೆಯಲ್ಲಿ ರಾಗಿಣಿ ದ್ವಿವೇದಿ

ಸಾಂಪ್ರದಾಯಿಕ ಉಡುಗೆ ತೊಟ್ಟ ಕನ್ನಡತಿ ರಾಗಿಣಿ ದ್ವಿವೇದಿ ಸಹ ಫ್ಯಾಷನ್ ವೀಕ್ ನ ಪ್ರಮುಖ ಆಕರ್ಷಣೆಯಾಗಿದ್ದರು.

ರ್ಯಾಂಪ್ ಮೇಲೆ ಡಾನ್ಸ್ ಮಾಡಿದ ಐಂದ್ರಿತಾ!

ರ್ಯಾಂಪ್ ಮೇಲೆ ಡಾನ್ಸ್ ಮಾಡಿದ ಐಂದ್ರಿತಾ!

ಬಿಳಿ ಬಣ್ಣದ ಗೌನ್ ತೊಟ್ಟಿದ್ದ ಐಂದ್ರಿತಾ ರೇ ರ್ಯಾಂಪ್ ಮೇಲೆ ಕುಣಿದು ಸಂತಸಪಟ್ಟಿದ್ದು ಹೀಗೆ.

ಜನಾರ್ದನ ರೆಡ್ಡಿ ಉಪಸ್ಥಿತಿ

ಜನಾರ್ದನ ರೆಡ್ಡಿ ಉಪಸ್ಥಿತಿ

ಫ್ಯಾಷನ್ ಶೋನ ಮತ್ತೊಂದು ಪ್ರಮುಖ ಆಕರ್ಷಣೆ ಎನ್ನಿಸಿದ್ದು ಗಣಿದಣಿ ಜನಾರ್ದನ ರೆಡ್ಡಿ. ರೆಡ್ಡಿ ದಂಪತಿ ಫ್ಯಾಷನ್ ಶೋವನ್ನು ಕಣ್ತುಂಬಿಸಿಕೊಂಡರು.

ಕ್ಯಾಟ್ ವಾಕ್ ಕೈಚಳಕ

ಕ್ಯಾಟ್ ವಾಕ್ ಕೈಚಳಕ

ಮಿರುಗುವ ಕಪ್ಪು ಬಣ್ಣದ ಉಡುಗೆ ತೊಟ್ಟ ಸುಂದರಿಯರೂ ತಮ್ಮ ಕ್ಯಾಟ್ ವಾಕ್ ಕೈಚಳಕ ತೋರಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Bangalore Times Fashion Week 2017 debuted on 7th & 8th October in the Silicon Valley of India, celebrating some of the biggest names of the fashion industry. Sridevi, Shruti Hassan, Zoya Afroz, Sana Dua and Ragini Dwivedi, Aindrita rey were the main attraction of the show

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ