ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ 'ವಿಶ್ವ ಸಂಸ್ಕೃತಿ ಉತ್ಸವ'

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್,08: ಆಧ್ಯಾತ್ಮಿಕ ಗುರು ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು 35ವರ್ಷದ ಸಂಭ್ರಮದಲ್ಲಿದೆ. ಅದರ ಪ್ರಯುಕ್ತ ಮಾ. 11ರಿಂದ 13ರವರೆಗೆ ಮೂರು ದಿನಗಳ ಕಾಲ ನವದೆಹಲಿಯಲ್ಲಿ 'ವಿಶ್ವ ಸಂಸ್ಕೃತಿ ಉತ್ಸವ' ನಡೆಸಲು ಪೂರ್ವ ತಯಾರಿ ಮಾಡಿಕೊಳ್ಳುತ್ತಿದೆ.

'ವಿಶ್ವ ಸಂಸ್ಕೃತಿ ಉತ್ಸವ'ವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ವಿಶ್ವದ 155 ದೇಶಗಳ ರಾಜಕೀಯ ಮುಖಂಡರು, ಜಾನಪದ ಕಲಾವಿದರು, ಆಡಳಿತ ತಜ್ಞರು ಹೀಗೆ ಅನೇಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.[ಚಿತ್ರಗಳು : ಜೋಗಿ ಮಠದ ಶ್ರೀಗಳ ಪಟ್ಟಾಭಿಷೇಕ]

The Art of Living organize The World Culture Festival 2016 in New delhi

ಈ ಉತ್ಸವದಲ್ಲಿ ಅಂತರ್ ಧರ್ಮೀಯ ಗೋಷ್ಠಿ ನಡೆಯಲಿದ್ದು, ಇದರಲ್ಲಿ ಬದರೀನಾಥ ಜ್ಯೋತಿರ್ಮಠದ ಜಗದ್ಗುರು ಶ್ರೀ ಸ್ವಾಮಿ ವಾಸುದೇವಾನಂದ ಸರಸ್ವತಿ, ಗೋವರ್ಧನ ಪೀಠದ ಶಂಕರಾಚಾರ್ಯರಾದ ಶ್ರೀ ಸ್ವಾಮಿ ನಿಶ್ವಲಾನಂದ ಸರಸ್ವತಿ ಮಹಾರಾಜ್, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು, ಮಂತ್ರಾಲಯದ ಶ್ರೀ ಸುಬುಧೀಂದ್ರ ತೀರ್ಥರು, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಹೀಗೆ ಅನೇಕರು ಭಾಗವಹಿಸಲಿದ್ದಾರೆ.

ಈ ವಿಶ್ವಸಂಸ್ಕೃತಿ ಉತ್ಸವದ ಉದ್ದೇಶವೇನು?

ನಾನಾ ರಾಷ್ಟ್ರೀಯತೆಯನ್ನು ಒಂದೆಡೆ ಸೇರಿಸುವುದು. ಜನರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವುದು. ಇಡೀ ಜಗತ್ತು ಒಂದು ಕುಟುಂಬ ಎಂದು ಸಾರುವುದು. ದೇಶದ ಸಂಸ್ಕೃತಿ, ಸಾಂಪ್ರದಾಯಿಕತೆ ಉಳಿಸಲು ಶ್ರಮಿಸುವುದು ಈ ವಿಶ್ವ ಸಂಸ್ಕೃತಿ ಉತ್ಸವದ ಮುಖ್ಯ ಉದ್ದೇಶ.

ವಿಶ್ವ ಸಂಸ್ಕೃತಿ ಉತ್ಸವದ ವಿಶೇಷತೆಗಳೇನು?

* ವಿಶ್ವ ಸಂಸ್ಕೃತಿ ಉತ್ಸವಕ್ಕಾಗಿ 7ಎಕರೆ ವಿಶಾಲ ವೇದಿಕೆ ನಿರ್ಮಾಣ ಮಾಡಲಾಗಿದೆ.

* ಉತ್ಸವಕ್ಕೆ 20 ಸಾವಿರ ವಿದೇಶಿ ಅತಿಥಿಗಳು ಆಗಮಿಸುವ ಸಾಧ್ಯತೆ

* ಮೂರು ದಿನಗಳ ಕಾಲ ನಡೆಯುವ ಈ ಉತ್ಸವಕ್ಕೆ 35ಲಕ್ಷಕ್ಕೂ ಹೆಚ್ಚ ಜನರು ಪಾಲ್ಗೊಳ್ಳುವರು.

* ಲಕ್ಷಾಂತರ ಜನರಿಂದ ಏಕಕಾಲದಲದಲಿ ವಿಶ್ವಶಾಂತಿಗಾಗಿ ಧ್ಯಾನ ನಡೆಯಲಿದೆ.

* ನಾನಾ ರಾಜ್ಯಗಳ ಜಾನಪದ ಕಲೆಗಳನ್ನು ಕಣ್ತುಂಬಿಕೊಳ್ಳುವ ಅವಕಾಶ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The World Culture Festival 2016 is a celebration of The Art of Living's 35 years of service to humanity, spirituality and human values. It will take place on March 11 to 13, 2016 in New Delhi.
Please Wait while comments are loading...