ತರುಣ್ ಸುಧೀರ್ ಸತ್ತಿಲ್ಲ ಕಣ್ರಿ, ಸುಳ್ಳು ಸುದ್ದಿ ಹಬ್ಬಿಸ್ಬೇಡಿ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 03: ನಟ, ನಿರ್ದೇಶಕ ತರುಣ್ ಸುಧೀರ್, ಹಿರಿಯ ನಟ ಶಿವರಾಂ, ಹಿರಿಯ ನಟಿ, ಗಾಯಕಿ ಬಿ.ಜಯಶ್ರೀ ಹಾಗೂ ಗಾಯಕಿ ಎಸ್‌.ಜಾನಕಿ ಅವರು ನಿಧನ ಹೊಂದಿದ್ದಾರೆ ಸುಳ್ಳುಸುದ್ದಿ ಹರಡುತ್ತಿದೆ.

ದಯವಿಟ್ಟು ನಂಬಬೇಡಿ, ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ ಯೂಟ್ಯೂಬ್ ಚಾನೆಲ್ ಹಾಗೂ ವೆಬ್ ಸೈಟ್ ವಿರುದ್ಧ ತರುಣ್ ಸುಧೀರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

'ನಾನು ನಿಧನ ಹೊಂದಿರುವುದಾಗಿ ಸುಳ್ಳು ಸುದ್ದಿ ಪ್ರಸಾರ ಮಾಡಿರುವ 'ಕನ್ನಡ ಫ್ಯಾನ್ಸ್' ಯ್ಯೂಟ್ಯೂಬ್ ವೆಬ್‌ ಚಾನೆಲ್ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು' ಎಂದು ಕೋರಿ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಸೈಬರ್‌ ಕ್ರೈಂ ಪೊಲೀಸರಿಗೆ ಶನಿವಾರ ದೂರು ಕೊಟ್ಟಿದ್ದಾರೆ.

ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಅವರನ್ನು ಭೇಟಿ ಮಾಡಿರುವ ಸುಧೀರ್‌, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.

Tharun Sudhir files complaint with Cyber Police on fake death news

ಸ್ವಲ್ಪ ದಿನಗಳ ಹಿಂದೆ ಹಿರಿಯ ಗಾಯಕಿ ಎಸ್ ಜಾನಕಿ ಬಗ್ಗೆ ಇದೇ ರೀತಿ ಸುಳ್ಳು ಸುದ್ದಿ ಹಬ್ಬಿತ್ತು. ನಂತರ ಹಿರಿಯ ನಟ ಶಿವರಾಮ್ ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿಯನ್ನು ಹಬ್ಬಿಸಲಾಗಿತ್ತು.

ಆಮೇಲೆ 'ನಿರ್ದೇಶಕ ತರುಣ್ ಸುಧೀರ್ ಇನ್ನಿಲ್ಲ!' ಎಂದು ಸುದ್ದಿ ವೆಬ್ ಸೈಟ್ ಹಾಗೂ ಯೂಟ್ಯೂಬ್ ಚಾನೆಲ್ ಗಳಲ್ಲಿ ಬಂದಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ತರುಣ್ ಸ್ನೇಹಿತರು ಹಾಗೂ ಕಲಾವಿದರು ಆತಂಕಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actor cum Director Tharun Sudhir filed a complaint with Cyber Police against a Youtube channel and website which is spreading fake death news of him and other celebrities on fake death news

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ