ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ : 10 ರು ನಾಣ್ಯ ರಿಜೆಕ್ಟ್ ಮಾಡೋಕೆ ನೀವೇನು ರಿಸರ್ವ್ ಬ್ಯಾಂಕಾ?

10 ರುಪಾಯಿ ನಾಣ್ಯ ತಿರಸ್ಕರಿಸಲಿಕ್ಕೆ ನೀನೇನು ರಿಸರ್ವ್ ಬ್ಯಾಂಕಾ ಅಂತ ಕೇಳಿದರೆ, ಹೌದು ನಾನು ರಿಸರ್ವ್ ಬ್ಯಾಂಕೇ, ವಿಡಿಯೋ ಮಾಡ್ಕೋತಿಯಾ, ಮಾಡ್ಕೊಹೋಗು ಅಂತ ದಬಾಯಿಸ್ತಾನೆ ಟೋಲ್ ಸಂಗ್ರಹಕಾರ.

By Prasad
|
Google Oneindia Kannada News

ಬೆಂಗಳೂರು, ಫೆಬ್ರವರಿ 18 : ಅಪನಗದೀಕರಣದ ಹಂತ ಮುಗಿದು, ಇನ್ನು ಎಲ್ಲ ಗೊಂದಲಗಳು ನಿವಾರಣೆಯಾಗಿ, ನಗದಿಗೆ ಸಂಬಂಧಿಸಿದಂತೆ ಎಲ್ಲ ವಹಿವಾಟುಗಳು ಸುಗಮವಾಗುತ್ತವೆ ಎಂದು ಅಂದುಕೊಂಡ ಹೊತ್ತಿನಲ್ಲಿ ತಣ್ಣಗೆ ಕುಳಿತಿದ್ದ 10 ರುಪಾಯಿ ನಾಣ್ಯ ತನ್ನ ಸದ್ದು ಆರಂಭಿಸಿದೆ.

ಹೋಟೆಲಿಗೋ, ಕಿರಾಣಿ ಅಂಗಡಿಗೋ, ಬೇಕರಿಗೋ ಹೋಗಿ 10 ರುಪಾಯಿ ನಾಣ್ಯ ಕೊಡಿ... ತಗೊಳಲ್ಲ ಹೊಗ್ರಿ ಅಂತ ಮುಖದ ಮೇಲೆ ಕ್ಯಾಶಿಯರ್ ಬಿಸಾಕುತ್ತಾನೆ. ಅದು ಆತನ ದುರಂಕಾರವಲ್ಲ. ಬದಲಿಗೆ ಈ ನಾಣ್ಯದ ಕುರಿತಂತೆ ಹುಟ್ಟಿಕೊಂಡಿರುವ ಊಹಾಪೋಹವೇ ಕಾರಣ. [ಪ್ರೇಮಿಗಳಿಗಾಗಿ ಮಾತ್ರ : ಆ ಐನೂರು ರೂಪಾಯ್ ನಿನ್ನನ್ನೇ ನೋಡ್ತಾ ಇದೆ!]

Ten rupee coin gets raw deal in Bengaluru

ಬೆಂಗಳೂರು ಏರ್ಪೋರ್ಟ್ ಟೋಲ್ ನಲ್ಲಿ ಶುಕ್ರವಾರ ರಾತ್ರಿ ಇಂತಹದೇ ಗಲಾಟೆ ನಡೆದಿದೆ. ಟೋಲ್ ಸಂಗ್ರಹಕಾರ ಬ್ಯಾಂಕಲ್ಲಿ 10 ರುಪಾಯಿ ನಾಣ್ಯ ತಗೊಳಲ್ಲ ಅಂತ ಕಾರಿನ ಚಾಲಕನಿಗೆ ದಬಾಯಿಸಿದ್ದಾನೆ. ನಾಣ್ಯ ತಿರಸ್ಕರಿಸಲಿಕ್ಕೆ ನೀನೇನು ರಿಸರ್ವ್ ಬ್ಯಾಂಕಾ ಅಂತ ಕೇಳಿದರೆ, ಹೌದು ನಾನು ರಿಸರ್ವ್ ಬ್ಯಾಂಕೇ, ವಿಡಿಯೋ ಮಾಡ್ಕೋತಿಯಾ, ಮಾಡ್ಕೊಹೋಗು ಅಂತ ವಾಚಾಮಗೋಚರವಾಗಿ ಬೈದಿದ್ದಾನೆ.

ಇತ್ತೀಚೆಗೆ ಹೋಟೆಲಿಗೆ ಹೋದಾಗ ಇದೇ ರೀತಿ ಅನುಭವವಾಗಿದೆ. ಹತ್ತು ರುಪಾಯಿ ನಾಣ್ಯ ಕೊಟ್ಟಾಗ, ಈ ನಾಣ್ಯ ಬ್ಯಾನ್ ಮಾಡಿದ್ದಾರೆ, ನಕಲಿ ಕಾಯ್ನುಗಳು ಚಲಾವಣೆಯಲ್ಲಿವೆ ಅಂತ ಇಸಿದುಕೊಳ್ಳಲಿಲ್ಲ. ಅಲ್ರೀ, ನೀವೇ ಕೊಟ್ಟಿದ್ದು ಅಂದಾಗ, ಹಿಂದೆ ಕೊಟ್ಟಿದ್ದಿರಬಹುದು, ಈಗ ಇಸಿದುಕೊಳ್ಳಲ್ಲ ಅಂತ ಮುಖಕ್ಕೆ ರಪ್ ಅಂತ ಹೊಡೆದವರ ಹಾಗೆ ಪ್ರತಿಕ್ರಿಯಿಸಿದ್ದ. [ಶೀಘ್ರದಲ್ಲೇ ದೇಶದಲ್ಲಿ ಹೊಸ ರು.1000 ನೋಟು ಸಾಧ್ಯತೆ]

Ten rupee coin gets raw deal in Bengaluru

ಅಸಲಿ ನಾಣ್ಯಗಳ ಜೊತೆ 10 ರುಪಾಯಿಯ ನಕಲಿ ನಾಣ್ಯಗಳು ಚಲಾವಣೆಯಲ್ಲಿವೆ ಎಂದು ಹಬ್ಬಿರುವ ಗಾಳಿಸುದ್ದಿಯಿಂದಾಗಿಯೇ ಇಷ್ಟೆಲ್ಲ ರಾದ್ಧಾಂತಗಳು ನಡೆಯುತ್ತಿವೆ. ಬ್ಯಾಂಕುಗಳು ಕೂಡ ಈ ಕುರಿತಂತೆ ಸ್ಪಷ್ಟನೆ ನೀಡಿದ್ದರೂ ಗ್ರಾಹಕರಲ್ಲಿ ಏನೋ ಹಿಂಜರಿಕೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಕುರಿತಂತೆ ಸಾಕಷ್ಟು ಸ್ಪಷ್ಟೀಕರಣ ನೀಡಿದೆ. ನಾಣ್ಯಗಳ ಡಿಸೈನನ್ನು ಆಗಾಗ ಬದಲಾಯಿಸುತ್ತಿರುತ್ತೇವೆ. ಯಾವ ನಕಲಿ ನಾಣ್ಯಗಳೂ ಚಲಾವಣೆಯಲ್ಲಿ ಇಲ್ಲ ಎಂದು ಸ್ಪಷ್ಟನೆ ಕೊಟ್ಟರೂ 10 ರುಪಾಯಿ ನಾಣ್ಯಗಳು ತಿರಸ್ಕಾರಕ್ಕೀಡಾಗುತ್ತಿವೆ.

English summary
Ten rupee coins are getting rejected by shop keepers as rumour spreads about circulation of fake coins. Reserve Bank of India has given clarification that there are no fake coins. Still it is being rejected. One such incident happened at BIAL toll in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X