ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಳಿ ಕಳಚಿ ಮೈಸುಡುವ ಬೇಸಿಗೆಯತ್ತ ಬೆಂಗಳೂರು!

|
Google Oneindia Kannada News

ಬೆಂಗಳೂರು, ಮಾರ್ಚ್ 2 : ಚಳಿಗಾಲ ಇನ್ನೂ ಮುಗಿದಿಲ್ಲ ಎಂದುಕೊಂಡಿದ್ದೀರಾ, ಹೊರಗೆ ಕಾಲಿಟ್ಟರೆ ಬೈಸುಡುವ ಅನುಭವ ರಾಜಧಾನಿಯಲ್ಲಿ ಈಗಾಗಲೇ ಆರಂಭವಾಗಿದೆ. ಈಗಾಗಲೇ ತಾಪಮಾನ 33.2 ಡಿಗ್ರಿಗೆ ತಲುಪಿದ್ದು ಕಳೆದ ನಾಲ್ಕು ದಿನಗಳಲ್ಲಿ2 ಡಿಗ್ರಿ ಉಷ್ಣಾಂಶ ಏರಿಕೆಯಾಗಿದೆ.

ಬೇಸಿಗೆ ಆರಂಭದಲ್ಲಿ ಕಾಂಕ್ರೀಟ್ ನಗರಿ ಸುಸ್ತಾಗಿ ಹೋಗಿದೆ. ಫೆಬ್ರವರಿ 2 ನೇ ವಾರದಿಂದ ನಗರದಲ್ಲಿ ಸೆಕೆ ಏರಿಕೆಯಾಗತೊಡಗಿದೆ. ಫೆ.1 ರಂದು 29.6 ಡಿಗ್ರಿ ಇದ್ದ ಗರಿಷ್ಠ ತಾಪಮಾನ ಫೆ.15 ಕ್ಕೆ 30.7 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ.

summer

ಫೆ.25 ಕ್ಕೆ 31.2 ಡಿಗ್ರಿ, ಫೆ.27 ಕ್ಕೆ 32 ಡಿಗ್ರಿ, ಫೆ.28 ಕ್ಕೆ 33 ಮತ್ತು ಮಾರ್ಚ್1 ಕ್ಕೆ 33.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.

ಇದು ವಾಡಿಕೆಯಂತೆ 1.3 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂಬರುವ ದಿನಗಳಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗಲಿದೆ ಎಂದು ಅದು ಮುನ್ಸೂಚನೆ ನೀಡಿದೆ. ಬಿಸಿಲನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಆದರೆ ಬಿಸಿಲಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದು ಸಾಧ್ಯವಿದೆ.

ಹೊರಗಡೆ ಸುತ್ತಾಡುವ ಸಮಯದಲ್ಲಿ ತಲೆಗೆ ಬಟ್ಟೆ ಕಟ್ಟಿಕೊಳ್ಳಿ, ನೀರಿನ ಅಂಶವಿರುವ ಹಣ್ಣುಗಳನ್ನು ಸೇವಿಸಿ, ದೇಹದಲ್ಲಿನ ನೀರಿನ ಅಂಶ ಹೆಚ್ಚಿಸಲು ಆಗಾಗ ನೀರು ಕುಡಿಯುತ್ತಿರಿ, ಬಾಯಾರಿಕೆ ನೀಗಿಸಲು ತಂಪು ಪಾನೀಯ ಸೇವನೆ ಬೇಡ ಇನ್ನು ಕೆಲವು ನಿಮಗೆ ತಿಳಿಸಿದಿರುವ ಕ್ರಮವನ್ನು ಅನುಸರಿಸಿದರೆ ಸ್ವಲ್ಪ ಬಿಸಿಲಿನಿಂದ ರಕ್ಷಣೆ ಪಡೆಯಬಹುದು.

English summary
Bengaluru feeling a sudden raise in temperature as its reached 33.2 degree celsius on Thursady. The temperature increased up to 2 degree celsius in last 4 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X