ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊಬೈಲ್ ಟವರ್ ಸಂಖ್ಯೆ ಘೋಷಣೆಗೆ ಬಿಬಿಎಂಪಿ ಜ.20ರ ಗಡುವು

|
Google Oneindia Kannada News

ಬೆಂಗಳೂರು, ಜನವರಿ 16: ಮೊಬೈಲ್ ಟವರ್ ಮತ್ತು ಕೇಬಲ್ ಜಾಲಗಳ ಕುರಿತು ಸ್ವಯಂ ಘೋಷಣೆಯ ಪ್ರಮಾಣಪತ್ರ ಸಲ್ಲಿಸುವಂತೆ ಟೆಲಿಕಾಂ ಸೇವೆಗಳ ಕಂಪನಿಗಳಿಗೆ ಬಿಬಿಎಂಪಿ ಜನವರಿ 20ರ ಗಡುವು ನೀಡಿದೆ.

ನಗರ ಅಕ್ರಮ ಮೊಬೈಲ್ ಟವರ್ ಗಳು ವಿಪರೀತವಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಈ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಟೆಲಿಕಾಂ ಸರ್ವೀಸ್ ಕಂಪನಿಗಳ ಜತೆ ಹಲವು ಸುತ್ತಿನ ಮಾತುಕತೆ ನಡೆಸಿರುವ ಬಿಬಿಎಂಪಿ ಜನವರಿ 20ರ ವರೆಗೆ ಡೆಡ್ ಲೈನ್ ನೀಡಿದೆ.

ಅನಧಿಕೃತ ಫ್ಲೆಕ್ಸ್ ಹಾವಳಿ: ಮುದ್ರಣ ಮಳಿಗೆಗಳ ಮೇಲೆ ದಾಳಿಅನಧಿಕೃತ ಫ್ಲೆಕ್ಸ್ ಹಾವಳಿ: ಮುದ್ರಣ ಮಳಿಗೆಗಳ ಮೇಲೆ ದಾಳಿ

ಮೊದಲ ಬಾರಿಗೆ ಆಫ್ಟಿಕಲ್ ಫೈಬರ್ ಕೇಬಲ್ ಜಾಲ ಹಾಗೂ ಮೊಬೈಲ್ ಟವರ್ ಗಳ ಕುರಿತಂತೆ ಟೆಲಿಕಾಂ ಸರ್ವೀಸ್ ಕಂಪನಿಗಳಿಂದ ಗ್ಲೋಬಲ್ ಇಂಡಿಕೇಷನ್ ಸಿಸ್ಟಂ ಮೂಲಕ ಜಿ ಐ ಎಸ್ ಮೂಲಕ ಆಯಾ ಕಂಪನಿಗಳ ನಕಾಶೆ ಗಳನ್ನು ಸಿದ್ಧಪಡಿಸಿ ಬಿಬಿಎಂಪಿಗೆ ಅಫಿಡೆವಿಟ್ ಮೂಲಕ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

Telecom service companies under pressure to declare assets

ಸದ್ಯ ಬೆಂಗಳೂರು ನಗರದಲ್ಲಿ 5 ಟೆಲಿಕಾಂ ಸರ್ವೀಸ್ ಕಂಪನಿಗಳು 6, 776 ಮೊಬೈಲ್ ಟವರ್ ಗಳನ್ನು ಘೋಷಿಸಿಕೊಂಡಿದೆ. ಮತ್ತೊಂದೆಡೆ 7 ಟೆಲಿಕಾಂ ಸರ್ವೀಸ್ ಕಂಪನಿಗಳು 8, 756 ಕಿ.ಮೀ ಆಪ್ಟಿಕಲ್ ಫೈಬರ್ ಕೇಬಲ್ ಜಾಲ ಹೊಂದಿದೆ ಎಂದು ಘೋಷಿಸಿವೆ.

ಆದರೆ, ಬಿಬಿಎಂಪಿ ಸಮೀಕ್ಷೆ ಪ್ರಕಾರ ಬೆಂಗಳೂರಿನಲ್ಲಿ 10 ಸಾವಿರಕ್ಕೂ ಹೆಚ್ಚು ಮೊಬೈಲ್ ಟವರ್ ಗಳು ಹಾಗೂ 25 ಸಾವಿರ ಕಿ,ಮೀ ಗೂ ಹೆಚ್ಚಿನ ಆಪ್ಟಿಕಲ್ ಫೈಬರ್ ಕೇಬಲ್ ಜಾಲ ಹೊಂದಿದೆ ಎಂದು ಆಂದಾಜಿಸಿದೆ.
ಹೀಗಾಗಿ ಈಗಾಗಲೇ ಟೆಲಿಕಾಂ ಸರ್ವೀಸ್ ಕಂಪನಿಗಳು ಘೋಷಿಸಿರುವ ಮೊಬೈಲ್ ಟವರ್ ಹಾಗೂ ಓಎಫ್ ಸಿ ಜಾಲದ ಪ್ರಮಾಣ ಶೇ.50 ಕ್ಕಿಂತ ಕಡಿಮೆಯಾಗಿದೆ.

ಈ ಹಿನ್ನೆಲೆಯಲ್ಲಿಉಳಿದ ಶೇ.50 ರಷ್ಟು ಮೊಬೈಲ್ ಟವರ್ ಹಾಗೂ ಜಾಲಗಳನ್ನು ಈ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಜನವರಿ 20ರ ಗಡುವು ನೀಡಿದೆ. ಇದಕ್ಕೆ ಟೆಲಿಕಾಂ ಸರ್ವೀಸ್ ಕಂಪನಿಗಳು ಹೇಗೆ ಸ್ಪಂದಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

English summary
BBMP sets January 20 deadline for details on Moble towers and OFC, The civic body's ongoing war against the menace of illigal Optic fibre cables and undeclared mobile towers has met with little success. But the latest attempt however may different. After multiple meetings with stakeholders, the bbmp has set a January 20 deadline.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X