ತೇಜಸ್ವಿನಿಯವರ ‘ಹಂಸಯಾನ’ ಕಾದಂಬರಿಯ ಲೋಕಾರ್ಪಣೆಗೆ ಆಹ್ವಾನ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 07: ಒನ್ಇಂಡಿಯಾ(ಈ ಹಿಂದಿನ ದಟ್ಸ್ ಕನ್ನಡ.ಕಾಂ) ವೆಬ್ ತಾಣದಲ್ಲಿ ಶಿರಸಿ ಭವನ ಅಂಕಣ ಬರೆಯುತ್ತಿದ್ದ ಶ್ರೀಮತಿ ತೇಜಸ್ವಿನಿ ಹೆಗಡೆಯವರ ಎರಡನೇ ಕಾದಂಬರಿ ಲೋಕರ್ಪಣೆಗೊಳ್ಳಲು ಸಿದ್ಧವಾಗಿದೆ.

ಜಯಶ್ರೀ ಪ್ರಕಾಶನ ಪ್ರಕಟಿಸಿರುವ 'ಹಂಸಯಾನ' ಕಾದಂಬರಿಯ ಬಿಡುಗಡೆ ಸಮಾರಂಭವನ್ನು 'ಈ ಹೊತ್ತಿಗೆ' ಬಳಗವು ಆಯೋಜಿಸಿದೆ.

ಇತ್ತೀಚಿಗೆ ಮೂಡಿದಿರೆಯಲ್ಲಿ ನಡೆದ ಆಳ್ವಾಸ್ ನುಡಿಸಿರಿಯಲ್ಲಿ 'ಹಂಸಯಾನ' ಕಾದಂಬರಿಯ ಬಿಡುಗಡೆ ಸಮಾರಂಭವನ್ನು ನೆರವೇರಿಸಲಾಗಿತ್ತು. ಈಗ ಮತ್ತೊಮ್ಮೆ ಬೆಂಗಳೂರಿನಲ್ಲಿ ಸಾಹಿತ್ಯ ಆಸಕ್ತರ ಸಮ್ಮುಖದಲ್ಲಿ ಕಾದಂಬರಿ ಬಿಡುಗಡೆಯಾಗುತ್ತಿದೆ.

Tejaswini Hegde Hamsayana Kannada Novel release on Dec 16

ಕಾರ್ಯಕ್ರಮದ ವಿವರ:
ಅಧ್ಯಕ್ಷತೆ: ಡಾ. ಸಿ.ಎನ್ ರಾಮಚಂದ್ರನ್, ವಿಮರ್ಶಕರು
ಕೃತಿ ಪರಿಚಯ: ಡಾ. ಕೆ.ಎನ್ ಗಣೇಶಯ್ಯ, ಕಾದಂಬರಿಕಾರರು

ನಿರೂಪಣೆ: ಸಂಯುಕ್ತಾ ಪುಲಿಗಲ್

ಸ್ಥಳ: ಕಪ್ಪಣ್ಣ ಅಂಗಳ,
32 'ಎ' ಮುಖ್ಯರಸ್ತೆ
ಜೆಪಿ ನಗರ 1ನೇ ಹಂತ
ಬೆಂಗಳೂರು, -071

Tejaswini Hegde Hamsayana Kannada Novel release on Dec 16

ಹಾಡುಗಾರಿಕೆ: ಪ್ರತಿಭಾ ಭಟ್, ವೈಣಿಕ್
ದಿನಾಂಕ : 16 ಡಿಸೆಂಬರ್ 2017
ಸಮಯ : ಸಂಜೆ 5 ಗಂಟೆ
ಲಘು ಉಪಹಾರ: 5 ಗಂಟೆಯಿಂದ 5.30

ಸ್ವಸ್ತಿ ಪ್ರಕಾಶನ, ಕುಮಟಾ ಏರ್ಪಡಿಸಿದ್ದ ಕಾದಂಬರಿ ಸ್ಪರ್ಧೆ -2017ಯಲ್ಲಿ ತೇಜಸ್ವಿನಿ ಹೆಗಡೆ ಅವರ ಮೊದಲ ಕಾದಂಬರಿ "ಹೊರಳುದಾರಿ" ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Smt. Tejaswini Hegde's Hamsayana Kannada Novel is set for release on December 16, 2017 at Kappannada Angala, JP Nagar, Bengaluru. Dr. C.N Ramachandran and Dr. K.N Ganeshaiah are the chief guests.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ