ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಹುಲ್ ವಿರುದ್ಧ ಶೆಹ್ಜಾದ್ ಹೇಳಿಕೆಗೆ ಸಹೋದರ ತೆಹ್ಸೀನ್ ಖಾರದ ಪ್ರತಿಕ್ರಿಯೆ

|
Google Oneindia Kannada News

ಬೆಂಗಳೂರು, ನವೆಂಬರ್ 30: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಬಹಿರಂಗವಾಗಿಯೇ ಸಿಡಿದೆದ್ದ ಮಹಾರಾಷ್ಟ್ರ ಕಾಂಗ್ರೆಸ್ ಕಾರ್ಯದರ್ಶಿ ಶೆಹ್ಜಾದ್ ಪೂನಾವಾಲಾ ನಡೆಯನ್ನು ಅವರ ಸಹೋದರ ತೆಹ್ಸೀನ್ ಪೂನಾವಾಲಾ ತೀವ್ರವಾಗಿ ಖಂಡಿಸಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ಕಾಂಗ್ರೆಸ್ ನಲ್ಲೇ ಭುಗಿಲೆದ್ದ ಅಸಮಾಧಾನ!ರಾಹುಲ್ ಗಾಂಧಿ ವಿರುದ್ಧ ಕಾಂಗ್ರೆಸ್ ನಲ್ಲೇ ಭುಗಿಲೆದ್ದ ಅಸಮಾಧಾನ!

ಶೆಹ್ಜಾದ್ ನನ್ನು ನಾನು ಮಗನಂತೆಯೇ ಬೆಳೆಸಿದ್ದೆ. ಆತನ ಬಗ್ಗೆ ಅತೀವ ಪ್ರೀತಿ, ಗೌರವ ಹೊಂದಿದ್ದೆ. ಆದರೆ ಆತನ ವರ್ತನೆ ನಾನು ತಲೆತಗ್ಗಿಸುವಂತೆ ಮಾಡಿದೆ. ನಾನು ಮಾಧ್ಯಮಗಳಿಗೆ ಸ್ಪಷ್ಟವಾಗಿ ಹೇಳುತ್ತೇನೆ. ಶೆಹ್ಜಾದ್ ಮಾತಿಗೆ ನಾನಾಗಲೀ, ನನ್ನ ತಾಯಿ ಮತ್ತು ಹೆಂಡತಿಯಾಗಲಿ ಹೊಣೆಗಾರರಲ್ಲ. ಆತನಿಗೆ ಯಾರದೇ ಮೇಲೆ ವೈಮನಸ್ಯವಿದ್ದಿದ್ದರೂ ಅದನ್ನು ಪಕ್ಷದ ಫೋರಂ ನಲ್ಲಿ ಚರ್ಚಿಸಬಹುದಿತ್ತು. ಅದನ್ನು ಬಿಟ್ಟು ಏಕಾಏಕಿ ಮಾಧ್ಯಮಗಳ ಮುಂದೆ ಹೋಗಿ ಹೇಳಿಕೊಳ್ಳುವ ಅಗತ್ಯವಿರಲಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

ರಾಹುಲ್ ಬಿಟ್ಟರೆ ಕಾಂಗ್ರೆಸ್ ಮುನ್ನಡೆಸುವ ತಾಕತ್ತು ಯಾರಿಗಿದೆ?ರಾಹುಲ್ ಬಿಟ್ಟರೆ ಕಾಂಗ್ರೆಸ್ ಮುನ್ನಡೆಸುವ ತಾಕತ್ತು ಯಾರಿಗಿದೆ?

Tehseen Poonawalla says brother Shehzad may be misguided

ಇಷ್ಟು ದೊಡ್ಡ ಪಕ್ಷದ ವಿರುದ್ಧ ಯಾರೂ ಮಾತನಾಡದಿರುವಾಗ ಶೆಹ್ಜಾದ್ ಗೆ ಮಾತ್ರ ಇದರಲ್ಲಿ ಹುಳುಕು ಕಾಣಿಸಿದರೆ, ಅದರರ್ಥ ಶೆಹ್ಜಾದ್ ನನ್ನು ಯಾರೋ ತಪ್ಪು ಹಾದಿಗೆ ಎಳೆಯುತ್ತಿದ್ದಾರೆ ಎಂಬುದು ಸಾಬೀತಾಗುತ್ತದೆ. ಆತನ ಮಾತುಗಳಿಗೆ ನಮ್ಮ ಕುಟುಂಬದ ಯಾರೂ ಜವಾಬ್ದಾರರಲ್ಲ ಎಂದು ಅವರು ಹೇಳಿದ್ದಾರೆ.

ತಾವು ತೋಡಿದ್ದ ವಿವಾದದ ಹಳ್ಳದಲ್ಲಿ ತಾವೇ ಬಿದ್ದರಾ ರಾಹುಲ್ ಗಾಂಧಿ?!ತಾವು ತೋಡಿದ್ದ ವಿವಾದದ ಹಳ್ಳದಲ್ಲಿ ತಾವೇ ಬಿದ್ದರಾ ರಾಹುಲ್ ಗಾಂಧಿ?!

ರಾಹುಲ್ ಗಾಂಧಿಯವರಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ ನೀಡುತ್ತಿರುವ ಕುರಿತು ಮಾತನಾಡಿದ್ದ ಶೆಹ್ಜಾದ್ ಪೂನಾವಾಲಾ, ರಾಜಕೀಯ ಅಂದ್ರೆ ಫ್ಯಾಮಿಲಿ ಬಿಸಿನೆಸ್ ಅಲ್ಲ, ಅಧ್ಯಕ್ಷರನ್ನು ಸಾಮರ್ಥ್ಯದ ಮೇಲೆ ಆಯ್ಕೆ ಮಾಡಿ, ಸರ್ನೇಮಿನಿಂದಲ್ಲ' ಎಂದು ಬಹಿರಂಗವಾಗಿಯೇ ರಾಹುಲ್ ಗಾಂಧಿಯವರಿಗೆ ಸವಾಲೆಸೆದಿದ್ದರು.

English summary
Tehseen Poonawalla, brother of Maharashtra Congress Secretary Shehzad Poonawalla who called out the party's president election 'rigged', has refused to be associated with his brother, citing he should have voiced his grievances at the party forum instead of taking it to Twitter or the media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X