ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರು ಬೋಗಿ ನಮ್ಮ ಮೆಟ್ರೋದಲ್ಲಿ ಮತ್ತೆ ತಾಂತ್ರಿಕ ದೋಷ

By Nayana
|
Google Oneindia Kannada News

ಬೆಂಗಳೂರು, ಜು.17: ಆರು ಬೋಗಿಯ ನಮ್ಮ ಮೆಟ್ರೋದಲ್ಲಿ ಮತ್ತೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಭಾನುವಾರ ಸಂಜೆ ಸಮಸ್ಯೆ ಕಾಣಿಸಿಕೊಂಡಿತ್ತು ಅಸರಿ ಪಡಿಸಲಾಗಿತ್ತು, ಆದರೆ ಸೋಮವಾರವೂ ಕೂಡ ಮತ್ತೆ ದೋಷ ಕಾಣಿಸಿಕೊಂಡು ಒಂದು ಗಂಟೆ ತಡವಾಗಿ ಕಾರ್ಯಾಚರಣೆ ಮಾಡಲಾಯಿತು.

ಜು.9ರಂದು ಆರು ಬೋಗಿ ರೈಲು ಕೆಟ್ಟು ನಿಂತಿದ್ದರಿಂದ ರಿಪೇರಿಗಾಗಿ ಡಿಪೊದಲ್ಲಿ ಇಡಲಾಗಿತ್ತು. ಬೆಳಗ್ಗೆ ಹಾಗೂ ಸಂಜೆ ಕಾರ್ಯಾಚರಣೆ ನಡೆಸಬೇಕಿದ್ದ ರೈಲು ಕೆಟ್ಟು ಹೋಗಿದ್ದರಿಂದ ಪ್ರಯಾಣಿಕರು ದಟ್ಟಣೆಯಲ್ಲೇ ಪ್ರಯಾಣಿಸಿದರು.

ಇಂದಿರಾನಗರ ಮೆಟ್ರೋದಲ್ಲಿ ಸಿಕ್ಕಿದ್ದೇನು? ತಲೆಕೆಡಿಸಿಕೊಂಡಿರುವ ಪೊಲೀಸರು ಇಂದಿರಾನಗರ ಮೆಟ್ರೋದಲ್ಲಿ ಸಿಕ್ಕಿದ್ದೇನು? ತಲೆಕೆಡಿಸಿಕೊಂಡಿರುವ ಪೊಲೀಸರು

ಶನಿವಾರ ಮತ್ತು ಭಾನುವಾರ ಆರು ಬೋಗಿ ರೈಲಿನ ಕಾರ್ಯಾಚರಣೆ ನಡೆಯುವುದಿಲ್ಲ ಹಾಗಾಗಿ ಪ್ರಯಾಣಿಕರಿಗೆ ಅಷ್ಟೇನು ತೊಂದರೆಯಾಗಿಲ್ಲ. ಮೈಯಪ್ಪನಹಳ್ಳಿ ಡಿಪೊದಲ್ಲಿರುವ ರೈಲು ಸೋಮವಾರದಿಂದ(ಜು.16) ಕಾರ್ಯಾಚರಸಿಸುವುದು ಅನುಮಾನ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಡಿಪೊ ಸಿಬ್ಬಂದಿ ತಾಂತ್ರಿಕ ದೋಷವನ್ನು ಕಂಡುಹಿಡಿದಿದ್ದು ಸರಿಪಡಿಸಿದ್ದಾರೆ.

Technical error: Namma metro six coach service interrupted again

ಆರು ಬೋಗಿ ಮೆಟ್ರೋ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 8ರಿಂದ ಕಾರ್ಯಾಚರಣೆ ಆರಂಭಿಸುತ್ತದೆ, ಸಂಚಾರ ದಟ್ಟಣೆ ಇರುವ ಸಮಯದಲ್ಲಿ ಇದು ಸಂಚರಿಸಲಿದೆ. ಈ ಸೋಮವಾರ ಬೆಳಗ್ಗೆ 10 ಗಂಟೆಗೆ ರೈಲು ಕಾರ್ಯಾಚರಣೆ ಆರಂಭಿಸಿತು. ಮೂರು ಬೋಗಿ ರೈಲು ಸೇವೆ ಮಾತ್ರ ಲಭ್ಯವಿದ್ದ ಕಾರಣ ಬೆಳಗ್ಗೆ 8ರಿಂದ 10ರವರೆಗೆ ಪ್ರಯಾಣಿಕರು ದಟ್ಟಣೆಯಲ್ಲೇ ಪ್ರಯಾಣಿಸಿದರು.

English summary
After resuming service of six coach in Namma Metro it is third time that technical error was found and service was interrupted on Sunday and Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X