ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಟ್ಟಡದಿಂದ ಹಾರಿ ಪ್ರಾಣ ಬಿಟ್ಟ ಮಂಡ್ಯ ಟೆಕ್ಕಿ ಶೋಭಾ

ಬೆಂಗಳೂರು: 30 ವರ್ಷ ವಯಸ್ಸಿನ ಮಂಡ್ಯ ಮೂಲದ ಸಾಫ್ಟ್ ವೇರ್ ಟೆಕ್ಕಿಯೊಬ್ಬರು ಕಚೇರಿ ಕಟ್ಟಡದಿಂದ ಹಾರಿ ಪ್ರಾಣಬಿಟ್ಟ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

By Mahesh
|
Google Oneindia Kannada News

ಬೆಂಗಳೂರು, ಜನವರಿ 19: 30 ವರ್ಷ ವಯಸ್ಸಿನ ಮಂಡ್ಯ ಮೂಲದ ಸಾಫ್ಟ್ ವೇರ್ ಟೆಕ್ಕಿಯೊಬ್ಬರು ಕಚೇರಿ ಕಟ್ಟಡದಿಂದ ಹಾರಿ ಪ್ರಾಣಬಿಟ್ಟ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

ಮೃತರನ್ನು ಶೋಭಾ ಲಕ್ಷ್ಮಿನಾರಾಯಣ ಎಂದು ಗುರುತಿಸಲಾಗಿದೆ. ತನ್ನ ಕಚೇರಿಯ ನಾಲ್ಕನೇ ಮಹಡಿಗೆ ಹೋಗಿ ಅಲ್ಲಿಂದ ಕೆಳಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಆತ್ಮಹತ್ಯೆಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ.[ಟೆಕ್ಕಿ ಶೋಭಾ ಅತ್ಮಹತ್ಯೆಗೆ ಆಸ್ತಿವಿವಾದ ಕಾರಣವೇ?]

Techie Shobha Lakshminarayana jumps to death

ಹರ್ಯಾನ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶೋಭಾ, ತನ್ನ ಕಚೇರಿಗೆ ಎಂದಿನಂತೆ ಹಾಜರಾಗಿ, ಕೆಲಸಕ್ಕೆ ಲಾಗ್ ಇನ್ ಆದ ಕೆಲ ನಿಮಿಷಗಳ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಹರ್ಮಾನ್ ಸಾಫ್ಟ್ ವೇರ್ ಸಂಸ್ಥೆಯ ಉದ್ಯೋಗಿಯಾಗಿದ್ದ ಶೋಭಾ ಅವರು ಬೆಳಗ್ಗೆ ಕಚೇರಿಗೆ ಬಂದಾಗ ಎಂದಿನಂತೆ ಇದ್ದರು. ಕಚೇರಿಯ ನಾಲ್ಕನೇ ಮಹಡಿಯಲ್ಲಿ ಕೆಫೆಟೇರಿಯಾ ಇದ್ದು, ಶೋಭಾ ನಾಲ್ಕನೇ ಮಹಡಿಗೆ ಹೋಗಿದ್ದರ ಬಗ್ಗೆ ಯಾರಿಗೂ ಅನುಮಾನ ಬರಲಿಲ್ಲ ಎಂದು ಸಹೋದ್ಯೋಗಿಗಳು ಹೇಳಿದ್ದಾರೆ.

ಮಂಡ್ಯ ಮೂಲದ ಶೋಭಾ ಅವರು ತನ್ನ ಕುಟುಂಬದೊಡನೆ ಬೆಂಗಳೂರಿನಲ್ಲೇ ನೆಲೆಸಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ವೈಟ್ ಫೀಲ್ಡ್ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

English summary
A 30-year-old woman jumped to death from the building of her office in Bengaluru on Thursday. The woman identified as Shobha Lakshminarayana is said to have jumped from the fourth floor of the building soon after she logged into work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X