ಅಪಘಾತದಲ್ಲಿ ಮೃತಪಟ್ಟ ಟೆಕ್ಕಿ ದೇಹ ಆಸ್ಪತ್ರೆಗೆ ದಾನ

Posted By:
Subscribe to Oneindia Kannada

ಬೆಂಗಳೂರು, ಜನವರಿ 29 : ಕಬ್ಬನ್‌ ರಸ್ತೆ ಜಂಕ್ಷನ್‌ನಲ್ಲಿ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಾಫ್ಟ್‌ವೇರ್ ಇಂಜಿನಿಯರ್ ಮಧುರಾ ಅವರ ಮೃತದೇಹವನ್ನು ಬೌರಿಂಗ್‌ ಆಸ್ಪತ್ರೆಗೆ ದಾನ ಮಾಡಲಾಗಿದೆ ಎಂದು ಕುಟುಂಬದವರು ಹೇಳಿದ್ದಾರೆ.

ಗುರುವಾರ ಬೆಳಗ್ಗೆ ಹಾಲಿನ ಲಾರಿ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಮಧುರಾ (24) ಅವರು ಸಾವನ್ನಪ್ಪಿದ್ದರು. ಬೈಕ್‌ನಲ್ಲಿದ್ದ ಅವರ ಸಹೋದ್ಯೋಗಿ ಶೋಭಾ ರಾವ್ ಅವರು ಗಾಯಗೊಂಡಿದ್ದರು.[ಶಿಂಷಾ ನದಿಗೆ ಉರುಳಿ ಬಿದ್ದ ಸರ್ಕಾರಿ ಬಸ್, 1 ಸಾವು]

madhura

ಬೆಳ್ತಂಗಡಿ ಮೂಲದ ಅಶೋಕ್ ಪಟವರ್ಧನ್ ಹಾಗೂ ಶಾಂತಾ ದಂಪತಿಯ ಪುತ್ರಿಯಾದ ಮಧುರಾ ಅವರು ಎಂ.ಟೆಕ್ ಪದವೀಧರೆಯಾಗಿದ್ದು, ಆರು ತಿಂಗಳ ಹಿಂದೆ ಅವರಿಗೆ ವಿಕ್ಟೋರಿಯಾ ರಸ್ತೆಯಲ್ಲಿರುವ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸ ಸಿಕ್ಕಿತ್ತು. [ನೀವು ಧರಿಸುವ ಹೆಲ್ಮೆಟ್ ಹೀಗಿರಬೇಕು]

ಅಶೋಕ್ ಪಟವರ್ಧನ್ ಅವರು ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದ ಬಾಗಲಕೋಟೆ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ನೆಲೆಸಿದ್ದಾರೆ. ಮಧುರಾ ಅವರು ತಾಯಿ ಮತ್ತು ತಮ್ಮನ ಜೊತೆ ಆರ್‌.ಟಿ.ನಗರ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು.

ಹೆಲ್ಮಟ್ ಜೀವ ಉಳಿಸಲಿಲ್ಲ : ಗುರುವಾರ ಬೆಳಗ್ಗೆ 9.50ರ ಸುಮಾರಿಗೆ ಮಧುರಾ ಮತ್ತು ಶೋಭಾರಾವ್ ಅವರು ಬೈಕ್‌ನಲ್ಲಿ ಕಚೇರಿಗೆ ಹೋಗುವಾಗ ಹಾಲಿನ ಟ್ಯಾಂಕರ್ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಹಿಂಬಂದಿ ಕುಳಿತಿದ್ದ ಮಧುರಾ ಅವರು ಕೆಳಗೆ ಬಿದ್ದ ತಕ್ಷಣ ತಲೆ ಲಾರಿಯ ಚಕ್ರಕ್ಕೆ ಸಿಲುಕಿತ್ತು. [ಅಷ್ಟಕ್ಕೂ ಸವಾರರು ಹೆಲ್ಮೆಟ್ ಯಾಕೆ ಧರಿಸಬೇಕು?]

ಈಗ ಹಿಂಬಂದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಮಧುರಾ ಅವರು ಹೆಲ್ಮೆಟ್ ಹಾಕಿದ್ದರು. ಆದರೆ, ಅದರ ಕ್ಲಿಪ್ ಹಾಕಿರಲಿಲ್ಲ. ಇದರಿಂದಾಗಿ ಅವರು ಕೆಳಗೆ ಬಿದ್ದ ತಕ್ಷಣ ಹೆಲ್ಮಟ್ ಕಳಚಿ ಬಿದ್ದಿದ್ದು, ತಲೆ ಲಾರಿಯ ಚಕ್ರಕ್ಕೆ ಸಿಲುಕಿತು ಎಂದು ಶಿವಾಜಿನಗರ ಸಂಚಾರಿ ಠಾಣೆ ಪೊಲೀಸರು ಹೇಳಿದ್ದಾರೆ.

ಅಪಘಾತ ನಡೆದ ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಮಧುರಾ ಅವರು ಮಾರ್ಗಮಧ್ಯೆ ಮೃತಪಟ್ಟಿದ್ದರು. ಬೈಕ್ ಚಾಲನೆ ಮಾಡುತ್ತಿದ್ದ ಶೋಭಾ ಅವರು ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಿಯಾಲಿಟಿ ಶೋದಲ್ಲಿ ಪಾಲ್ಗೊಂಡಿದ್ದರು : ಮಧುರಾ ಮತ್ತು ಅವರ ತಮ್ಮ ಮನೋಹರ್ ಅವರು ಹಲವಾರು ರಿಯಾಲಿಟಿ ಶೋಗಳಲ್ಲಿಯೂ ಪಾಲ್ಗೊಂಡಿದ್ದರು. ಈ ಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿಯೂ ಮಧುರಾ ಭಾಗವಹಿಸಿದ್ದರು.

ಮಧುರಾ ಅವರು ಹಾಡಿದ ಹಾಡುಗಳು ಇನ್ನು ನೆನಪು ಮಾತ್ರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 24-year-old software engineer Madhura was killed in a road accident after a milk tanker rammed into bike near Cubbon Road junction on Thursday morning. Madhura bidy donated to Bowring hospital Bengaluru. A case has been registered in Shivajinagar traffic police station.
Please Wait while comments are loading...