ಪತ್ನಿ ಮೇಲೆ ದ್ವೇಷಕ್ಕೆ ಡೇಟಿಂಗ್ ವೆಬ್ ಸೈಟ್ ನಲ್ಲಿ ಮಾಹಿತಿ, ಟೆಕ್ಕಿ ಬಂಧನ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 28: ಸಾಫ್ಟ್ ವೇರ್ ಎಂಜಿನಿಯರ್ ಹರ್ಷವರ್ಧನ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಡೇಟಿಂಗ್ ವೆಬ್ ಸೈಟ್ ನಲ್ಲಿ ತನ್ನ ಹೆಂಡತಿಯ ಮೊಬೈಲ್ ನಂಬರ್ ಮತ್ತು ಫೋಟೋಗಳನ್ನು ಹಾಕಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿಯಲ್ಲಿ ಆಟವಾಡುತ್ತಿದ್ದ ಬಾಲಕಿಯ ಪ್ರಾಣ ತೆಗೆದ ವೇಗದ ಕಾರು

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಹರಿಶಿ ಗ್ರಾಮದ ಹರ್ಷವರ್ಧನ್ ಭಟ್ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಆತ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ವಾಸವಿದ್ದಾರೆ. ಆತನಿಂದ ಲ್ಯಾಪ್‌ ಟಾಪ್‌ ಹಾಗೂ ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ.

Techie held for uploading wife's profile on dating site

ಹರ್ಷವರ್ಧನ್ ಭಟ್ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದರು. ಪ್ರತಿ ದಿನವೂ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದರು. ಇದರಿಂದಾಗಿ ಬೇಸತ್ತ ಪತ್ನಿ, ವಿಚ್ಛೇದನಕ್ಕಾಗಿ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಹಂತದಲ್ಲಿ ಪತ್ನಿಯ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಉದ್ದೇಶದಿಂದ ಹರ್ಷವರ್ಧನ್‌ ಇಂಥ ಕೃತ್ಯ ಎಸಗಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಧು-ವರಾನ್ವೇಷಣೆಗಾಗಿ ಇರುವ ವೆಬ್ ಸೈಟ್ ಸೇರಿದಂತೆ ಹಲವು ಡೇಟಿಂಗ್ ವೆಬ್ ಸೈಟ್ ಗಳಲ್ಲಿ ಪತ್ನಿಯ ಫೋಟೊ ಹಾಗೂ ಮೊಬೈಲ್‌ ನಂಬರ್‌ ಇತ್ತು. ಯಾರೆಂದರೆ ಅವರು ಕರೆ ಮಾಡಿ ಆ ಮಹಿಳೆಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ತನ್ನ ಪತಿಯೇ ಮಾಹಿತಿ ವೆಬ್ ಸೈಟ್ ಗೆ ಹಾಕಿರುವುದು ಗೊತ್ತಾಗುತ್ತಿದ್ದಂತೆ ಆಕೆ ದೂರು ನೀಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A senior software engineer with a private firm was arrested in Bengaluru recently for allegedly uploading his estranged wife's profile and mobile phone number on matrimonial and online dating websites.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ