ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದೇಶದಿಂದ ಮಗುವನ್ನು ನೋಡಲು ಬಂದಿದ್ದ ಟೆಕ್ಕಿ ರೈಲಿನಿಂದ ಬಿದ್ದು ಸಾವು

|
Google Oneindia Kannada News

ಬೆಂಗಳೂರು, ಜನವರಿ 4 : ಮಗುವನ್ನು ನೋಡಲು ವಿದೇಶದಿಂದ ಬಂದಿದ್ದ ಟೆಕ್ಕಿಯೊಬ್ಬರು ರೈಲಿನಿಂದ ಬಿದ್ದು ಮೃತಪಟ್ಟಿರುವ ಘಟನೆ ಕೆಆರ್‌ಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಚಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಕೆಆರ್‌ಪುರ ವಾಸಿ ಕೆ. ಕಿರಣ್‌ಕುಮಾರ್( 38) ಮೃತ ಟೆಕ್ಕಿ.

ಬೆಂಗಳೂರು : ಟೆಕ್ಕಿ ವಿಶ್ವಾಸ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ಬೆಂಗಳೂರು : ಟೆಕ್ಕಿ ವಿಶ್ವಾಸ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್

ತಮಿಳುನಾಡು ಮೂಲದ ಕಿರಣ್ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳ ಹಿಂದೆ ಕೆಲಸದ ಮೇಲೆ ಸ್ವಿಟ್ಜರ್‌ಲ್ಯಾಂಡ್ ಗೆ ಹೋಗಿದ್ದರು. ಈ ವೇಳೆ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಳು.

Techie falls to death in an attempt to jump off moving train

ಖುಷಿಯಲ್ಲಿ ಮಗುವನ್ನು ನೋಡಲು ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಕಿರಣ್ ಚೆನ್ನೈನಲ್ಲಿ ತವರು ಮನೆಯಲ್ಲಿದ್ದ ಪತ್ನಿಯನ್ನು ನೋಡಲು ಹೋಗಿದ್ದರು. ವಾಪಸ್ ಸ್ವಿಟ್ಜರ್‌ಲ್ಯಾಂಡ್‌ಗೆ ಹೋಗಬೇಕಿದ್ದ ಕಿರಣ್ ರೈಲಿನಲ್ಲಿ ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದರು.

ಈ ವೇಳೆ ಈ ಅವಗಢ ಸಂಭವಿಸಿದೆ.ಇದೇ ರೀತಿಯ ಘಟನೆ ಡಿಸೆಂಬರ್ 19ರಂದು ಬೆಂಗಳೂರಲ್ಲಿ ನಡೆದಿತ್ತು, ಹೆತ್ತವರನ್ನು ಊರಿಗೆ ಕಳುಹಿಸಲು ರೈಲ್ವೆ ನಿಲ್ದಾಣಕ್ಕೆ ತೆರಳಿದ್ದ, ಅವರಿಗೆ ಹ್ಯಾಪಿ ಜರ್ನಿ ಎಂದು ಹೊರಟಿದ್ದ ರೈಲಿನಿಂದ ಕೆಳಗಿಳಿಯಲು ಹೋಗಿ ತನ್ನ ಜೀವನದ ಜರ್ನಿಯನ್ನು ಅಲ್ಲಿಯೇ ಅಂತ್ಯಗೊಳಿಸಿದ್ದ.

ರೈಲಿಂದ ಇಳಿಯುವಾಗ ಬಿದ್ದು, ಹೆತ್ತವರ ಕಣ್ಣೆದುರೇ ಪ್ರಾಣಬಿಟ್ಟ ಟೆಕ್ಕಿ
ವಿಕ್ರಮ್ ಮೃತರು, ವಿಕ್ರಮ್ ಅವರನ್ನು ರಕ್ಷಿಸಲು ಹೋಗಿದ್ದ ತಂದೆ ವಿಜಯನ್ ಅವರಿಗೂ ಕಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗನೊಂದಿಗೆ ಸಮಯ ಕಳೆಯಬೇಕು ಎನ್ನುವ ಆಸೆಯಲ್ಲಿ ಪೋಷಕರು ಬೆಂಗಳೂರಿಗೆ ಬಂದಿದ್ದರು. ಬೆಂಗಳೂರು ಸುತ್ತಾಡಿಸಿ ಬಳಿಕ ರೈಲು ಹತ್ತಿಸಲು ವಿಕ್ರಂ ತೆರಳಿದ್ದ, ಮಾತನಾಡುತ್ತಲೇ ರೈಲು ಹೊರಟೇ ಬಿಟ್ಟಿತು ಆತುರವಾಗಿ ಇಳಿಯಲು ಹೋಗಿ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ.

ಕೇರಳ ಮೂಲದ ವಿಕ್ರಮ್ ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದನು, ತಂದೆ ವಿಜಯನ್ ಹಾಗೂ ತಾಯಿ ಉದಯಕುಮಾರಿ ಮಗನನ್ನು ನೋಡಲು ಐದು ದಿನಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು. ಡಿ.17ರಂದು ಅವರನ್ನು ಊರಿಗೆ ಕಳುಹಿಸುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.

ರೈಲು ಹೊರಟ ವಿರುದ್ಧ ದಿಕ್ಕಿನಲ್ಲಿ ಇಳಿದ ವಿಕ್ರಮ್, ನೋಡನೋಡುತ್ತಲೇ ರೈಲಿನ ಚಕ್ರದಡಿ ಸಿಲುಕಿದ್ದ, ಅದನ್ನು ನೋಡಿದ ವಿಜಯನ್ ರೈಲಿನಿಂದ ಜಿಗಿದರೂ ಆತನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಕಣ್ಣೀರಿಡುತ್ತಿದ್ದಾರೆ.

English summary
In a rush to get down as soon as the train started, a 38-year-old techie fell down and got killed instantly after he came under the train.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X