ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪತ್ನಿ ಕೊಂದು ಬದುಕಿನ 'ಸಾಫ್ಟ್ ವೇರ್' ಬದಲಿಸಿಕೊಂಡಿದ್ದ ಟೆಕ್ಕಿ ಬಂಧನ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 25: ಪತ್ನಿಕೊಂದು 15 ವರ್ಷಗಳ ಬಳಿಕ ಸಿಸಿಬಿ ಪೊಲೀಸರ ಕೈಗೆ ಟೆಕ್ಕಿ ಸಿಕ್ಕಿಬಿದ್ದಿದ್ದಾನೆ. ಗುಜರಾತ್ ನಲ್ಲಿ ಕಳೆದ 15 ವರ್ಷಗಳ ಹಿಂದೆ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಸಾಫ್ಟ್ ವೇರ್ ಕಂಪನಿ ಸೀನಿಯರ್ ಆಗಿದ್ದ ಟೆಕ್ಕಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ

ತರೂಟ್ ಜಿನ್ ರಾಜ್ ಬಂಧಿತ ಆರೋಪಿ, ಕೇರಳ ಮೂಲದ ಈತ ಓದಿದ್ದು ಬೆಳೆದೆದ್ದೆಲ್ಲಾ ಗುಜರಾತ್‌ನಲ್ಲಿ ಈತನ ತಂದೆ ಕೇಂದ್ರ ಸರ್ಕಾರದ ನೌಕರಿಯಲ್ಲಿದ್ದವರು, ಗುಜರಾತ್‌ಗೆ ವರ್ಗಾವಣೆಯಾಗಿದ್ದ ಕಾರಣ ಎಲ್ಲರೂ ಅಲ್ಲಿಯೇ ನೆಲೆಸಿದ್ದರು.

ಗೆಳತಿಯೊಂದಿಗೆ ಕಲಹ: ಲಿವಿಂಗ್ ಟುಗೆದರ್ ನಲ್ಲಿದ್ದ ಟೆಕ್ಕಿ ಆತ್ಮಹತ್ಯೆ ಗೆಳತಿಯೊಂದಿಗೆ ಕಲಹ: ಲಿವಿಂಗ್ ಟುಗೆದರ್ ನಲ್ಲಿದ್ದ ಟೆಕ್ಕಿ ಆತ್ಮಹತ್ಯೆ

2001ರಲ್ಲಿಅಹಮದಾಬಾದ್‌ನ ಸಜಿನಿ ಅವರನ್ನು ಮದುವೆ ಮಾಡಿಕೊಂಡಿದ್ದ, ಮದುವೆಯಾದ ಕೆಲವು ತಿಂಗಳುಗಳಲ್ಲೇ ಆಕೆಗೆ ಮತ್ತೊಬ್ಬನ ಜತೆ ಅನೈತಿಕ ಸಂಬಂಧ ಇದೆ ಎಂದು ಸುಳಿವು ಸಿಕ್ಕಿತ್ತು.

Techie arrested for wife murder after 15 years

2003ರಲ್ಲಿ ಸಜನಿಯ ಕೊಲೆ ನಡೆದು ಹೋಗಿತ್ತು, ತಾನೇ ಸ್ವತಃ ಅಹಮದಾಬಾದ್‌ನ ಠಾಣೆಗೆ ಹೋಗಿ ದೂರು ದಾಖಲಿಸಿದ್ದ, ಅವರ ಮನೆಯಲ್ಲಿ ಚಿನ್ನಾಭರಣಗಳನ್ನು ದೋಚಿದ್ದಲ್ಲದೆ ಪತ್ನಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿದ್ದ, ಪೊಲೀಸರು ತಿಂಗಳುಗಟ್ಟಲೆ ಪ್ರಕರಣವನ್ನು ಬೇಧಿಸಲು ಕಷ್ಟಪಟ್ಟಿದ್ದರು ಅಷ್ಟೊರೊಳಗೆ ಜಾಗ ಖಾಲಿ ಮಾಡಿ ಬೆಂಗಳೂರಿಗೆ ಬಂದಿದ್ದ.

ಮಾಜಿ ಪ್ರೇಯಸಿಯನ್ನು ಬೆದರಿಸಿ ರೇಪ್ ಮಾಡಿದ ಸಾಫ್ಟ್ ವೇರ್ ಎಂಜಿನಿಯರ್ ಮಾಜಿ ಪ್ರೇಯಸಿಯನ್ನು ಬೆದರಿಸಿ ರೇಪ್ ಮಾಡಿದ ಸಾಫ್ಟ್ ವೇರ್ ಎಂಜಿನಿಯರ್

ಅಹಮದಾಬಾದ್ ಪೊಲೀಸರು ತನಿಖೆಯ ದಿಕ್ಕನ್ನೇ ಬದಲಾಯಿಸಿದಾಗ ಪತಿಯೇ ಪೂರ್ವ ನಿಯೋಜಿತವಾಗಿ ಕೊಲೆ ಮಾಡಿರುವುದು ದೃಢಪಟ್ಟಿತ್ತು, ಜಿನ್ ರಾಜ್ ಕುಟುಂಬದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರೂ ಕೊಲೆಯಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ.ಅಹಮದಾಬಾದ್ ಪೊಲೀಸರ ಬಳಿ ಆತನ ಬೆಂಗಳೂರಲ್ಲಿ ಇರಬಹುದು ಎನ್ನುವ ಅನುಮಾನ ಮಾತ್ರ ಇತ್ತು. ಆರೋಪಿಯ ತಾಯಿಗೆ ಬೆಂಗಳೂರಿನಿಂದ ಕರೆ ಬಂದಿದ್ದನ್ನು ಪತ್ತೆ ಹಚ್ಚಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

English summary
In a filmy like story, a senior manager in a reputed software company has been arrested by Bangalore CCB police for killing of his wife after 15 years in Gujarat on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X