ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ, ಜಿ-ಮೇಲ್ ಐಡಿ ಬಗ್ಗೆ ಸಿಐಡಿ ತನಿಖೆ !

By Gururaj
|
Google Oneindia Kannada News

ಬೆಂಗಳೂರು, ಆಗಸ್ಟ್ 13 : ನಾಪತ್ತೆಯಾಗಿರುವ ಟೆಕ್ಕಿ ಕುಮಾರ್ ಅಜಿತಾಬ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಗೂಗಲ್‌ ಕೇಂದ್ರ ಕಚೇರಿಯ ಸಹಾಯ ಕೇಳಿದೆ. ಪ್ರಕರಣದ ತನಿಖೆ ಸಿಬಿಐಗೆ ವಹಿಸಬೇಕು ಎಂಬ ಅರ್ಜಿಯ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ.

ಸಿಐಡಿ ತಂಡ ನ್ಯಾಯಾಲಯದ ಆದೇಶದ ಜೊತೆಗೆ ಜಿ-ಮೇಲ್ ಐಡಿಯೊಂದರ ಬಗ್ಗೆ ಮಾಹಿತಿಯನ್ನು ನೀಡುವಂತೆ ಗೂಗಲ್ ಕಚೇರಿಯನ್ನು ಕೇಳಿದೆ. ಸಿಬಿಐಗೆ ಸಿಐಡಿ ಅಧಿಕೃತ ಮನವಿಯನ್ನು ಸಲ್ಲಿಸಿದ್ದು, ಕೇಂದ್ರ ಸರ್ಕಾರದ ಮೂಲಕ ಅದನ್ನು ಕ್ಯಾಲಿಫೋರ್ನಿಯಾದಲ್ಲಿರುವ ಗೂಗಲ್ ಕಚೇರಿಗೆ ರವಾನೆ ಮಾಡಲಾಗುತ್ತದೆ.

ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ?lಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ?l

Google

ಬಿಹಾರ ಮೂಲದ ಟೆಕ್ಕಿ ಅಜಿತಾಬ್ ಡಿ.18, 2017ರಿಂದ ನಾಪತ್ತೆಯಾಗಿದ್ದಾರೆ. ಅವರು ನಾಪತ್ತೆಯಾಗುವ ಮೊದಲು ರಮೇಶ್ ಎಂಬ ವ್ಯಕ್ತಿಯಿಂದ ಹಲವಾರು ಈ ಮೇಲ್‌ಗಳು ಬಂದಿವೆ. ಇಬ್ಬರೂ ಚಾಟ್ ನಡೆಸಿದ್ದಾರೆ. ಆದ್ದರಿಂದ, ರಮೇಶ್ ಅವರ ಜಿ-ಮೇಲ್ ಐಡಿಯ ಬಗ್ಗೆ ಹೆಚ್ಚಿನ ವಿವರ ಕೇಳಿ ಸಿಐಡಿ ಅಧಿಕಾರಿಗಳು ಪತ್ರ ಬರೆದಿದ್ದಾರೆ.

ಬೆಂಗಳೂರು ಟೆಕ್ಕಿ ನಿಗೂಢ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವುಬೆಂಗಳೂರು ಟೆಕ್ಕಿ ನಿಗೂಢ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು

30 ವರ್ಷದ ಕುಮಾರ್ ಅಜಿತಾಬ್ ಬೆಳ್ಳಂದೂರಿನ ಬ್ರಿಟಿಷ್ ಟೆಲಿಕಾಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಜಿತಾಬ್ ನಾಪತ್ತೆ ಪ್ರಕರಣದ ತನಿಖೆಯನ್ನು ಮೊದಲು ವೈಟ್ ಫೀಲ್ಡ್ ಪೊಲೀಸರು ನಡೆಸುತ್ತಿದ್ದರು. ನಂತರ ಸರ್ಕಾರ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಿತ್ತು.

ಟೆಕ್ಕಿ ಕುಮಾರ್ ಅಜಿತಾಬ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಅಜಿತಾಬ್ ತಂದೆ ಅಶೋಕ್ ಕುಮಾರ್ ಸಿನ್ಹಾ ಅವರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿದೆ.

ಟೆಕ್ಕಿ ಅಜಿತಾಬ್ ಕುಮಾರ್ ಕಾರನ್ನು ಓಲೆಕ್ಸ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದರು. ಡಿ.18ರಂದು ಯಾರೋ ಅವರಿಗೆ ಕರೆ ಮಾಡಿದ್ದಾರೆ. ಕಾರನ್ನು ತೋರಿಸಲು ಹೋದವರು ಮರಳಿ ಬಂದಿಲ್ಲ.

English summary
Criminal Investigation Department (CID) which probing the missing techie Ajitabh Kumar case dispatched a formal application seeking profile and router details from Google headquarters in California.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X