ಭಾವಿ ಪತ್ನಿ ನೋಡಲು ಹೊರಟ ಟೆಕ್ಕಿ ಆದಿತ್ಯ ನಾಪತ್ತೆ!

Posted By:
Subscribe to Oneindia Kannada

ಬೆಂಗಳೂರು, ಆಕ್ಟೋಬರ್ 12: ಹೈದರಾಬಾದಲ್ಲಿರುವ ತನ್ನ ಭಾವಿ ಪತ್ನಿಯನ್ನು ನೋಡಲು ತೆರಳಿದ್ದ ಬೆಂಗಳೂರಿನ ಸಾಫ್ಟ್ ವೇರ್ ಟೆಕ್ಕಿಯೊಬ್ಬರು ನಾಪತ್ತೆಯಾಗಿದ್ದಾರೆ. 31 ವರ್ಷ ವಯಸ್ಸಿನ ಆದಿತ್ಯ ಶ್ರೀವಾಸ್ತವ ಅವರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಹಾಗೂ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಮವಾರ ರಾತ್ರಿ 9.30ಕ್ಕೆ ಆದಿತ್ಯ ಶ್ರೀವಾಸ್ತವ ಅವರು ಬೆಂಗಳೂರಿನಿಂದ ಬಸ್ ಮೂಲಕ ಹೈದರಾಬಾದ್ ಗೆ ಹೊರಟ ಆದಿತ್ಯ ಅವರು ಹೈದರಾಬಾದ್ ತಲುಪಿಲ್ಲ. ಈ ಬಗ್ಗೆ ಭಾವಿ ಪತ್ನಿ ಕೃತ್ತಿಕಾ ಸಕ್ಸೇನಾ ಅವರು ದೂರು ದಾಖಲಿಸಿದ್ದಾರೆ. ಬೆಂಗಳೂರು ಬಿಡುವ ಮುನ್ನ 9.12ಕ್ಕೆ ಕೃತ್ತಿಕಾಗೆ ಮೆಸೇಜ್ ಮಾಡಿರುವುದು ಪತ್ತೆಯಾಗಿದೆ. ನನ್ನ ಫೋನಲ್ಲಿ ಬಯಾಟರಿ ಚಾರ್ಜ್ ಇಲ್ಲ, ಬೆಳಗ್ಗೆ ಹೈದರಾಬಾದಿನಲ್ಲಿ ಸಿಗುತ್ತೇನೆ ಎಂದು ಆದಿತ್ಯ ಮೆಸೇಜ್ ಮಾಡಿದ್ದಾರೆ.

Techie Aditya Shrivastava goes missing under mysterious circumstances

ಆದಿತ್ಯ ನಾಪತ್ತೆ ಬಗ್ಗೆ ಆದಿತ್ಯ ಅವರ ಸ್ನೇಹಿತರಾದ ಅಂತರಾ ಚಟರ್ಜಿ ಅವರು ಫೇಸ್ ಬುಕ್ ನಲ್ಲಿ ಈ ಬಗ್ಗೆ ವಿವರವಾಗಿ ಬರೆದುಕೊಂಡಿದ್ದಾರೆ. ಬಿಸಿನೆಸ್ ಮೀಟಿಂಗ್ ಗಾಗಿ ಮೂರು ದಿನಗಳ ಮಟ್ಟಿಗೆ ಆದಿತ್ಯ ಅವರು ಬೆಂಗಳೂರಿಗೆ ಬಂದಿದ್ದರು. ಆರ್ಟ್ ಆಫ್ ಲಿವಿಂಗ್ ಸದಸ್ಯರಾಗಿದ್ದ ಕಾರಣ ರವಿಶಂಕರ್ ಗುರೂಜಿ ಅವರ ಆಶ್ರಮದಲ್ಲಿ ತಂಗಿದ್ದರು ಎಂದು ತಿಳಿದು ಬಂದಿದೆ ಎಂದು ಕಗ್ಗಲಿ ಪುರ ಠಾಣೆ ಸಬ್ ಇನ್ಸ್ ಪೆಕ್ಟರ್ ಕೃಷ್ಣ ಕುಮಾರ್ ಅವರು ನ್ಯೂಸ್ ಮಿನಿಟ್ ಗೆ ಹೇಳಿದ್ದಾರೆ.

ಅಂತರಾ ಚಟರ್ಜಿ ಅವರು ತಮ್ಮ ಫೇಸ್ ಬುಕ್ ಫೋಸ್ಟ್ ನಲ್ಲಿ ರಾತ್ರಿ 9.58ಕ್ಕೆ ಬೆಳ್ಳಂದೂರು ಬಳಿ ಕೊನೆಯದಾಗಿ ಫೋನ್ ಸಿಗ್ನಲ್ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಆದಿತ್ಯ ಅವರು ಹೈದರಾಬಾದ್ ಬಸ್ ಹತ್ತಿದ್ರಾ ಇಲ್ವಾ ಅಥವಾ ಬೇರೆ ವಾಹನದಲ್ಲಿ ತೆರಳಿದ್ದಾರಾ ಎನ್ನುವುದು ಖಚಿತವಾಗಿಲ್ಲ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಲಾಗುತ್ತಿದ. ನಾಪತ್ತೆ ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಕೃಷ್ಣ ಕುಮಾರ್ ಹೇಳಿದರು. ಅಂತರಾ ಅವರ ಫೇಸ್ ಬುಕ್ ನಲ್ಲಿ ಮನವಿ

Aditya Shrivastava, a dear friend has been missing since Oct 10th. He last spoke to his fiance, Kritika Saxena at 9.12 pm and last phone trace has been at 9.58pm in Bellandur, Bangalore. He was to board a bus from Bangalore around 9.30 pm and reach Hyderabad on early morning of Oct 11th. He was wearing brown pants and a bluish grey tshirt. We are working with local police and authorities in both cities but need help from everyone possible. If you know anyone who can help us, or have seen him please get in touch on 9920988839 (Antara Chatterjee) or 9833910618 (Swati Khandelwal) Please share this and tag any and everyone who may be able to help. Thank you.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A thirty-one-year-old techie Aditya Shrivastava gone missing under mysterious circumstances from Bengaluru on Monday night, when he was supposed to board a bus to Hyderabad.
Please Wait while comments are loading...