ಪ್ರೇಕ್ಷಕರ ಒತ್ತಾಯದ ಮೇರೆಗೆ ಪುರಹರ ನಾಟಕ ಮತ್ತೆ ರಂಗಕ್ಕೆ

Posted By:
Subscribe to Oneindia Kannada

ಬೆಂಗಳೂರು, ಜ.28: ಯುವ ಉತ್ಸಾಹಿ ರಂಗಕರ್ಮಿಗಳು ಸೇರಿಕೊಂಡು ಕಟ್ಟಿರುವ ಹೊಸ ತಂಡ ಆಕೃತಿ ಮೂಲಕ ಜನಮನ್ನಣೆ ಗಳಿಸಿದ ಐತಿಹಾಸಿಕ ನಾಟಕ 'ಪುರಹರ' ಮತ್ತೊಮ್ಮೆ ಪ್ರದರ್ಶನಕ್ಕೆ ಸಿದ್ಧವಾಗಿದೆ. ಕಳೆದ ಮೂರು ವರ್ಷಗಳಿಂದ ನಾಟಕ ಪ್ರದರ್ಶನಕ್ಕಾಗಿ ರಂಗಪ್ರೇಮಿಗಳಿಂದ ಒತ್ತಾಯ ಕೇಳಿ ಬಂದಿತ್ತು.

ಶೈವ-ವೈಷ್ಣವ ಪಂಥ, ಮುಸ್ಲಿಮ್ ಆಡಳಿತ, ಧರ್ಮ-ಕರ್ಮ, ವೀರತ್ವ, ಆಧ್ಯಾತ್ಮ ಹೀಗೆ ಅನೇಕ ವಿಷಯಗಳ ಸುತ್ತ ಸುತ್ತುವ ಈ ನಾಟಕದ ಕಥಾ ವಸ್ತುವಿನಲ್ಲಿ ನವಿರಾದ ಪ್ರೇಮಕಥೆಯೂ ಇದೆ.

'PURAHARA' a historical Kannada play

ಕಾದಂಬರಿಗಾರರಾಗಿ ಜನಪ್ರಿಯತೆ ಗಳಿಸಿರುವ ಕರ್ಮ, ನನ್ನಿ ಖ್ಯಾತಿಯ ಕರಣಂ ಪವನ್ ಪ್ರಸಾದ್ ಅವರು ರಚಿಸಿರುವ ಈ ನಾಟಕವನ್ನು ಶ್ರೀಕಂಠ ಶ್ರೌತಿ ಅವರು ಅಚ್ಚುಕಟ್ಟಾಗಿ ನಿರ್ದೇಶಿಸಿದ್ದಾರೆ. [ಭೈರಪ್ಪ ಹೊಗಳಿದ 'ಕರ್ಮ' ಕೃತಿ ವಿಶ್ವದೆಲ್ಲೆಡೆ ಲಭ್ಯ]

ಮುಖ್ಯ ಪಾತ್ರದಲ್ಲಿ ಅರಬ್ ಆದಿಲ್ ಶಾ ಆಗಿ ಕರಣಂ ಪವನ್ ಪ್ರಸಾದ್ ನಟಿಸಿದ್ದರೆ, ಅವರ ಸಮನಾಗಿ ಅವಧೂತನ ಪಾತ್ರಕ್ಕೆ ವಿಜಯ್ ಜೆ ಜೋಯಿಸ್ ಜೀವ ತುಂಬಿದ್ದಾರೆ. ಉಳಿದ ಪಾತ್ರವರ್ಗ ಹಾಗೂ ನಾಟಕ ಪ್ರದರ್ಶನದ ವಿವರ ಮುಂದಿದೆ:

ರಚನೆ: ಕರಣಂ ಪವನ್ ಪ್ರಸಾದ್.
ನಿರ್ದೇಶನ: ಶ್ರೀಕಂಠ ಶ್ರೌತಿ
ಬೆಳಕು: ಮನಸ್ ಸಂಪತ್
ಪ್ರಸಾಧನ: ಗುರು

ಪಾತ್ರವರ್ಗ:
ಅರಬ್ ಆದಿಲ್ ಶಾ: ಕರಣಂ ಪವನ್ ಪ್ರಸಾದ್
ಅವಧೂತ: ವಿಜಯ್ ಜೆ ಜೋಯಿಸ್

'PURAHARA' a historical Kannada play

ಅನಿರುದ್ಧ ಶರ್ಮ- ಶ್ರೇಯಸ್ ಶರ್ಮ ಕೆಎಸ್
ಮಣಿರುದ್ಧ ಶರ್ಮ: ಕಾರ್ತಿಕ್ ಬಿ ಗೌಡ
ಗರುಡಾಚಾರಿ- ರೋಹಿತ್ ಅಶೋಕ್ ಹೆಗ್ಡೆ
ಕಾಲಭೈರವ ಶರ್ಮ- ಭರತ್ ವಿ ರವ್
ವಾಸುದೇವರಾಯ-ಶಶಿಕುಮಾರ್ ಎ
ಖ್ವಾಜ ಬಷೀರ್-ತೇಜಸ್ವಿ ಆರ್
ಶ್ಯಾಮಸುಂದರ -ಸಮೀರ್ ಎನ್ ಎಂ
ವಿಜಯ ಹಾಗೂ ತಿರುಮಲ-ಪವನ್ ಕುಮಾರ್ ವಿ
ಗಜಾನನ- ವಾದಿರಾಜ್ ಭಾರ್ಗವ್
ಗೂಟ ಶಂಕರ- ರಾಕೇಶ್
ದೇವಿ-ಅದಿತಿ ಹಂದೆ
ಸುಶೀಲಮ್ಮ- ಅಪೂರ್ವ ಎಂ
ನಂದಿ-ಆದರ್ಶ್

ನಾಟಕದ ಅವಧಿ: 80 ನಿಮಿಷ
ಟಿಕೆಟ್ ಬೆಲೆ: 120 ರು

ಎಲ್ಲಿ?: ಕೆಎಚ್ ಕಲಾಸೌಧ, ಶ್ರೀರಾಮಾಂಜನೇಯ ಗುಡ್ಡ ದೇಗುಲದ ಹಿಂಭಾಗ
ಮರಡಿ ಸುಬ್ಬಯ್ಯ ಚೌಲ್ಟ್ರಿ ಹತ್ತಿರ
ಹನುಮಂತ ನಗರ
ಬೆಂಗಳೂರು
ದಿನಾಂಕ/ ದಿನ: ಜನವರಿ 31, 2016, ಸಂಜೆ 7.15

ಟಿಕೆಟ್ ಬುಕ್ ಮಾಡಲು

@ BookMyShow
http://in.bookmyshow.com/bengaluru/plays/purahara/ET00037883

@ FILMYSPHERE (20% discount coupon code for play PRHARA20)
https://www.filmysphere.com/purahara

ಟೆಲಿ ಬುಕ್ಕಿಂಗ್ ಗಾಗಿ: 99025 90303

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Team AAKRUTI presents 'PURAHARA' a historical Kannada play which will be staged on January 31st at K H Kalasoudha, Hanumanthanagar, Bengaluru.Play Written by Karanam Pavan Prasad and directed by Srikanta Shrowthi
Please Wait while comments are loading...