ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇ2 ರಂದು ಪಿಯು ತರಗತಿಗಳ ಬಹಿಷ್ಕಾರ: ಉಪನ್ಯಾಸಕರ ತೀರ್ಮಾನ

|
Google Oneindia Kannada News

ಬೆಂಗಳೂರು, ಏಪ್ರಿಲ್ 13: ಬೇಸಿಗೆ ರಜೆ ಕಡಿತಗೊಳಿಸಿ ಪಿಯುಸಿ ತರಗತಿಗಳನ್ನು ಬೇಗ ಆರಂಭಿಸುವುದಕ್ಕೆ ಪಿಯು ಉಪನ್ಯಾಸಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈ ಕುರಿತು ಸುತ್ತೋಲೆ ವಾಪಸ್ ಪಡೆಯದಿದ್ದಲ್ಲಿ ಮೇ 2ರಂದು ರಾಜ್ಯವ್ಯಾಪಿ ತರಗತಿಗಳನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಪದವಿಪೂರ್ವ ಶಿಕ್ಷಣ ಇಲಾಖೆಯು ರಜೆ ಸೌಲಭ್ಯ ಹೊಂದಿರುವ ಇಲಾಖೆಯಾಗಿರುವುದರಿಂದ ದಸರಾ ಹಾಗೂ ಬೇಸಿಗೆ ಅವಧಿಯ ಮೂರು ತಿಂಗಳ ರಜೆ ಪಡೆಯುವುದು ಉಪನ್ಯಾಸಕರ ಹಕ್ಕಾಗಿದೆ.

ಮೇ 2ರಿಂದಲೇ ಪಿಯುಸಿ ತರಗತಿಗಳು ಆರಂಭ! ಮೇ 2ರಿಂದಲೇ ಪಿಯುಸಿ ತರಗತಿಗಳು ಆರಂಭ!

ಸರ್ಕಾರಿ ರಜೆ ರಹಿತ ಇಲಾಖೆಯೆಂದು ಅಧಿಕೃತವಾಗಿ ಆದೇಶ ಹೊರಡಿಸಬೇಕು ಇಲ್ಲವೇ ಸುತ್ತೋಲೆ ಹಿಂಪಡೆಯಬೇಕು ಎಂದು ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಒತ್ತಾಯಿಸಿದ್ದಾರೆ.

Teachers opposes early resume of PU colleges

ಈ ವರ್ಷ ಪ್ರಥಮ ಪಿಯುಸಿ ಪರೀಕ್ಷೆಗಳುಫೆ.21ರಂದೇ ಮುಕ್ತಾಯವಾಗಿದ್ದು, ವಿದ್ಯಾರ್ಥಿಗಳಿಗೆ 69 ದಿನ ರಜೆ ಸಿಕ್ಕಂತಾಗಿದೆ ಎಂದು ಇಲಾಖೆಯ ನಿರ್ದೇಶಕರು ಹೇಳಿಕೆ ನೀಡಿದ್ದಾರೆ. ಆದರೆ ಈ ವರ್ಷ ವಿಧಾನಸಭೆ ಚುನಾವಣೆ ಮೇ ನಲ್ಲಿ ನಡೆಯುತ್ತಿರುವುದರಿಂದ ವಾಸ್ತವವಾಗಿ 10 ದಿನಗಳ ಮುನ್ನ ಶೈಕ್ಷಣಿಕ ವರ್ಷ ಮುಕ್ತಾಯವಾಗಿದೆ.

ಆದರೆ ಮಾರ್ಚ್ 18ರವರೆಗೂ ಉಪನ್ಯಾಸಕರು ಪಿಯುಸಿ ಪರೀಕ್ಷೆಗಳನ್ನು ನಡೆಸಿದ್ದಾರೆ. ಅಲ್ಲದೆ, ಏಪ್ರಿಲ್ 11ರವರೆಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಿರ್ವಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ನಡುವೆ ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗಳನ್ನು ಏ.16ರಿಂದ 28ರವರೆಗೆ ನಡೆಸಲು ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ. ಅಲ್ಲದೆ, ಉತ್ತರ ಪತ್ರಿಕೆಗಳ ಪೌಲ್ಯಮಾಪನ ಮುಗಿಸಿ ಮೇ 2 ರಂದು ಫಲಿತಾಂಶ ಪ್ರಕಟಿಸುವುದಾಗಿ ಇಲಾಖೆ ಹೇಳಿದೆ. ಇದರಿಂದ ಉಪನ್ಯಾಸಕರಿಗೆ ರಜೆಯ ಸೌಲಭ್ಯ ಪಡೆದುಕೊಳ್ಳಲು ಅನನುಕೂಲವಾಗಲಿದೆ ಎಂದಿದ್ದಾರೆ.

English summary
Idea of cutting down the summer holiday for PU colleges in the state has received strong opposition from teachers. PU college teachers have decided to boycott the classes on May 2 urging to withdrawal of the decision taken by department of pre university.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X