ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿರಾ ಕ್ಯಾಂಟೀನ್‌ನಲ್ಲಿ ಇನ್ಮುಂದೆ ಟೀ, ಕಾಫಿನೂ ಸಿಗುತ್ತೆ

|
Google Oneindia Kannada News

ಬೆಂಗಳೂರು, ನವೆಂಬರ್ 16: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಳವರ್ಗದವರು, ಬಡವರಿಗಾಗಿಯೇ ಹಿಂದಿನ ಕಾಂಗ್ರೆಸ್ ಸರ್ಕಾರ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್ ನಲ್ಲಿ ಇನ್ನುಮುಂದೆ ಟೀ, ಕಾಫಿಯೂ ದೊರೆಯಲಿದೆ.

ಬಿಬಿಎಂಪಿ ಸದಸ್ಯರಿಗೆ ಲಕ್ಷುರಿ ಭೋಜನ ಬದಲು ಇಂದಿರಾ ಕ್ಯಾಂಟೀನ್ ಊಟ ಬಿಬಿಎಂಪಿ ಸದಸ್ಯರಿಗೆ ಲಕ್ಷುರಿ ಭೋಜನ ಬದಲು ಇಂದಿರಾ ಕ್ಯಾಂಟೀನ್ ಊಟ

ಇಷ್ಟು ದಿನ ಕೇವಲ ತಿಂಡಿ, ಊಟವನ್ನು ನೀಡಲಾಗುತ್ತಿದ್ದು, ಟೀ, ಕಾಫಿಯನ್ನೂ ನೀಡಬೇಕೆಂಬ ಬೇಡಿಕೆ ಬಂದಿದೆ. ಎಲ್ಲಾ ಕ್ಯಾಂಟೀನ್‌ನಲ್ಲೂ ಇದನ್ನು ಶೀಘ್ರವೇ ಪ್ರಾರಂಭಿಸಲಾಗುವುದು. ಆದರೆ ಇನ್ನೂ ದರ ನಿಗದಿ ಮಾಡಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ ತಿಳಿಸಿದ್ದಾರೆ.

ಶೀಘ್ರದಲ್ಲೇ ಬದಲಾಗಲಿದೆ ಇಂದಿರಾ ಕ್ಯಾಂಟೀನ್ ಮೆನು ಶೀಘ್ರದಲ್ಲೇ ಬದಲಾಗಲಿದೆ ಇಂದಿರಾ ಕ್ಯಾಂಟೀನ್ ಮೆನು

ನಿಯಮದ ಅನುಸಾರ ಇಂದಿರಾ ಕ್ಯಾಂಟಿನ್ ಗ್ರಾಹಕರು ಹೆಚ್ಚು ಆಹಾರ ಬೇಕಾದಲ್ಲಿ ಎರಡು ಟೋಕನ್ ತೆಗೆದುಕೊಳ್ಳಬೇಕಾದದ್ದು ಕಡ್ಡಾಯವಾಗಿದೆ. ಆದರೆ ಮುಂದಿನ ದಿನದಲ್ಲಿ ಒಂದೇ ಟೋಕನ್ ಅಡಿಯಲ್ಲಿ ಹೆಚ್ಚು ಉತ್ತಮ, ಸಾಕಷ್ಟು ಪ್ರಮಾಣದ ಉಪಹಾರವನ್ನು ಗ್ರಾಹಕ ನಿರೀಕ್ಷಿಸಬಹುದಾಗಿದೆ. ಆದರೆ ಮದ್ಯಾಹ್ನದ ಊಟ ಹಾಗೂ ರಾತ್ರಿಯ ಭೋಜನ ಪ್ರಮಾಣದಲ್ಲಿ ಯಾವ ಬದಲಾವಣೆ ಇರುವುದಿಲ್ಲ.

Tea, cofee available soon in Indira canteen

ಪ್ರಸ್ತುತ ಇಂದಿರಾ ಕ್ಯಾಂಟೀನ್ ನಲ್ಲಿ ಬೆಳಗಿನ ಉಪಹಾರಕ್ಕಾಗಿ ಒಂದು ಟೋಕನ್ ಗೆ 150 ಗ್ರಾಂ ತೂಕದ ಮೂರು ಇಡ್ಲಿಗಳು, ಅಥವಾ ಪುಳಿಯೋಗರೆ (300 ಗ್ರಾಂ), ಖಾರಾ ಬಾತ್ (200 ಗ್ರಾಂ), ಪೊಂಗಲ್ (225 ಗ್ರಾಂ), ಖಿಚಡಿ (200 ಗ್ರಾಂ), ಚಿತ್ರಾನ್ನ (225 ಗ್ರಾಂ), ವಾಂಗೀ ಬಾತ್ (225 ಗ್ರಾಂ) ಚೌ-ಚೌ ಬಾತ್ (175 ಗ್ರಾಂ) ಗಳನ್ನು ನೀಡಲಾಗುತ್ತದೆ. ಆದರೆ ಫೆ.1ರಿಂದ ಈ ಪ್ರಮಾಣದಲ್ಲಿ ಸುಮಾರು ಅರ್ಧದಷ್ಟು ಹೆಚ್ಚಳವಾಗಿದೆ.

ಇಂದಿರಾ ಕ್ಯಾಂಟೀನ್ ಶುರುವಾಗಿ 1 ವರ್ಷ, ಮಾರಾಟದ ಲೆಕ್ಕ 6 ಕೋಟಿ ಪ್ಲೇಟ್ ಇಂದಿರಾ ಕ್ಯಾಂಟೀನ್ ಶುರುವಾಗಿ 1 ವರ್ಷ, ಮಾರಾಟದ ಲೆಕ್ಕ 6 ಕೋಟಿ ಪ್ಲೇಟ್

Tea, cofee available soon in Indira canteen

ಇತ್ತೀಚೆಗಷ್ಟೇ ಕಾರ್ಪೊರೇಟರ್‌ಗಳು ಇಂದಿರಾ ಕ್ಯಾಂಟೀನ್ ಊಟವನ್ನೇ ಮಾಡಬೇಕು ಎಂದು ಮೇಯರ್ ಸೂಚನೆ ನೀಡಿದ್ದರು. ಆದರೆ ಯಾವುದೇ ಕಾರ್ಪೊರೇಟರ್ ಗಳು ಇಂದಿರಾ ಕ್ಯಾಂಟೀನ್ ಆಹಾರ ಸೇವಿಸದೆ ಸೂಚನೆ ವಿರುದ್ಧವಾಗಿ ನಡೆದುಕೊಂಡಿದ್ದು ಸುದ್ದಿಯಾಗಿತ್ತು.

English summary
Deputy chief minister Dr.G Parameshwar has said that tea and coffee will be available in Indira canteen soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X