ಎಸಿ ಪತ್ನಿ ಜೊತೆ 15 ಜನರ ದುರ್ವರ್ತನೆ, ಒಬ್ಬ ಬಂಧನ

Posted By:
Subscribe to Oneindia Kannada

ಬೆಂಗಳೂರು, ಜನವರಿ 10: ರಾಜ್ಯ ಟೆನಿಸ್ ಅಸೋಸಿಯೇಶನ್ನಿನಲ್ಲಿ ನಡೆದ ಹೊಸವರ್ಷಾಚರಣೆ ವೇಳೆ 15 ಜನರ ತಂಡದಿಂದ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಪತ್ನಿಯ ಮೇಲೆ ಅಸಭ್ಯವಾಗಿ ವರ್ತಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಒಬ್ಬರನ್ನು ಬಂಧಿಸಲಾಗಿದೆ.

ಹೊಸ ವರ್ಷದಂದು ರಾಜ್ಯ ಟೆನಿಸ್ ಅಸೋಸಿಯೇಶನ್ ವತಿಯಿಂದ ನಡೆದ ನ್ಯೂಇಯರ್ ಪಾರ್ಟಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಮತ್ತು ಆತನ ಪತ್ನಿ ಭಾಗವಹಿಸಿದ್ದಾರೆ. ಉಪ ಆಯುಕ್ತ ಪಾರ್ಟಿಯಲ್ಲಿ ಪತ್ನಿಯನ್ನು ಒಂದೆಡೆ ಇರಲು ಹೇಳಿ ಊಟ ಕೌಂಟರ್ ಬಳಿ ತೆರಳಿದ್ದಾರೆ. ಆ ವೇಳೆ 15 ಜನರ ತಂಡ ಎಸಿ ಪತ್ನಿ ಬಳಿ ಧಾವಿಸಿ ಬಂದಿದ್ದು ಸೆಲ್ಫಿ ತೆಗೆಯಲು ಆಕೆಗೆ ಫೋನ್ ನೀಡಿದ್ದು ಅಸಭ್ಯ ಮಾತನಾಡಿ ದುರ್ವರ್ತನೆ ಮೆರೆದಿದ್ದಾರೆ. ಇದನ್ನು ಆಕೆ ನೊಂದು ತನ್ನ ಪತಿಗೆ ವಿವರಿಸಿದ್ದು ವಾಣಿಜ್ಯ ತೆರೆಗೆ ಉಪಆಯುಕ್ತ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.[ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ ಮೈದುನ ನಾದಿನಿ ಜೋಡಿ]

Tax Sub Divisional Officer of mistreatment by a group of 15 people on his wife

ಈ ಸಂಬಂಧ ತನಿಖೆ ಪ್ರಾರಂಭಿಸಿದ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಹೊಸವರ್ಷಾಚರಣೆ ವೇಳೆ ನಡೆದ ಘಟನಾವಳಿಗಳನ್ನು ಪರಿಶೀಲಿಸಿದ್ದು, ಟೆನಿಸ್ ಅಸೋಸಿಯೇಶನ್ನಿನಲ್ಲಿ ಇದ್ದ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದ್ದಾರೆ. ಇದರಿಂದ ಹದಿನೈದು ಜನರ ತಂಡ ಬಗ್ಗೆ ಮಾಹಿತಿ ಪಡೆದ ಪೊಲೀಸರು ಶಿವರಾಜ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದು ಎಫ್ಐಆರ್ ದಾಖಲಿಸಿದ್ದಾರೆ[ಯುವತಿಯ ಟಿ ಶರ್ಟ್ ಹಿಡಿದು ಎಳೆದಾಡಿದ ಕಾಮುಕರು]

ಇನ್ನು ಹದಿನಾಲ್ಕು ಆರೋಪಿಗಳಿಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಹೊಸ ವರ್ಷಾಚರಣೆ ಸಂಬಂಧ ದೌರ್ಜನ್ಯ ಪ್ರಕರಣಗಳು ಹಸಿಯಾಗಿರುವಾಗಲೇ ಮತ್ತೆ ಮತ್ತೆ ಪ್ರಕರಣಗಳು ಅದಕ್ಕೆ ಸೇರಿಕೆಯಾಗುತ್ತಿರುವುದು ನಗರಕ್ಕೆ ಕೆಟ್ಟಹೆಸರು ತರುತ್ತಿದೆ.[ಒಂದು ಹಗ್, ಕಿಸ್ ಗಾಗಿ ನಡೆದಿತ್ತಾ ಕಮ್ಮನಹಳ್ಳಿ ಕಿರುಕುಳ?]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A person has been arrested by Bengaluru police for misbehaving with wife of Assistant Commissioner in Income Tax department. The incident happened on 1st January at Tennis Association. It is alleged that 15 people misbehaved with the lady.
Please Wait while comments are loading...