ಬೆಂಗಳೂರಿನ ಮೊದಲ ನೀರು ಆರೋಗ್ಯ ಕೇಂದ್ರ ಸ್ಥಾಪನೆ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 22: ದೇಶದ ಅತ್ಯಂತ ಹಳೆಯದಾದ ಜನೋಪಕಾರಿ ಮತ್ತು ಲಾಭ ರಹಿತ ಸಮಾಜ ಸೇವಾ ಸಂಸ್ಥೆಗಳಲ್ಲಿ ಟಾಟಾ ಟ್ರಸ್ಟ್ಸ್‌ಒಂದಾಗಿದೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಟ್ರಸ್ಟ್ಸ್ ಇದೀಗ ಜಲಧಾರ ಫೌಂಡೇಶನ್‌ಜತೆ ಕೈಜೋಡಿಸಿದೆ.

2018 ರ ವೇಳೆಗೆ 65 ನೀರು ಆರೋಗ್ಯ ಕೇಂದ್ರಗಳ ಮೂಲಕ ನಾಗರಿಕರಿಗೆ 96.5 ಕೋಟಿ ಲೀಟರ್ ಶುದ್ಧ ಕುಡಿಯುವ ನೀರನ್ನು ಪೂರೈಸುವ ಗುರಿ ಹಾಕಿಕೊಂಡಿದೆ. ಅದೇ ರೀತಿ 2033 ರ ವೇಳೆಗೆ 698 ಕೋಟಿ ಲೀಟರ್‌ನಷ್ಟು ನೀರನ್ನು ಪೂರೈಸಲು ಉದ್ದೇಶಿಸಿದೆ.

ಇಂದು ವಿಶ್ವ ಜಲ ದಿನದ ಅಂಗವಾಗಿ ಟಾಟಾ ಟ್ರಸ್ಟ್ಸ್‌ಜಲಧಾರ ಫೌಂಡೇಶನ್‌ ಜತೆ ಸೇರಿ ಬೆಂಗಳೂರಿನಲ್ಲಿ 15 ನೀರುಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವ ಘೋಷಣೆ ಮಾಡಿತು. ಇದರ ಜತೆಗೆ ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಹಲವು ಭಾಗಗಳಲ್ಲಿ 50 ನೀರು ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಗುರಿ ಹೊಂದಿದೆ.[ಕುಡಿಯುವ ನೀರಿಗಾಗಿ 3ನೇ ಮಹಾಯುದ್ಧ ಬೇಕೆ?]

WaterHealth Centre in Bengaluru

ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪ್ರಕಾರ, ಉತ್ತರ ಕರ್ನಾಟಕದ 4,000 ಕ್ಕೂ ಅಧಿಕ ಹಳ್ಳಿಗಳು ಮತ್ತು 38 ಪಟ್ಟಣಗಳ ನೀರು ನೈಟ್ರೇಟ್ ಮತ್ತು ಫ್ಲೋರೈಡ್‌ನಿಂದ ಕಲುಷಿತಗೊಂಡಿದೆ. [ಮಳೆನೀರು ಕೊಯ್ಲು ಕುರಿತು ಶ್ರೀನಿಧಿ ಡಿಎಸ್ ಅವರ ಅಂಕಣ ಬರಹ]

ಈ ಹಳ್ಳಿಗಳಲ್ಲಿ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಇದ್ದಾಗ್ಯೂ ಅವುಗಳ ನಿರ್ವಹಣೆ ಸರಿಇಲ್ಲದಿರುವುದು ಮತ್ತು ಆ ನೀರನ್ನು ಸರಿಯಾದರೀತಿಯಲ್ಲಿ ಸಂಸ್ಕರಿಸಿ ಶುದ್ಧೀಕರಿಸದಿರುವುದುಕಂಡು ಬರುತ್ತದೆ. ಇದರ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಬಹುದೂರದವರೆಗೆ ಹೋಗಿ ಕುಡಿಯುವ ನೀರನ್ನುತರಬೇಕಾದ ಪರಿಸ್ಥಿತಿ ಇದೆ.

ಬೆಂಗಳೂರಿನಲ್ಲೂ ಅಂತರ್ಜಲದಲ್ಲಿ ಫ್ಲೋರೈಡ್‌ನ ಪ್ರಮಾಣ ಹೆಚ್ಚಾಗಿದೆಯಲ್ಲದೇ ಟೋಟಲ್‌ಡಿಸಾಲ್ವ್‌ಡ್ ಸಾಲಿಡ್ಸ್ ಪ್ರಮಾಣವೂ ಅಧಿಕವಾಗಿದೆ. ನಗರ ಪ್ರದೇಶದ ಕೊಳಗೇರಿಗಳು ಮತ್ತು ಅರೆ ನಗರ ಪ್ರದೇಶದ ಕೊಳಗೇರಿಗಳಲ್ಲಿ ಕುಡಿಯುವ ನೀರು ಅತ್ಯಲ್ಪ ಪ್ರಮಾಣದಲ್ಲಿ ಸಿಗುತ್ತದೆ. ಬಹುತೇಕ ಪ್ರದೇಶಗಳಲ್ಲಿ ಶುದ್ಧಕುಡಿಯುವ ನೀರಿನ ವ್ಯವಸ್ಥೆ ಇಲ್ಲದಂತಾಗಿದೆ. [ಬರಿದಾದ ಬೆಂಗಳೂರು ಅಂತರ್ಜಲ, 1000ಅಡಿ ಆಳದಲ್ಲೂ ಹನಿ ನೀರಿಲ್ಲ]

ಈ ಹಿನ್ನೆಲೆಯಲ್ಲಿ ನಗರ ಮತ್ತುಗ್ರಾಮಾಂತರ ಪ್ರದೇಶಗಳಲ್ಲಿ ಶುದ್ಧಕುಡಿಯುವ ನೀರು ಪೂರೈಕೆ ವ್ಯವಸ್ಥೆ ಜರೂರಾಗಿ ಆಗಬೇಕಿದೆ. ಈ ಮೂಲಕ ನೀರಿನಿಂದ ಎದುರಾಗಬಹುದಾದ ರೋಗ ರುಜಿನಗಳಿಂದ ಇಲ್ಲಿನಜನರನ್ನು ಪಾರು ಮಾಡಬೇಕಿದೆ.

ಜಲಧಾರ ಫೌಂಡೇಶನ್ ನಡೆಸಿದ ಸಮೀಕ್ಷೆ : ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬಹುತೇಕ ನಾಗರಿಕರಿಗೆ ನ್ಯಾಯವಾದ ಮತ್ತುಕೈಗೆಟುಕುವದರದಲ್ಲಿಕುಡಿಯುವ ನೀರು ಲಭ್ಯವಾಗುತ್ತಿಲ್ಲ.[ನಗರದಲ್ಲಿ ಇನ್ನೂ ಹೆಚ್ಚಾಗಲಿ ಮಳೆ ಸುಗ್ಗಿ ಕೇಂದ್ರ]

ಈ ಸಮಸ್ಯೆಗಳನ್ನು ಪರಿಹರಿಸಲೆಂದೇ ಟಾಟಾ ಟ್ರಸ್ಟ್ಸ್‌ಟಾಟಾ ವಾಟರ್ ಮಿಶನ್ ಮತ್ತು ಜಲಧಾರ ಫೌಂಡೇಶನ್ ಮೂಲಕ ವಾಟರ್ ಹೆಲ್ತ್ ಸೆಂಟರ್‌ಗಳನ್ನು ಆರಂಭಿಸಿ ನಾಗರಿಕರಿಗೆ ಸಬ್ಸಿಡಿ ಸಹಿತದರದಲ್ಲಿ ಶುದ್ಧಕುಡಿಯುವ ನೀರನ್ನು ಪೂರೈಸಲು ಮುಂದಾಗಿದೆ. ಈ ಉಪಕ್ರಮದ ಮೊದಲ ವಾಟರ್ ಹೆಲ್ತ್ ಸೆಂಟರ್ ಬೆಂಗಳೂರಿನ ಗಾಂಧಿನಗರದಲ್ಲಿ ಆರಂಭವಾಗಿದೆ.

ಕರ್ನಾಟಕ, ಜಾರ್ಖಂಡ್, ಆಂಧ್ರಪ್ರದೇಶ, ತೆಲಂಗಾಣ, ನಾಗಾಲ್ಯಾಂಡ್, ಉತ್ತರಖಂಡ, ಗುಜರಾತ್ ಮತ್ತು ಒರಿಸ್ಸಾ ರಾಜ್ಯಗಳ ಸುಮಾರು ೧೫ ಲಕ್ಷಜನರಿಗೆ ಶುದ್ಧಕುಡಿಯುವ ನೀರನ್ನು ಈ ಮಿಶನ್ ಮೂಲಕ ಪೂರೈಕೆ ಮಾಡಲಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Please Wait while comments are loading...