ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಸೀರ್ ಮೀನು ಸಂರಕ್ಷಣೆಗೆ ಟಾಟಾ 'ಪವರ್'

By Mahesh
|
Google Oneindia Kannada News

ಬೆಂಗಳೂರು, ಮೇ.17: ಅಳಿವಿನಂಚಿನಲ್ಲಿರುವ ಮಹಸೀರ್ ಪ್ರಭೇದದ ಮೀನುಗಳನ್ನು ಸಂರಕ್ಷಿಸಲು ದೇಶದ ಅತಿ ದೊಡ್ಡ ಪವರ್ ಕಂಪನಿಯಾದ ಟಾಟಾ ಪವರ್ ದೇಶಾದ್ಯಂತ 'ಆಕ್ಟ್ ಫಾರ್ ಮಹಸೀರ್' ಎಂಬ ಸುಸ್ಥಿರ ಸಂರಕ್ಷಣಾ ಯೋಜನೆಯನ್ನು ಇತ್ತೀಚೆಗೆ ಆರಂಭಿಸಿದೆ. 'ಆಕ್ಟ್ ಫಾರ್ ಮಹಸೀರ್' ಯೋಜನೆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ದಿವಂಗತ ಪೂರ್ಣಚಂದ್ರ ತೇಜಸ್ವಿ ಅವರ ಜುಗಾರಿ ಕ್ರಾಸ್ ಕಾದಂಬರಿ ಓದಿದವರಿಗೆ ಮಹಸೀರ್ ಮೀನುಗಳು ಬಗ್ಗೆ ನೆನಪಿರುತ್ತದೆ. ಈ ವಿಶಿಷ್ಟ ಪ್ರಬೇಧ ಉಳಿಸಲು ಟಾಟಾ ಕಳೆದ 6 ದಶಕಗಳಿಂದ ಯೋಜನೆ ರೂಪಿಸಿಕೊಂಡು ಬಂದಿದೆ. ಈಗ ಇದು ರಾಷ್ಟ್ರವ್ಯಾಪ್ತಿ ಆಂದೋಲನವಾಗಿ ಬೆಳೆಯುತ್ತಿದೆ.

'ಪರಿಸರ ಕಾಳಜಿ' ಮತ್ತು 'ಸಮುದಾಯ ಕಾಳಜಿ' ಯಲ್ಲಿ ನಂಬಿಕೆಯಿರಿಸಿರುವ ಕಂಪೆನಿಯು ಮಹಸೀರ್ ಪ್ರಭೇದವನ್ನು ಸಂರಕ್ಷಿಸಲು ಮುಂದಾಗಿದೆ.

'ಆಕ್ಟ್ ಫಾರ್ ಮಹಸೀರ್' ಉದ್ದೇಶ: ಈ ಯೋಜನೆಯ ಮೂಲಕ ಈ ಪ್ರಭೇದದ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಿ ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ಸಂರಕ್ಷಣಾ ಕಾರ್ಯವನ್ನು ಕೈಗೊಳ್ಳುವುದು ಕಂಪೆನಿ ಉದ್ದೇಶ.

Act for Mahseer' conservation campaign

* ಜನರಲ್ಲಿ ಜಾಗೃತಿ ಮೂಡಿಸುವುದು, ಅವರನ್ನು ತೊಡಗಿಸಿಕೊಳ್ಳುವುದು ಮತ್ತು ಮಹಸೀರ್ ಪ್ರಿಯರನ್ನು ಸಶಕ್ತಗೊಳಿಸುವುದು ಎಂಬ ಮೂರು ರೀತಿಯ ಕಾರ್ಯಕ್ರಮಗಳ ಮೂಲಕ ಈ ಯೋಜನೆಯನ್ನು ಕಾರ್ಯಗತಗೊಳಿಸಲು ತೀರ್ಮಾನಿಸಲಾಗಿದೆ.

* ಜಾಗೃತಿ ಮೂಡಿಸುವ ಹಂತದಲ್ಲಿ ಮಹಸೀರ್ ಗಳ ಕುರಿತು ಮೈಕ್ರೋಸೈಟ್ ಆರಂಭಿಸಲಾಗುವುದು ಮತ್ತು ಮಹಸೀರ್ ಪ್ರವಾಸಿ ಕಥನಗಳ ಸರಣಿಯನ್ನು ಯೋಜಿಸಲಾಗಿದೆ.
* ಜನರು ಪಾಲ್ಗೊಳ್ಳುವಂತೆ ಮಾಡಲು ಇಂಟರಾಕ್ಟಿವ್ ಚಟುವಟಿಕೆಗಳು ಉದಾಹರಣೆಗೆ ಗೇಮಿಂಗ್ ಅಪ್ಲಿಕೇಶನ್ ಮತ್ತು ಮಹಸೀರ್ ಸಂರಕ್ಷಣಾ ದಿನಾಚರಣೆಯನ್ನು ಆಚರಿಸಲು ಉದ್ದೇಶಿಸಲಾಗಿದೆ.
* ಈ ಕಾರ್ಯದಲ್ಲಿ ಆಸಕ್ತಿ ಇರುವವರನ್ನು ಬಲಪಡಿಸಲು ದೇಣಿಗೆ ಸಂಗ್ರಹಣೆ, ಆವಾಸಸ್ಥಾನ ದತ್ತು ಪಡೆಯುವುದು ಮತ್ತು ಜಾಗೃತಿ ಜಾಥಾಗಳನ್ನು ಹಮ್ಮಿಕೊಳ್ಳಲಾಗುವುದು.
* ಅಳಿವಿನಂಚಿನಲ್ಲಿರುವ ಈ ಪ್ರಭೇದವನ್ನು ಸಂರಕ್ಷಿಸುವ ಈ ಕಾರ್ಯದಲ್ಲಿ ಟಾಟಾ ಪವರ್ ನ ಉದ್ಯೊಗಿಗಳು, ಗ್ರಾಹಕರು ಮತ್ತು ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ.

ಮಹಸೀರ್ ಸಂರಕ್ಷಣಾ ಅಭಿಯಾನ ಆರಂಭಗೊಂಡಿದ್ದು ಹೇಗೆ?: ಮಹಸೀರ್ ಮೀನುಗಳ ಸಂತತಿಯು ಗಾಬರಿ ಹುಟ್ಟಿಸುವ ರೀತಿಯಲ್ಲಿ ಕಡಿಮೆಯಾಗುತ್ತಿರುವುದನ್ನು ಗಮನಿಸಿದ ಟಾಟಾ ಪವರ್ 1975 ರಲ್ಲಿ ಮಹಸೀರ್ ಸಂರಕ್ಷಣಾ ಯೊಜನೆಯನ್ನು ಆರಂಭಿಸಿತು

ತನ್ನ ಕೆರೆ ಪರಿಸರಗಳ ಪುನರುಜ್ಜೀವನ ಮತ್ತು ಅಭಿವೃದ್ಧಿ ಯೋಜನೆಯ ಭಾಗವಾಗಿ ಲೋನಾವಳದಲ್ಲಿ ಮಹಸೀರ್ ತಳಿ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಿತು. ಇಲ್ಲಿಯರೆಗೆ ಕಂಪೆನಿಯು 10 ಮಿಲಿಯನ್ ಗೂ ಹೆಚ್ಚು ಮಹಸೀರ್ ಮೀನುಗಳನ್ನು ಉತ್ಪಾದಿಸಿ ದೇಶಾದ್ಯಂತ ಇರುವ ನೀರಿನ ಮೂಲಗಳಲ್ಲಿ ಮರುಹಂಚಿಕೆ ಮಾಡಿದೆ.

Act for Mahseer' conservation campaign

ಟಾಟಾ ಪವರ್ ಮಹಸೀರ್ ಸಂವರ್ಧನಾ ಕೇಂದ್ರ: ಕಳೆದ 42 ವರ್ಷಗಳಲ್ಲಿ 13 ಮಿಲಿಯನ್ ಗಿಂತಲೂ ಹೆಚ್ಚು ಮೊಟ್ಟೆಗಳನ್ನು ಫಲಿತಗೊಳಿಸಿ 7 ಮಿಲಿಯನ್ ಗಿಂತಲೂ ಅಧಿಕ ಮಹಸೀರ್ ಮರಿಗಳನ್ನು ಭಾರತ ಮತ್ತು ವಿಶ್ವದಾದ್ಯಂತ ಇರುವ ನೀರಿನ ಆಕರಗಳಿಗೆ ಸೇರಿಸಲಾಗಿದೆ.

42 ವರ್ಷಗಳಿಂದ ಮಹಸೀರ್ ತಳಿ ಸಂವರ್ಧನೆ ನಡೆಯುತ್ತಿದ್ದು, ಇದು ದೇಶದ ಅತ್ಯಂತ ಯಶಸ್ವಿ ತಳಿ ಅಭಿವೃದ್ಧಿ ಘಟಕವಾಗಿದೆ. ಟಾಟಾ ಪವರ್ ಸ್ಟ್ರೈಪಿಂಗ್ ಮತ್ತು ಕೃತಕ ಫಲೀಕರಣ ವಿಧಾನದಿಂದ ಎಲ್ಲಾ ಜಾತಿಯ ಮಹಸೀರ್ ಮೀನುಗಳನ್ನು ಅಭಿವೃದ್ಧಿಗೊಳಿಸುವ ತಂತ್ರಜ್ಞಾನವನ್ನು ಕಂಡುಹಿಡಿದಿದೆ.

ಮಹಸೀರ್ ಉಳಿವು ಯಾಕೆ ಅಗತ್ಯ

ಜಗತ್ತಿನ 20 ದೈತ್ಯಗಾತ್ರದ ಮಿನುಗಳಲ್ಲಿ ಒಂದೆನಿಸಿರುವ ಮಹಸೀರ್ ನ ಸಂರಕ್ಷಣಾ ಯೋಜನೆಯ ಯಶಸ್ಸಿನಿಂದಾಗಿ ಟಾಟಾ ಪವರ್ ಪರಿಸರ ಸಂರಕ್ಷಣೆಯ ತನ್ನ ಪ್ರಯತ್ನದಲ್ಲಿ ಒಂದು ಹೆಜ್ಜೆ ಮುಂದಿಟ್ಟಂತಾಗಿದೆ. ಮತ್ತು ಟಾಟಾ ಪವರ್ ಮಹಸೀರ್ ಸಂರಕ್ಷಣೆಯನ್ನು ಬಹಳ ಶೃದ್ಧೆಯಿಂದ ನಿರ್ವಹಿಸಿದೆ.

ಬಹಳ ವರ್ಷಗಳಿಂದ ಗಂಗಾ ಶುದ್ದಿಕರಣ ಚರ್ಚೆಯಲ್ಲಿದೆ. ಮಹಸೀರ್ ಅನ್ನು ಉಳಿಸುವ ಮೂಲಕ ಗಂಗೆಯನ್ನು ಕಾಪಾಡಬಹುದು ಮತ್ತು ಗಂಗೆಯನ್ನು ಶುದ್ದೀಕರಿಸುವ ಮೂಲಕ ಮಹಸೀರ್ ಅನ್ನು ರಕ್ಷಿಸಬಹುದಾಗಿದೆ. ಶುದ್ಧವಾಗಿರದ ನೀರಿನಲ್ಲಿ ಮೀನುಗಳನ್ನು ಬಿಡುವುದರಿಂದ ಏನನ್ನು ಸಾಧಿಸಿದಂತೆ ಆಗುವುದಿಲ್ಲ. ಇದರಲ್ಲಿ ಸ್ಥಳೀಯ ಜನರನ್ನು ಪರಿಗಣಿಸಬೇಕಾಗುತ್ತದೆ.

ಮಹಸೀರ್ ನ ರಕ್ಷಣೆಯು ಸಾಧ್ಯವಾಗದಿದ್ದರೆ ಅವರು ಬಹಳ ಮಟ್ಟಿಗೆ ಪ್ರವಾಸೋದ್ಯಮವನ್ನು ಕಳೆದುಕೊಳ್ಳುತ್ತಾರೆ ಎಂಬುದನ್ನು ಮನದಟ್ಟು ಮಾಡಿಸಬೇಕಿದೆ. ಪ್ರವಾಹಕ್ಕೆ ವಿರುದ್ಧವಾಗಿ ಈಜಲು ಪ್ರಸಿದ್ಧಿಯಾಗಿದ್ದ ಮಹಸೀರ್ ಈಗ ತನ್ನ ಉಳಿವಿಗಾಗಿ ಕೂಡಾ ಹೋರಾಡಬೇಕಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಟಾಟಾ ಪವರ್ : ಖಾಸಗಿ ವಿದ್ಯುತ್ ಉತ್ಪಾದನೆ ಕ್ಷೇತ್ರದ ಬೃಹತ್ ಸಂಸ್ಥೆಯಾಗಿರುವ ಟಾಟಾ ಪವರ್, 8750 ಮೆಗವ್ಯಾಟ್ ಉತ್ಪಾದನೆ ಸಾಮಥ್ರ್ಯ ಹೊಂದಿದೆ. ವಿದ್ಯುತ್ ವರ್ಗಾವಣೆ, ವಿತರಣೆ ಮತ್ತು ವ್ಯಾಪಾರದಲ್ಲಿ ಸಕ್ರಿಯವಾಗಿದೆ. ಖಾಸಗಿ ಸರಕಾರಿ ಸಹಭಾಗಿತ್ವದಲ್ಲಿ ಎಲ್ಲ ಬಗೆಯ ವಿದ್ಯುತ್ ಉತ್ಪಾದಿಸುತ್ತಿದೆ. ನಾನಾ ಸರಕಾರಿ ಸಂಸ್ಥೆಗಳೊಂದಿಗಿನ ಸಹಭಾಗಿತ್ವದಲ್ಲಿ ವಿದ್ಯುತ್ ವಹಿವಾಟು ನಡೆಸುತ್ತಿದೆ. ಯೋಜನೆ ಬಗ್ಗೆ ಹೆಚ್ಚಿನ ವಿವರ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ

English summary
Tata Power, an integrated power company, has launched ‘Act for Mahseer’, a sustainable programme focused at conservation of the Mahseer, an endangered species of fish. What is 'Act for Mahseer' here is an explanation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X