ಲೈಂಗಿಕ ದೌರ್ಜನ್ಯ ನಡೆದಿಲ್ಲ, ಪ್ರಕರಣ ಸಿಸಿಬಿಗೆ: ಪರಮೇಶ್ವರ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಫೆಬ್ರವರಿ, 04: ತಾಂಜೇನಿಯಾ ಯುವತಿ ಮೇಲಿನ ಹಲ್ಲೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಸಿಟಿ ಕ್ರೈಂ ಬ್ರ್ಯಾಂಚ್ (ಸಿಸಿಬಿ) ಗೆ ವರ್ಗಾಯಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪರಮೇಶ್ವರ, ಪ್ರಕರಣಕ್ಕೆ ಸಂಬಂಧಿಸಿ ಲೋಕೇಶ್ ಬಂಗಾರಿ, ವೆಂಕಟೇಶ್ ರಾಮಯ್ಯ, ಸಲೀಂ ಪಾಷಾ, ಭಾನುಪ್ರಕಾಶ್ ಮತ್ತು ರೆಹಮತುಲ್ಲಾ ಎಂಬುವರನ್ನು ಬಂಧಿಸಲಾಗಿದೆ ಎಂದು ಹೇಳಿದರು. ಯುವತಿಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿಲ್ಲ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆಯೂ ಸ್ಪಷ್ಟ ಉಲ್ಲೇಖಗಳಿಲ್ಲ ಎಂದು ಹೇಳಿದರು.[ಯುವತಿ ಮೇಲೆ ಹಲ್ಲೆ : ಸಿದ್ದರಾಮಯ್ಯಗೆ ಸುಷ್ಮಾ ಸ್ವರಾಜ್ ಕರೆ]

karnataka

ಸುರಕ್ಷತೆಗೆ ಆದ್ಯತೆ
ವಿದೇಶಿ ವಿದ್ಯಾರ್ಥಿಗಳು ಹೆಚ್ಚಿರುವ ಪ್ರದೇಶದಲ್ಲಿ ವಿಶೇಷ ಭದ್ರತೆ ನೀಡಲಾಗುತ್ತಿದೆ. ಇನ್ನು ಮುಂದೆ ಇಂಥ ಘಟನಾವಳಿಗೆ ಅವಕಾಶ ನೀಡುವುದಿಲ್ಲ. ವೀಸಾದ ಅವಧಿ ಮುಗಿದರೂ ಹಲವಾರು ವಿದ್ಯಾರ್ಥಿಗಳು ಬೆಂಗಳೂರಿನಲ್ಲಿಯೇ ವಾಸ ಮಾಡುತ್ತಿರುವ ಮಾಹಿತಿಯೂ ದೊರೆತಿದೆ ಎಂದು ಹೇಳಿದರು.[ವಿಡಿಯೋ : ತಾಂಜಾನಿಯಾ ಮಹಿಳೆ ಮೇಲೆ ದಾಳಿ]

ಕುಡಿದು ವಾಹನ ಚಾಲನೆ
ಘಟನೆಗೆ ಕುಡಿದು ವಾಹನ ಚಲಾಯಿಸಿದ್ದೇ ಮೂಲ ಕಾರಣ. ದಂಪತಿಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಇದಾದ ನಂತರ ಗಲಾಟೆ ಆರಂಭವಾಗಿದೆ. ಈ ಎಲ್ಲ ವಿವರಗಳನ್ನು ಪೊಲೀಸರು ದಾಖಲು ಮಾಡಿದ್ದಾರೆ ಎಂದು ತಿಳಿಸಿದರು.[ತಾಂಜೇನಿಯಾ ಯುವತಿ ಮೇಲೆ ಹಲ್ಲೆ ನಡೆದಿದ್ದು ಯಾಕೆ?]

ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿದ್ದು ಎಲ್ಲ ವಿವರಗಳನ್ನು ವಿದೇಶಾಂಗ ಇಲಾಖೆಗೆ ಕಳುಹಿಸಿಕೊಟ್ಟಿದ್ದೇವೆ. ಪ್ರಕರಣದಲ್ಲಿ ಭಾಗಿಯಾದ ಇನ್ನುಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Home Minister of Karnataka, Dr G Parameshwar said that the case relating to the assault on a Tanzanian student is being viewed seriously and the case has been transferred to the City Crime Branch.
Please Wait while comments are loading...